RESPONSIVE LEADERBOARD AD AREA
Film News

ವಿಶೇಷ ಗೀತೆಗೆ ಹೆಜ್ಜೆ ಹಾಕಿದ ‘ಯಜಮಾನ’..!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಚಿತ್ರೀಕರಣ ಮುಗಿಯುವ ಹಂತದಲ್ಲಿದ್ದು, ಇದೀಗ ಡಾನ್ಸ್ ಚಿತ್ರೀಕರಣ ಭರದಿಂದ ಸಾಗಿದ್ದು ದರ್ಶನ್ ಈ ಗೀತೆಗೆ ಹೆಜ್ಜೆ ಹಾಕುತ್ತಿದ್ದಾರೆ.

ಈ ಹಾಡಿನ ನೃತ್ಯ ನಿರ್ದೇಶನವನ್ನು ಮೋಹನ್ ಮಾಸ್ಟರ್ ಯೋಜಿಸಿದ್ದಾರೆ. ಈ ಗೀತೆಯನ್ನು ವಿ. ನಾಗೇಂದ್ರಪ್ರಸಾದ್ ಬರೆದಿದ್ದು, ವಿಶೇಷವಾದ ಅದ್ದೂರಿ ಸೆಟ್ ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಚಿತ್ರದ ಸೆಟ್ಟನ್ನು ಹಿರಿಯ ಕಲಾ ನಿರ್ದೇಶಕ ಶಶಿಧರ್ ಅಡಪ ಸಂಯೋಜಿಸಿದ್ದು ವಿಶೇಷವಾಗಿ ಮೂಡಿ ಬಂದಿದೆ. ಈ ಪೆಪ್ಪಿ ನಂಬರ್ ಗೀತೆಯನ್ನು ಹರಿಕೃಷ್ಣ ಸಂಯೋಜಿಸಿದ್ದು, ದರ್ಶನ್ ಜೊತೆಯಲ್ಲಿ ಐನೂರಕ್ಕೂ ಹೆಚ್ಚು ಸಹಕಲಾವಿದರು ಹೆಜ್ಜೆ ಹಾಕಲಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದ್ದು, ನಂತರ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭವಾಗಲಿದೆ. ಇದೊಂದು ದೊಡ್ಡ ಬಜೆಟ್ ನ ಚಿತ್ರವಾಗಿದ್ದು, vfx ಎಫೆಕ್ಟ್ಸ್ ಮತ್ತು ತ್ರೀಡಿ ಕ್ರಿಯೇಶನ್ಸ್ ಒಳಗೊಂಡ ದೊಡ್ಡ ದೊಡ್ಡ ಸೆಟ್ ಗಳಲ್ಲಿ ಚಿತ್ರದ ಹಾಡುಗಳನ್ನು ಚಿತ್ರೀಕರಿಸಲಾಗಿದೆ.

ಈಗಾಗಲೇ ಚಿತ್ರತಂಡ ಸ್ವೀಡನ್ ನಲ್ಲಿ ಚಿತ್ರೀಕರಣ ಮುಗಿಸಿ ವಾಪಸ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ಜೊತೆ ರಶ್ಮಿಕಾ ಮಂದಣ್ಣ ಸ್ವೀಡನ್ ನಲ್ಲಿ ನಡೆದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಸಂಗೀತ ನಿರ್ದೇಶಕ ಹರಿಕೃಷ್ಣ ಈ ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚನೆಯಲ್ಲಿ ‘ಭರ್ಜರಿ’ ಖ್ಯಾತಿಯ ಚೇತನ್ ಕುಮಾರ್ ಜೊತೆಗೆ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದ್ದರು. ಚಿತ್ರಕ್ಕೆ ಸಂಗೀತ ನಿರ್ದೇಶನದ ಜೊತೆಗೆ, ಈ ಚಿತ್ರದ ನಿರ್ದೇಶನವನ್ನೂ ಕೂಡ ಮುಂದೆ ನಿಂತು ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಿಸ್ಮಸ್ ಹಬ್ಬವನ್ನು ಸೆಟ್ ನಲ್ಲಿಯೇ ಆಚರಿಸುವ ಯೋಚನೆ ಹೊಂದಿದ್ದಾರೆ. ಚಿತ್ರಕ್ಕೆ ಬಿ ಸುರೇಶ ಮತ್ತು ಶೈಲಜಾ ನಾಗ್ ಹಣ ಹೂಡಿದ್ದು, ಚಿತ್ರದಲ್ಲಿ ತಾನ್ಯ ಹೋಪ್ ಹಾಗೂ ರಶ್ಮಿಕ ಮಂದಣ್ಣ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶ್ರೀಶ ಕುಡುವಳ್ಳಿ ಛಾಯಾಗ್ರಹಣ ಚಿತ್ರಕ್ಕೆ ಇದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top