RESPONSIVE LEADERBOARD AD AREA
Film News

ಮಲೇಶಿಯಾದಲ್ಲಿ ಸಿಂಹಿಣಿಯೊಂದಿಗೆ ಹೆಜ್ಜೆ ಹಾಕಿದ ‘ಸಿಂಗ’…!!

ಚಿರಂಜೀವಿ ಸರ್ಜಾ ಮತ್ತು ಅದಿತಿ ಪ್ರಭುದೇವ ಹಾಡಿಗೆ ಹೆಜ್ಜೆ ಹಾಕುತ್ತಿರುವ ದೃಶ್ಯಗಳನ್ನು ಮಲೇಶ್ಯಾದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ‘ಸಿಂಗ’ ಚಿತ್ರಕ್ಕಾಗಿ ಈ ದೃಶ್ಯಗಳನ್ನು ನಿರ್ದೇಶಕ ವಿಜಯ್ ಕಿರಣ್ ಚಿತ್ರೀಕರಿಸಿದ್ದು, ಕೆಲವು ಫೋಟೋಗಳನ್ನು ಚಿತ್ರತಂಡ ಹಂಚಿಕೊಂಡಿದೆ.

ಈ ಹಾಡಿನ ಚಿತ್ರೀಕರಣದೊಂದಿಗೆ ‘ಸಿಂಗ’ ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳಲಿದ್ದು ಚಿತ್ರತಂಡ ಸ್ವದೇಶಕ್ಕೆ ಹಿಂತಿರುಗಲಿದೆ. ಇನ್ನು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶೀಘ್ರದಲ್ಲಿ ಪ್ರಾರಂಭವಾಗಲಿವೆ. ಇದೊಂದು ಕಮರ್ಷಿಯಲ್ ಎಂಟರ್ಟೈನರ್ ಆಗಿದ್ದು, ಉದಯ್ ಕೆ ಮೆಹ್ತಾ ಚಿತ್ರಕ್ಕೆ ಹಣ ಹೂಡಿದ್ದಾರೆ.

ಚಿತ್ರದಲ್ಲಿ ಖಳನಟನಾಗಿ ರವಿಶಂಕರ್ ಕಾಣಿಸಿಕೊಳ್ಳುತ್ತಿದ್ದು, ಹಿರಿಯ ನಟಿ ತಾರಾ ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ.

ಧರ್ಮವಿಶ್ ಸಂಗೀತ, ಹಾಗೂ ಕಿರಣ್ ಹಂಪಾಪುರ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ರವಿವರ್ಮ ಅವರ ಸಾಹಸ ನಿರ್ದೇಶನವಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top