RESPONSIVE LEADERBOARD AD AREA
Film News

‘ಟಕ್ಕರ್’ ಕೊಡಲು ಚಾಲೆಂಜಿಂಗ್ ಸ್ಟಾರ್ ಅಳಿಯ ಸಿದ್ಧ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಳಿಯ ಮನೋಜ್ ಮನು ನಟಿಸುತ್ತಿರುವ ‘ಟಕ್ಕರ್’ ಚಿತ್ರದ ಮೊದಲ ಟೀಸರ್ ಅನ್ನು ದಿನಕರ್ ತೂಗುದೀಪ ಬಿಡುಗಡೆ ಮಾಡಿದ್ದಾರೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಇದೊಂದು ಪಕ್ಕಾ ಆಕ್ಷನ್ ಪ್ಯಾಕ್ಡ್ ಡ್ರಾಮಾ ಆಗಿದ್ದು ಟೀಸರ್ ಎಲ್ಲರ ಗಮನ ಸೆಳೆಯುತ್ತಿದೆ. ಸೈಬರ್ ಕ್ರೈಂ ಕುರಿತಾದ ಚಿತ್ರ ಇದಾಗಿದ್ದು ಸಾಕಷ್ಟು ಇಂಟರೆಸ್ಟಿಂಗ್ ಕಥೆಯನ್ನು ಹೊಂದಿದೆ ಎನ್ನಲಾಗಿದೆ. ನಾಗೇಶ್ ಕೋಗಿಲು ತಮ್ಮ ಎಸ್ಎಲ್ಎನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ನಾಯಕ ಮನೋಜ್, ದರ್ಶನ್ ಅವರಂತೆಯೇ ಆರಡಿ ಎತ್ತರದ ಸ್ಪುರದ್ರೂಪಿ ಯುವಕನಾಗಿದ್ದು ಆಕರ್ಷಕ ಮೈ ಕಟ್ಟು ಹೊಂದಿದ್ದಾರೆ. ರಂಜಿನಿ ರಾಘವನ್ ಮನೋಜ್ ಗೆ ನಾಯಕಿಯಾಗಿ ನಟಿಸುತ್ತಿದ್ದು, ಹಿರಿಯ ನಟರಾದ ಶ್ರೀಧರ್, ಸುಮಿತ್ರ, ಶಂಕರ್ ಅಶ್ವತ್ಥ್ ಮೊದಲಾದವರು ತಾರಾಗಣದಲ್ಲಿದ್ದಾರೆ.

ಮಣಿಕಾಂತ್ ಕದ್ರಿ ಸಂಗೀತ, ರಂಗಿತರಂಗ ಖ್ಯಾತಿಯ ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top