RESPONSIVE LEADERBOARD AD AREA
Film News

ಧನಂಜಯ್ ಮತ್ತೆ ‘ಡಾಲಿ’ ಆಗುತ್ತಿದ್ದಾರೆ..!!

‘ಭೈರವ ಗೀತ’ ಚಿತ್ರದ ಬಳಿಕ ಧನಂಜಯ್, ‘ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ ನಟಿಸುತ್ತಿರುವುದು ನಮಗೆಲ್ಲ ತಿಳಿದಿದೆ. ಈಗ ಹೊಸ ಚಿತ್ರವೊಂದು ಸೆಟ್ಟೇರಿದ್ದು, ಮತ್ತೊಮ್ಮೆ ಧನಂಜಯ್ ‘ಡಾಲಿ’ ಆಗಿ ಮಿಂಚಲಿದ್ದಾರೆ.

‘ಟಗರು’ ಚಿತ್ರದಲ್ಲಿ ಶಿವಣ್ಣನ ಎದುರು ಖಳನಾಯಕನಾಗಿ ಖದರ್ ತೋರಿಸಿದ್ದ ಧನಂಜಯ್, ಆ ಬಳಿಕ ‘ಡಾಲಿ ಧನಂಜಯ್’ ಎಂದೆ ಮನೆ ಮಾತಾಗಿದ್ದರು. ಇದೀಗ ‘ಗಣಪ’ ಚಿತ್ರದ ಖ್ಯಾತಿಯ ನಿರ್ದೇಶಕ, ಪ್ರಭು ಶ್ರೀನಿವಾಸ್, ‘ಟಗರು’ ಚಿತ್ರದಲ್ಲಿ ಧನಂಜಯ್ ಅವರ ಪಾತ್ರದ ಹೆಸರು ‘ಡಾಲಿ’ಯನ್ನೇ ತಮ್ಮ ಚಿತ್ರಕ್ಕೆ ಇಟ್ಟುಕೊಂಡು, ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

‘ಡಾಲಿ’ ಚಿತ್ರದಲ್ಲಿ ಧನಂಜಯ್, ನಾಯಕ ಹಾಗೂ ಖಳನಾಯಕನ ಛಾಯೆಯುಳ್ಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ‘ಎರಡನೇ ಸಲ’ ಚಿತ್ರದ ನಿರ್ಮಾಪಕ ಯೋಗೀಶ್ ನಾರಾಯಣ್ ನಿರ್ಮಾಣ ಮಾಡುತ್ತಿದ್ದಾರೆ.

ಸೂರಿಯವರ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇದು ಪೂರ್ಣಗೊಂಡ ಬಳಿಕ ಧನಂಜಯ್ ‘ಡಾಲಿ’ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಬರುವ ಫೆಬ್ರವರಿ 12 ರಂದು ಚಿತ್ರ ಅಧಿಕೃತವಾಗಿ ಘೋಷಣೆಯಾಗಲಿದ್ದು, ಈಗಾಗಲೇ ಚಿತ್ರದ ಪ್ರಿಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top