RESPONSIVE LEADERBOARD AD AREA
Film News

‘ಯುವರತ್ನ’ ನ ಎದುರು ಖಳನಾಯಕನಾಗಿ ಡಾಲಿ ಧನಂಜಯ್..!!

ಕನ್ನಡದ ಪ್ರತಿಭಾವಂತ ಯುವ ನಟ ಧನಂಜಯ್, ಟಗರು ಚಿತ್ರದಲ್ಲಿ ‘ಡಾಲಿ’ಯಾಗಿ ಜನಮನ ಗೆದ್ದಿದ್ದರು. ಸ್ವತಃ ರಾಮ್ ಗೋಪಾಲ್ ವರ್ಮಾ ಬೆಂಗಳೂರಿಗೆ ಬಂದು ‘ಟಗರು’ ಚಿತ್ರವನ್ನು ನೋಡಿ, ಧನಂಜಯ್ ಅಭಿನಯವನ್ನು ಮೆಚ್ಚಿದ್ದರು. ಅದರ ಪರಿಣಾಮವೋ ಎಂಬಂತೆ RGVಯ ‘ಭೈರವಗೀತ’ ಚಿತ್ರದಲ್ಲಿ ಧನಂಜಯ್ ಅಭಿನಯಿಸಿದ್ದರು. ಇದೀಗ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಚಿತ್ರದಲ್ಲಿ ಖಳನಟನಾಗಿ ಮತ್ತೊಮ್ಮೆ ಮಿಂಚಲಿದ್ದಾರೆ.

ಮಾರ್ಚ್ ಒಂದರಂದು ಬಿಡುಗಡೆಯಾಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಚಿತ್ರದಲ್ಲಿ ‘ಮಿಠಾಯಿ ಸೂರಿ’ ಎಂಬ ಜಬರ್ದಸ್ತ್ ಖಳನಟನ ಪಾತ್ರದಲ್ಲಿ ನಟಿಸಿದ್ದು, ಚಿತ್ರದ ಟ್ರೈಲರ್ ನಲ್ಲಿ ಗರ್ಜಿಸುತ್ತಿರುವ ಈ ಹುಡುಗ, ‘ಯುವರತ್ನ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ.

ಸಂತೋಷ್ ಆನಂದ್ ರಾಮ್ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣವನ್ನು ಫೆಬ್ರವರಿ 14ರಂದು ಮಂಗಳೂರಿನಲ್ಲಿ ಪ್ರಾರಂಭವಾಗಲಿದ್ದು, ಈಗಾಗಲೇ ಚಿತ್ರದ ತಾರಾಗಣವನ್ನು ಆಯ್ಕೆ ಮಾಡಲಾಗಿದೆ. ಡಾಲಿ ಧನಂಜಯ್ ಸೇರ್ಪಡೆಯನ್ನು ಇನ್ನಷ್ಟೇ ಅಧಿಕೃತವಾಗಿ ಘೋಷಿಸಿ ಬೇಕಾಗಿದೆ.

ಇದಲ್ಲದೆ ಧ್ರುವ ಸರ್ಜಾ ಅಭಿನಯಿಸುತ್ತಿರುವ ‘ಪೊಗರು’ ಚಿತ್ರದಲ್ಲಿ ಜಗಪತಿ ಬಾಬು ಖಳನಾಯಕನಾಗಿ ನಟಿಸುತ್ತಿದ್ದಾರೆ. ಇವರ ಮಗನ ಪಾತ್ರದಲ್ಲಿ, ಮತ್ತೊಬ್ಬ ಖಳ ನಾಯಕನಾಗಿ ‘ಧನಂಜಯ್’ ಅಭಿನಯಿಸುತ್ತಿದ್ದಾರೆ. ಹೀಗೆ ನಾಯಕ ಮತ್ತು ಖಳನಾಯಕನಾಗಿ ಭರ್ಜರಿ ಅವಕಾಶಗಳನ್ನು ಪಡೆಯುತ್ತಿರುವ ಧನಂಜಯ್ ಗೆ ಈಗ ಬಿಡುವಿಲ್ಲದಷ್ಟು ಕೆಲಸ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top