RESPONSIVE LEADERBOARD AD AREA
Film News

ರಜನಿಕಾಂತ್ ರ ‘ಪೆಟ್ಟ’ ಕನ್ನಡದಲ್ಲಿ ಬರಲಿದೆಯೇ..!!?

ರಜನಿಕಾಂತ್ ಅಭಿನಯದ ‘ಪೆಟ್ಟ’ ಚಿತ್ರ ಜನವರಿ 2019ರಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದು, ಅದರ ಕನ್ನಡ ಅವತರಣಿಕೆ (ಡಬ್ಬಿಂಗ್ ವರ್ಷನ್) ಅದೇ ದಿನ ಕರ್ನಾಟಕದೆಲ್ಲೆಡೆ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.

ಕಲಾನಿಧಿ ಮಾರನ್ ನಿರ್ಮಿಸಿರುವ ಈ ಚಿತ್ರವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ್ದಾರೆ. ಈಗಾಗಲೇ ಡಬ್ಬಿಂಗ್ ಕೆಲಸಗಳು ಪೂರ್ಣಗೊಂಡಿದ್ದು, ನಿರ್ಮಾಪಕರ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಅದು ನಿಜವಾದಲ್ಲಿ ಇದೇ ಮೊದಲ ಬಾರಿಗೆ ರಜನಿಕಾಂತ್ ಅಭಿನಯದ ಚಿತ್ರ, ಕನ್ನಡದಲ್ಲಿ ಅದೇ ದಿನ ನೋಡಲು ಸಿಗಲಿದೆ.

ಬಹಳಷ್ಟು ವರ್ಷಗಳಿಂದಲೂ ಡಬ್ಬಿಂಗ್ ಪರ ಮತ್ತು ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಕನ್ನಡದ ‘ಕೆಜಿಎಫ್’ ವಿವಿಧ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಿ ಯಶಸ್ಸು ಕಂಡಿದೆ. ಈ ಸಂದರ್ಭದಲ್ಲಿ ಬೇರೆ ಭಾಷೆಯ ಸಿನಿಮಾ ಗಳು ಕನ್ನಡದಲ್ಲಿ ಡಬ್ ಆಗಿ ಬರುತ್ತಿರುವುದು ಕುತೂಹಲ ಕೆರಳಿಸಿದೆ.

ಬಹಳ ವರ್ಷಗಳ ಹಿಂದೆ ‘ಫಾಸ್ಟ್ ಅಂಡ್ ಫ್ಯೂರಿಯಸ್ ಭಾಗ-8’ ಕನ್ನಡದಲ್ಲಿ ‘ವೇಗ ಮತ್ತು ಉದ್ವೇಗ’ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ‘ನಾನು ನನ್ನ ಪ್ರೀತಿ’ ಎಂಬ ಚಿತ್ರ, ಹಿಂದಿಯ ‘ಮೈ ಹಸ್ಬೆಂಡ್ಸ್ ವೈಫ್’ನ ಡಬ್.

ಕರ್ನಾಟಕ ಹೈಕೋರ್ಟ್, ಬೇರೆ ಭಾಷೆಯ ಚಿತ್ರಗಳ ಡಬ್ಬಿಂಗ್ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿತು. ಬಳಿಕ ತಮಿಳಿನ ‘ಎನ್ನಯಿ ಅರಿಂದಲ್’, ಕನ್ನಡದಲ್ಲಿ ‘ಸತ್ಯದೇವ್ ಐಪಿಎಸ್’ ಹೆಸರಿನಲ್ಲಿ ಮತ್ತು ‘ಆರಂಭಂ’, ‘ಧೀರ’ ಹೆಸರಿನಲ್ಲಿ ಬಿಡುಗಡೆಯಾಗಿದ್ದವು. 2018ರಲ್ಲಿ ತಮಿಳಿನ ಅಜಿತ್ ಅಭಿನಯದ ‘ವಿವೇಗಂ’ ಚಿತ್ರ ಕನ್ನಡದಲ್ಲಿ ‘ಕಮಾಂಡೋ’ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ವಿರೋಧದ ನಡುವೆ ಈ ಚಿತ್ರಗಳಿಗೆ ಕನ್ನಡ ಪ್ರೇಕ್ಷಕರಿಂದ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.

ಕನ್ನಡಿಗ ರಜನಿಕಾಂತ್ ತಮಿಳಿನಲ್ಲಿ ಸೂಪರ್ ಸ್ಟಾರ್. ಹೀಗಾಗಿ ಅವರ ಚಿತ್ರ ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿರುವುದರಿಂದ ಕನ್ನಡ ಪ್ರೇಕ್ಷಕ ಅದನ್ನು ಹೇಗೆ ಸ್ವೀಕರಿಸಲಿದ್ದಾನೆ..! ಕಾದು ನೋಡಬೇಕು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top