RESPONSIVE LEADERBOARD AD AREA
Film News

ಯೋಗರಾಜ್ ಭಟ್ಟರ ‘ಗಾಳಿಪಟ-2’ ಗೆ ಹಾಡುಗಳ ರೆಕಾರ್ಡಿಂಗ್ ಶುರು..!

ಯೋಗರಾಜ್ ಭಟ್ ತಮ್ಮ ಗಾಳಿಪಟ ಚಿತ್ರದ ಸೀಕ್ವೆಲ್ ‘ಗಾಳಿಪಟ- 2’ ನಿರ್ದೇಶಿಸುತ್ತಿರುವ ಸುದ್ದಿ ನಿಮಗೆಲ್ಲಾ ತಿಳಿದಿದೆ. ಇದೀಗ ಅರ್ಜುನ್ ಜನ್ಯ ಅವರ ಸ್ಟುಡಿಯೋದಲ್ಲಿ ಈ ಚಿತ್ರದ ಹಾಡುಗಳ ರೆಕಾರ್ಡಿಂಗ್ ಪ್ರಾರಂಭವಾಗಿದೆ.

ಈ ಚಿತ್ರದಲ್ಲಿ ಶರಣ್, ಪವನ್ ಕುಮಾರ್ ಮತ್ತು ರಿಷಿ ಅಭಿನಯಿಸಲಿದ್ದಾರೆ. ‘ಗಾಳಿಪಟ’ದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಗಾಯಕ ರಾಜೇಶ್ ಕೃಷ್ಣನ್ ಮತ್ತು ದಿಗಂತ್ ನಟಿಸಿದ್ದರು.

ನಿರ್ದೇಶಕ ಯೋಗರಾಜ್ ಭಟ್, ಸಾಹಿತಿ ಜಯಂತ್ ಕಾಯ್ಕಿಣಿ ಹಾಗೂ ಗಾಯಕ ವಿಜಯ ಪ್ರಕಾಶ್ ಈ ಹಾಡುಗಳ ರೆಕಾರ್ಡಿಂಗ್ ನಲ್ಲಿ ಪಾಲ್ಗೊಂಡಿದ್ದರು. ಚಿತ್ರದಲ್ಲಿ ಒಟ್ಟು ಒಂಬತ್ತು ಹಾಡುಗಳಿದ್ದು, ಆರು ಪ್ರಮುಖ ಗೀತೆಗಳನ್ನು ರೆಕಾರ್ಡಿಂಗ್ ಮಾಡಲಾಗುತ್ತಿದೆ.

ಕನ್ನಡ ಮೂಲದ ಗುಜರಾತಿ ಚಿತ್ರಗಳ ನಿರ್ಮಾಪಕ ಮಹೇಶ್ ದಾನಣ್ಣನವರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಿತ್ರದ ನಾಯಕಿಯರಾಗಿ ಸೋನಲ್ ಮಂಟೇರಿಯೋ ಮತ್ತು ಶರ್ಮಿಳಾ ಮಾಂಡ್ರೆ ಆಯ್ಕೆಯಾಗಿದ್ದಾರೆ. ಶರಣ್ ಅವರಿಗೆ ನಾಯಕಿಯಾಗಿ ಒಬ್ಬರು ಚೀನಾ ಅಥವಾ ಕೊರಿಯಾದ ಚೆಲುವೆ ಇರುತ್ತಾರೆ ಎನ್ನುವ ಅಚ್ಚರಿ ಮಾಹಿತಿಯನ್ನು ಕೂಡ ಯೋಗರಾಜ್ ಭಟ್ ನೀಡಿದ್ದಾರೆ.

ಯೋಗರಾಜ್ ಭಟ್ ನಿರ್ದೇಶನದ ಸೂಪರ್ ಹಿಟ್ ಚಿತ್ರಗಳಲ್ಲೊಂದಾದ ‘ಗಾಳಿಪಟ’ ಚಿತ್ರ ಈಗಲೂ ತನ್ನ ಸುಮಧುರ ಗೀತೆಗಳು, ಲವಲವಿಕೆಯ ಅಭಿನಯ, ಹಾಸ್ಯಭರಿತ ಸನ್ನಿವೇಶಗಳು, ಕೊಡಚಾದ್ರಿಯ ಹಸಿರು ಮುಂತಾದ ಕಾರಣಗಳಿಂದ ಇಂದಿಗೂ ತಾಜಾತನ ಉಳಿಸಿಕೊಂಡಿರುವ ಚಿತ್ರ. ಗಾಳಿಪಟ-2 ಆ ಮಟ್ಟವನ್ನು ತಲುಪಲಿದೆಯೇ? ಕಾದುನೋಡಬೇಕು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top