RESPONSIVE LEADERBOARD AD AREA
Film News

ಮುದಗೊಳಿಸಿ, ರಂಜಿಸಿ ಮೆಚ್ಚಿಸಲು ಬರುತ್ತಿದೆ 'ಎಂದೆಂದಿಗೂ'

ಎಸ್ .ವಿ ಬಾಬು ನಿರ್ಮಾಣದ, ಇಮ್ರಾನ್ ಸಾರ್ದರಿಯ ನಿರ್ದೇಶನದ ‘ಎಂದೆಂದಿಗೂ’ ಚಿತ್ರ ಈ ವಾರ ತೆರೆಕಾಣುತ್ತಿದೆ.

ಕೃಷ್ಣಲೀಲಾ ಚಿತ್ರದಲ್ಲಿನ ಮನೋಜ್ಞ ಅಭಿನಯದಿಂದ ಚಿತ್ರರಸಿಕರ ಮನ ಗೆದ್ದ ಅಜಯ್ ರಾವ್ ಮತ್ತೊಮ್ಮೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಇವರಿಗೆ ಜೋಡಿಯಾಗಿರುವುದು Mrs ರಾಮಾಚಾರಿ ರಾಧಿಕಾ ಪಂಡಿತ್!

ಹಾಡುಗಳನ್ನು ಅದ್ದೂರಿಯಾಗಿ, ಮನಮೋಹಕವಾಗಿ ಕಟ್ಟಿಕೊಡುವುದರಲ್ಲಿ ನಿಸ್ಸಿಮರೆಂದು ಗುರುತಿಸಿಕೊಂಡಿರುವ ನೃತ್ಯ ನಿರ್ದೇಶಕ ಇಮ್ರಾನ್ ಸಾರ್ದರಿಯ ಈ ಚಿತ್ರದಿಂದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ‘ಒಲವೇ ಮಂದಾರ’ ಖ್ಯಾತಿಯ ಜಯತೀರ್ಥ ಈ ಚಿತ್ರದ ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಬಹುತೇಕ ಭಾಗ ಸ್ವೀಡನ್ ಲ್ಲಿ ಚಿತ್ರೀಕರಿಸಿರುವುದು ಚಿತ್ರದ ಇನ್ನೊಂದು ವಿಶೇಷ.

ಚಿತ್ರದ ಪೋಸ್ಟರ್ ಗಳು ಹಾಗೂ ಟ್ರೈಲರ್ ಚಿತ್ರವು ಸೊಗಸಾಗಿ ಮೂಡಿಬಂದಿರುವ ಸೂಚನೆಯನ್ನು ಕೊಟ್ಟಿವೆ. ಟ್ರೈಲರ್ ಚಿತ್ರದ ಕುತೂಹಲವನ್ನು ಹೆಚ್ಚಿಸಿದೆ. ಇದು ಮತ್ತೊಂದು ಮರ ಸುತ್ತುವ ಕಥೆಯೆಂದು ಭಾವಿಸುವವರಿಗೆ ಅಚ್ಚರಿ ಕಾದಿದೆ.

ಚಿತ್ರದಲ್ಲಿ ರಾಧಿಕಾ ಪಂಡಿತ್ ಪ್ರೇಯಸಿಯಾಗಿ ಅಷ್ಟೇ ಅಲ್ಲದೆ ಗಂಭೀರ ಪಾತ್ರವನ್ನೂ ಮಾಡಿರುವ ಸುಳಿವು ಕೊಟ್ಟಿದೆ. ಹಲವು ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದಿಂದ ಗಮನ ಸೆಳೆದ ಇವರು ಅದರಲ್ಲೂ ಮೊಗ್ಗಿನ ಮನಸು, ಕೃಷ್ಣನ್ ಲವ್ ಸ್ಟೋರಿ ಹಾಗೂ ಕಡ್ಡಿಪುಡಿ ಚಿತ್ರಗಳಲ್ಲಿನ ಅವರ ಪಾತ್ರಗಳು ಸಿನಿರಸಿಕರಲ್ಲಿ ಅಚ್ಚಳಿಯದೆ ಉಳಿದಿವೆ. ಆ ಸಾಲಿಗೆ ಸೇರುವ ಮತ್ತೊಂದು ಸವಾಲಿನ ಪಾತ್ರವನ್ನು ಇಲ್ಲಿ ನಿಭಾಯಿಸಿದ್ದಾರೆ. ಆಕ್ಟಿಂಗ್ ಕ್ವೀನ್ ರಾಧಿಕಾ ಪಂಡಿತ್ ಮತ್ತೊಮ್ಮೆ ಮೋಡಿ ಮಾಡಲು ಬರುತಿದ್ದಾರೆ

ಚಿತ್ರದ ಸುಮುಧುರ ಹಾಡುಗಳು ಹಾಗೂ ಅತೀಸುಂದರ, ಮನತಣಿಸುವ ಪೋಸ್ಟರ್ ಗಳು ಈಗಾಗಲೇ ಚಿತ್ರರಸಿಕರ ಗಮನ ಸೆಳೆದಿವೆ.

ಪೋಸ್ಟರ್ ಗಳಲ್ಲಿ ಅಜಯ್ ರಾವ್ ರಾಧಿಕಾ, ಈ ಚಂದದ ಜೋಡಿಯ ಹಾವ ಭಾವ, ಅವರ ಮೇಕಪ್, ಉಡುಪು, ಅವುಗಳನ್ನು ಸೆರೆಹಿಡಿದಿರುವ ರೀತಿ ಎಂಥವರನ್ನೂ ಮುದಗೊಳಿಸುತ್ತದೆ.

ಚಿತ್ರವನ್ನು ಸೊಗಸಾಗಿ ಮೂಡಿಬರಿಸುವಲ್ಲಿ ಇಮ್ರಾನ್ ಸಾರ್ದರಿಯ ಅವರಿಗೆ, ಅವರ ಕನಸಿಗೆ ಎಲ್ಲಾ ತಂತ್ರಜ್ಞರು ಸಾಥ್ ಕೊಟ್ಟಿರುವುದು ಗೋಚರಿಸುತ್ತಿದೆ.

ಚಂದದ ಜೋಡಿಯ ಪ್ರೇಮ ಕಥೆಯನ್ನು, ತಂತ್ರಜ್ಞರೆಲ್ಲರ ಕೈಚಳಕವನ್ನು ಕಣ್ತುಂಬಿಸಿಕೊಳ್ಳಿ.

ಇದೇ ಶುಕ್ರವಾರ ‘ಎಂದೆಂದಿಗೂ’ ನಿಮ್ಮ ಮುಂದೆ.

RESPONSIVE LEADERBOARD AD AREA
RESPONSIVE LEADERBOARD AD AREA
To Top