RESPONSIVE LEADERBOARD AD AREA
Film News

ಶ್ರೀಮುರುಳಿ ‘ಭರಾಟೆ’ಗೆ ಪರೀಕ್ಷೆಯ ಅಡ್ಡಗಾಲು..!!

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಭರಾಟೆ’ ಚಿತ್ರದ ಚಿತ್ರೀಕರಣಕ್ಕೆ ‘ಪರೀಕ್ಷೆ’ ಅಡ್ಡಿಯಾಗಿದೆ..!! ಇದು ಯಾವ ಪರೀಕ್ಷೆ ಅಂದುಕೊಳ್ಳುತ್ತಿದ್ದೀರಾ..?! ಹೌದು..
ಇನ್ನೂ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಚಿತ್ರದ ನಾಯಕಿ ಶ್ರೀಲೀಲಾ, ಇದು ಪರೀಕ್ಷಾ ಸಮಯವಾದ್ದರಿಂದ ತಮ್ಮ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಹೀಗಾಗಿ ‘ಭರಾಟೆ’ಗೆ ತುಸು ತೊಂದರೆಯಾಗಿದೆ.

“ಶ್ರೀಲೀಲಾ ಅವರಿಂದಾಗಿ ಚಿತ್ರದ 60 ದಿನಗಳ ಚಿತ್ರೀಕರಣ ನಿಲುಗಡೆಯಾಗಿದೆ. ಶ್ರೀಲೀಲಾ ಅವರ ಪಾತ್ರದ ಹನ್ನೊಂದು ದಿನಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಆದರೆ ಅವರು ಎಲ್ಲಾ ಪ್ರಮುಖ ದೃಶ್ಯಗಳಲ್ಲಿ ಇರಬೇಕಾದ ಕಾರಣದಿಂದಾಗಿ ಅವರ ಅವಶ್ಯಕತೆ ಪ್ರತಿದಿನವೂ ಇರುತ್ತದೆ. ಹೀಗಾಗಿ ಚಿತ್ರದ ಚಿತ್ರೀಕರಣ ಅನಿವಾರ್ಯವಾಗಿ ತಡವಾಗಲಿದೆ”

” ಅವರಿಗೆ ಪರೀಕ್ಷೆಗಳು ಇರುವ ಕಾರಣ ಅವರಿರುವ ಭಾಗಗಳ ಚಿತ್ರೀಕರಣವನ್ನು ಮುಂದೆ ಹಾಕುವುದು ಅನಿವಾರ್ಯವಾಗಿದೆ. ಹಾಗಾಗಿ ಈಗ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣವನ್ನು ಪ್ರಾರಂಭಿಸಲಾಗಿದ್ದು, ಇದೇ ಸೋಮವಾರದಿಂದ ಬೆಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ” ಎಂದು ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ.

ರವಿವರ್ಮ ಸಾಹಸ ನಿರ್ದೇಶನವಿರುವ ಈ ಭಾಗಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗುತ್ತಿದೆ. ಚಿತ್ರದಲ್ಲಿ ಸಾಯಿಕುಮಾರ್, ರವಿಶಂಕರ್ ಮತ್ತು ಅಯ್ಯಪ್ಪ ಶರ್ಮಾ ಸಹೋದರರು ಒಟ್ಟಿಗೆ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಸುಪ್ರೀತ್ ನಿರ್ಮಿಸುತ್ತಿರುವ, ಈ ಚಿತ್ರಕ್ಕಾಗಿ ತಮಿಳಿನ ಅಜಿತ್ ಅಭಿನಯದ ‘ವಿವೇಗಂ’, ‘ವೀರಂ’ ಚಿತ್ರಗಳಿಗೆ ಸಾಹಸ ನಿರ್ದೇಶಿಸಿದ್ದ ಗಣೇಶ್, ಸಾಹಸ ನಿರ್ದೇಶನ ಮಾಡಿದ್ದಾರೆ. ರಂಗಾಯಣ ರಘು ಪ್ರಮುಖ ತಾರಾಗಣದಲ್ಲಿದ್ದಾರೆ. ಶ್ರೀಮುರಳಿ ಎದುರು ಖಳನಾಯಕರಾಗಿ ಪೆಟ್ರೋಲ್ ಪ್ರಸನ್ನ, ಮೈಕೋ ನಾಗರಾಜ್, ಕಲಾನಿಧಿ, ಪೆರಿಯಾವರ್ ಮುಂತಾದವರು ನಟಿಸುತ್ತಿದ್ದಾರೆ.

ತೆಲುಗಿನ ಹಿರಿಯ ನಟ ಸುಮನ್, ತಾರಾ ಅನುರಾಧ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ‘ಭರ್ಜರಿ’ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶಿಸಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಭುವನ್ ಗೌಡ ಛಾಯಾಗ್ರಹಣವಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top