RESPONSIVE LEADERBOARD AD AREA
Film News

ಗೋಲ್ಡನ್ ಸ್ಟಾರ್ ‘ಆರೆಂಜ್’ ಈ ವಾರ ತೆರೆಗೆ…!

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ
ಮೂಡಿಬರುತ್ತಿರುವ ‘ಆರೆಂಜ್’ ‘ ಚಿತ್ರ ಇದೇ ಶುಕ್ರವಾರ (ಡಿಸೆಂಬರ್ 7) ತೆರೆ ಕಾಣಲಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಚಿತ್ರದ ಬಿಡುಗಡೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಲವ್ ಗುರು, ಗಾನ ಬಜಾನ, zooಮ್, ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರಶಾಂತ್ ರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಪಕ್ಕಾ ಮಾಸ್ ಎಂಟರ್ ಟೈನರ್ ಆಗಿದ್ದು ಚಿತ್ರದಲ್ಲಿ ನಾಯಕಿಯಾಗಿ, ‘ರಾಜಕುಮಾರ’ ಚಿತ್ರದಲ್ಲಿ ಪುನೀತ್ ಗೆ ಜೋಡಿಯಾಗಿದ್ದ ಪ್ರಿಯಾ ಆನಂದ್ ಈ ಚಿತ್ರದ ಮೂಲಕ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಪ್ರತಿಯೊಬ್ಬರಿಗೂ ಜೀವನದಲ್ಲಿ ‘ಆರೆಂಜ್’ ಇರಲೇಬೇಕು. ಆರೆಂಜ್, ಶೌರ್ಯ ಮತ್ತು ಹೊಳಪಿನ ಸಂಕೇತ. ಆರೆಂಜ್ ಚಿತ್ರದಲ್ಲಿ ಉತ್ತಮ ಕಥೆ ಮತ್ತು ಸದಭಿರುಚಿಯ ಹಾಸ್ಯ ಲವಲವಿಕೆಯ ಚಿತ್ರಕತೆ, ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ರಾಜ್ ಅವರ ನಿರ್ದೇಶನ ಗೋಲ್ಡನ್ ಸ್ಟಾರ್ ಅವರ ಅತ್ಯುತ್ತಮ ಅಭಿನಯ ಈ ಚಿತ್ರದಲ್ಲಿದೆ. ಈ ಚಿತ್ರದ ಮೂಲಕ ನನ್ನ ಚಿತ್ರ ಜೀವನ ಇನ್ನಷ್ಟು ಹೊಳಪು ಗೊಳ್ಳಲಿದೆ’ ಎನ್ನುವ ಆತ್ಮವಿಶ್ವಾಸದಲ್ಲಿದ್ದಾರೆ ಪ್ರಿಯಾ ಆನಂದ್.

ವಿದೇಶದಲ್ಲಿ ಹುಟ್ಟಿ ಬೆಳೆದ ಈ ಬೆಡಗಿಗೆ ಚಿತ್ರರಂಗದಲ್ಲಿ ಯಾರು ಗಾಡ್ ಫಾದರ್ ಇಲ್ಲವಂತೆ. ‘ಸತತ ಪ್ರಯತ್ನ ಮತ್ತು ನಟನೆಯ ಸಾಮರ್ಥ್ಯ ನನ್ನನ್ನು ಇಲ್ಲಿವರೆಗೆ ಕರೆತಂದಿದೆ, ಇನ್ನಷ್ಟು ವರ್ಷ ಹಲವು ಚಿತ್ರಗಳಲ್ಲಿ ಮಿಂಚಬೇಕೆಂಬ ಬಯಕೆಯೂ ಇದೆ. ‘ರಾಜಕುಮಾರ’ ಚಿತ್ರ ನನ್ನ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿತು. ಉತ್ತಮ ಕಥೆಯ ಚಿತ್ರಗಳಲ್ಲಿ ಹಾಗೂ ಸಾಧ್ಯವಾದಷ್ಟು ಮಹಿಳಾ ಕೇಂದ್ರಿತ ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬ ಆಕಾಂಕ್ಷೆ ಹೊಂದಿದ್ದೇನೆ ಎನ್ನುತ್ತಾರೆ’ ಚಿತ್ರದ ನಾಯಕಿ ಪ್ರಿಯಾ ಆನಂದ್.

ಸೌತ್ ಇಂಡಿಯನ್ ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ದೇವ್ ಗಿಲ್, ಚಿತ್ರದಲ್ಲಿ ಖಳ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸಂಗೀತ ತಮನ್, ಸಂತೋಷ್ ರೈ ಪತಾಜೆ ಛಾಯಾಗ್ರಹಣ ಇದೆ.

ಗಣೇಶ್ ಕಲರ್ ಫುಲ್ ಗೆಟಪ್ ಹಾಗೂ ಕೈದಿಯ ಲುಕ್ ನಲ್ಲಿ ಕಾಣಿಸಿಕೊಂಡ ಚಿತ್ರದ ಟೀಸರ್ ಈಗಾಗಲೇ ತೀವ್ರ ಕುತೂಹಲ ಕೆರಳಿಸಿದ್ದು, ಈ ಬಗ್ಗೆ ನಿರ್ದೇಶಕ ಪ್ರಶಾಂತ್ ರಾಜ್ ಅವರನ್ನು ಕೇಳಿದಾಗ, ‘ಚಿತ್ರದಲ್ಲಿ ಗಣೇಶ್ ಅವರು ಬಡವರಿಗೆ ಸಹಾಯ ಮಾಡುವ ರಾಬಿನ್ ಹುಡ್ ಶೈಲಿಯ ಪಾತ್ರದಲ್ಲಿ ನಟಿಸಿದ್ದು ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಚಿತ್ರ ಬಿಡುಗಡೆವರೆಗೆ ಕಾಯಬೇಕು’ ಎಂದು ಕಣ್ಣು ಮಿಟುಕಿಸುತ್ತಾರೆ.

ಈ ವಾರ ಬಿಡುಗಡೆಯಾಗುತ್ತಿರುವ ‘ಆರೆಂಜ್’ ಚಿತ್ರಕ್ಕೆ ಆಲ್ ದ ಬೆಸ್ಟ್ ಎನ್ನೋಣವೇ…?!

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top