RESPONSIVE LEADERBOARD AD AREA
Film News

ಡಿ ಬಾಸ್ ಅಭಿನಯದ ‘ರಾಬರ್ಟ್’ಗೆ ಭರ್ಜರಿ ತಯಾರಿ..!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ‘ಒಡೆಯ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ಅವರ ಅಭಿನಯದ, ತರುಣ್ ಸುಧೀರ್ ನಿರ್ದೇಶಿಸಲಿರುವ ‘ರಾಬರ್ಟ್’ ಚಿತ್ರದ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ.

ಏಪ್ರಿಲ್ 19ರಂದು ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, 2020 ರ ಬೇಸಿಗೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈಗಾಗಲೇ ಘೋಷಿಸಿದೆ.

ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ನಿರ್ದೇಶಕ ತರುಣ್ ಸುಧೀರ್ ಚಿತ್ರದ ತಾರಾಗಣದ ಆಯ್ಕೆ ಈಗಾಗಲೇ ಪೂರ್ಣಗೊಳಿಸಿದ್ದಾರೆ. ಚಿತ್ರದಲ್ಲಿ ದರ್ಶನ್ ಅವರ  ಕಾಸ್ಟ್ಯೂಮ್ಸ್  ಹಾಗು, ಡಿಸೈನ್ ಗಳ ತಯಾರಿಯನ್ನು ಕೂಡ  ನಡೆಸಲಾಗುತ್ತಿದೆ. ಇದರ ಫೋಟೋಶೂಟ್ ಯುಗಾದಿ ಹಬ್ಬದ ಸಂದರ್ಭದಲ್ಲಿ ನಡೆಯಲಿದೆ ಎಂದಿದ್ದಾರೆ.

ಚಿತ್ರದ ಮೊದಲ ಹಂತದ ಚಿತ್ರೀಕರಣ ಸುಮಾರು 45 ದಿನಗಳ ಕಾಲ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಲಿದ್ದು ಬಳಿಕ ಚೆನ್ನೈ, ಹೈದ್ರಾಬಾದ್, ವಿಶಾಖಪಟ್ನಮ್ ಗಳಲ್ಲಿ ಚಿತ್ರೀಕರಣ ನಡೆಸಲು ಲೊಕೇಶನ್ ಗಳನ್ನು ಗುರುತಿಸಲಾಗಿದೆ.

ಉಮಾಪತಿ ನಿರ್ಮಿಸುತ್ತಿರುವ ಈ ಚಿತ್ರಕ್ಕಾಗಿ ವಿಶೇಷವಾದ ಸಂಭಾಷಣೆಗಳನ್ನು ಬರೆಯಲು ಚಂದ್ರಮೌಳಿ ಮತ್ತು ರಾಜಶೇಖರ್ ಎಂಬ ಇಬ್ಬರು ಬರಹಗಾರರನ್ನು ಕರೆತರಲಾಗಿದೆ. ಸುಧಾಕರ್ ಚಿತ್ರದ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮೋಹನ್ ಬಿ ಕೆರೆ ಕಲಾ ನಿರ್ದೇಶನ ಮತ್ತು ಪ್ರಕಾಶ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಸಂಗೀತ ನಿರ್ದೇಶಕರ ಆಯ್ಕೆ ಇನ್ನಷ್ಟೇ ಮಾಡಬೇಕಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top