RESPONSIVE LEADERBOARD AD AREA
Movie Reviews

ದಿIIಮಂಜುನಾಥನ ಮಂಜುನಾಥನ ಗೆಳೆಯರು – ನಿಮ್ಮನ್ನು ರಂಜಿಸಬಲ್ಲರು

ದಿವಂಗತ ಮಂಚುನಾಥನ ಗೆಳೆಯರು ಈ ಮುಂಚೆ ಎಣ್ಣೆ ಪಾರ್ಟಿ ಎಂಬ ಕಿರು ಚಿತ್ರವನ್ನು ನಿರ್ದೇಶಿಸಿದ ಅರುಣ್ ಅವರ ಚೊಚ್ಚಲ ಚಲನಚಿತ್ರ. ಚಿತ್ರದಲ್ಲಿ ನಟಿಸಿರುವ ಬಹುತೇಕ ನಟರು ಸಹ ಪರದೆಯ ಮೇಲೆ ಇದೇ ಮೊದಲ ಬಾರಿ ಕಾಣಿಸಿಕೊಳ್ಳುತ್ತಿರುವುದು. ಆದರೆ ನೋಡುಗರಿಗೆ ಇದು ಈ ತಂಡದ ಚೊಚ್ಚಲ ಚಿತ್ರ ಎಂದು ಒಂದು ಕ್ಷಣವೂ ಅನಿಸದ ಹಾಗೆ ಮೂಡಿ ಬಂದಿದೆ.

ಮಂಜುನಾಥ ಎಂಬಾತನ ಕೊಲೆ ಆಗಿದ್ದು, ಅನಿವಾರ್ಯ ಕಾರಣದಿಂದ ಇನ್ಸ್ಪೆಕ್ಟರ್ ಕೆಂಪಯ್ಯ ಅನ್ನೋ ಅಧಿಕಾರಿ ಕೂಡಲೇ ಅಪರಾಧಿಯನ್ನು ಬಂಧಿಸಬೇಕಾದ ಸನ್ನಿವೇಶದಿಂದ ಚಿತ್ರ ಶುರುವಾಗುತ್ತದೆ. ಅಪರಾಧಿಯ ಹುಡುಕಾಟದಲ್ಲಿ ದಿವಂಗತ ಮಂಜುನಾಥನ ಐವರು ಗೆಳೆಯರು ಪೊಲೀಸ್ ಸ್ಟೇಷನ್ ನಲ್ಲಿ ಭೇಟಿ ಆಗುತ್ತಾರೆ. ಪ್ರತಿಯೊಬ್ಬ ಗೆಳೆಯನೂ ಅವನ ಮತ್ತು ಮಂಜುನಾಥನ ಸಂಬಂಧ, ಗೆಳೆತನ ಮತ್ತು ಶತ್ರುತ್ವದ ಕಥೆಯನ್ನು ಹೇಳುತ್ತಾರೆ.

ಅವರ ಗೆಳೆತನದ ಸನ್ನಿವೇಶಗಳು ಪ್ರೇಕ್ಷಕರನ್ನು ಪ್ರತಿ ನಿಮಿಷವೂ ನಗಿಸುತ್ತಾ, ಅಲ್ಲಲ್ಲಿ ಆಲೋಚಿಸಲು ಒತ್ತಾಯ ಮಾಡಿಸುತ್ತಾ ಸಾಗುತ್ತವೆ. “ಕಿರೀಕ್ ಪಾರ್ಟಿ” ಚಿತ್ರದಲ್ಲಿ ಕಾಲೇಜು ಹುಡುಗರ ರಂಪ, ರಗಳೆ, ಸಮಸ್ಯೆಗಳನ್ನು ಹೇಗೆ ತೋರಿಸಲ್ಪಟ್ಟಿತ್ತೋ, ಇಲ್ಲಿ ಓದು ಮುಗಿಸಿದ ನಂತರ ಉದ್ಯೋಗದ ಹುಡುಕಾಟದಲ್ಲಿರುವ ಹುಡುಗರು ಎದುರಿಸುವ ಸನ್ನಿವೇಶಗಳನ್ನು ಬಹಳ ಮನೋರಂಜನಾತ್ಮಕವಾಗಿ ಹೆಣೆಯುವುದರಲ್ಲಿ ಅರುಣ್ ಸಫಲರಾಗಿದ್ದಾರೆ. ಹಾಸ್ಯದ ಜೊತೆಗೆ ಅಲ್ಲಲ್ಲಿ ಕೆಲವು ಸೂಕ್ತವಾದ, ಪ್ರಸ್ತುತ ಸಮಸ್ಯೆಗಳ ಬಗ್ಗೆಯೂ ಪ್ರಾಮುಖ್ಯತೆ ನೀಡಲಾಗಿದೆ. ಮುಖ್ಯ ಪಾತ್ರಧಾರಿಗಳಾದ ಮಂಜುನಾಥನ ಐವರು ಗೆಳೆಯರ ಪಾತ್ರ ನಿರ್ವಹಿಸಿರುವ ನಟರಲ್ಲದೆ ಇನ್ನಿತರ ಪಾತ್ರಧಾರಿಗಳೂ ಸಹ ಬಹಳ ನುರಿತ ನಟನೆಯನ್ನು ಪ್ರದರ್ಶಿಸಿದ್ದಾರೆ.

ಚಿತ್ರಮಂದಿರದಲ್ಲಿ ಕ್ಷಣ ಕ್ಷಣಕ್ಕೂ ಕೇಳಿಬಂದ ಪ್ರೇಕ್ಷಕರ ನಗು, ಚಪ್ಪಾಳೆ, ಶಿಳ್ಳೆಗಳು ಈ ಚಿತ್ರದ ಗೆಲುವೆಂದೇ ಹೇಳಬೇಕು. ಇತ್ತೀಚೆಗೆ ಬಂದಿರುವ ನೂತನ, ಸೃಜನಶೀಲ, ಯಶಸ್ವಿ ಕನ್ನಡ ಚಿತ್ರಗಳ ಸಾಲಿಗೆ ಸೇರುವ ಎಲ್ಲಾ ಅರ್ಹತೆಗಳು “ದಿವಂಗತ ಮಂಜುನಾಥನ ಗೆಳೆಯರು” ಚಿತ್ರದಲ್ಲಿದೆ ಎಂದರೆ ಅದು ಅತಿಶಯೋಕ್ತಿಯಲ್ಲ.

ರೇಟಿಂಗ್ – 3.5/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top