RESPONSIVE LEADERBOARD AD AREA
Film News

ಹರಿ ಸಂತೋಷ್ ನಿರ್ದೇಶನದಲ್ಲಿ ಬರಲಿದ್ದಾನೆ ‘ಬಿಚ್ಚುಗತ್ತಿ’ ಭರಮಣ್ಣ.!!

‘ವಿಕ್ಟರಿ-2’ ನಿರ್ದೇಶಕ ಹರಿ ಸಂತೋಷ್ ಇದೀಗ ಐತಿಹಾಸಿಕ ಚಿತ್ರವೊಂದನ್ನು ನಿರ್ದೇಶಿಸುವುದು ಖಚಿತವಾಗಿದೆ. ಬಿ ಎಲ್ ವೇಣುರವರ ‘ಬಿಚ್ಚುಗತ್ತಿ ಭರಮಣ್ಣ’ ಕಾದಂಬರಿ ಆಧಾರಿತ  ‘ಬಿಚ್ಚುಗತ್ತಿ (ಚಾಪ್ಟರ್-1) ದಳವಾಯಿ ದಂಗೆ’ ಎಂಬ ಐತಿಹಾಸಿಕ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಈ ಚಿತ್ರದಲ್ಲಿ ನವನಟ ರಾಜವರ್ಧನ್ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ನಾಯಕಿಯಾಗಿ ಹರಿಪ್ರಿಯ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಪ್ರತಿಭಾವಂತ ನಟಿ ಹರಿಪ್ರಿಯಾ ತಾವೊಬ್ಬ ವರ್ಸಟೈಲ್ ಕಲಾವಿದೆ ಎಂದು ನಿರೂಪಿಸಿದ್ದಾರೆ.

ಈಗಾಗಲೇ ಮುನಿರತ್ನ ‘ಕುರುಕ್ಷೇತ್ರ’ ಚಿತ್ರದಲ್ಲಿ  ಐತಿಹಾಸಿಕ ಪಾತ್ರವೊಂದರಲ್ಲಿ ನಟಿಸಿದ್ದು, ಈಗ ಮತ್ತೊಂದು ಇಂಥದೇ ಪಾತ್ರದಲ್ಲಿ ಅಭಿನಯಿಸುವ ಬಗ್ಗೆ ಒಂದೆರಡು ಸುತ್ತಿನ ಮಾತುಕತೆಯನ್ನು ನಿರ್ದೇಶಕ ಹರಿ ಸಂತೋಷ್, ಹರಿಪ್ರಿಯಾ ರೊಂದಿಗೆ ನಡೆಸಿದ್ದು, ಬಹುತೇಕ ಹರಿಪ್ರಿಯ ನಟಿಸುವುದು ಖಚಿತವಾಗಿದೆ.

ಚಿತ್ರಕ್ಕಾಗಿ ಯುವ ನಟ ರಾಜವರ್ಧನ್ ವಿಶೇಷ ತಯಾರಿ ನಡೆಸಿದ್ದು, ಗಡ್ಡದಾರಿ ಯಾಗಿದ್ದಾರೆ. ಚಿತ್ರದ ಉಳಿದ ತಾರಾಗಣದ ಆಯ್ಕೆ ಹಾಗೂ ತಂತ್ರಜ್ಞರ ಆಯ್ಕೆ ಕಾರ್ಯ ಮುಗಿದಿದೆ. ರಾಕ್ ಲೈನ್ ಸ್ಟುಡಿಯೋದಲ್ಲಿ ಐತಿಹಾಸಿಕ ಸನ್ನಿವೇಶಗಳನ್ನು ಬಿಂಬಿಸುವ ನಿರ್ಮಾಣದ ತಯಾರಿ ನಡೆದಿದ್ದು ಇದೇ ಡಿಸೆಂಬರ್ 10ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಕುರಿತು ಅಧಿಕೃತ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top