RESPONSIVE LEADERBOARD AD AREA
Film News

ಹೆದರಿಸೋಕೆ ಬಂದ “ದಮಯಂತಿ” ತುಂಬಾ ನಗುಸ್ತಾಳ್ರೀ

ಅವನು ಟಿವಿ ಚಾನೆಲ್ ವೊಂದರಲ್ಲಿ ಕೆಲಸ ಮಾಡುವ ಯುವಕ. ಅವರಪ್ಪ ಮಾಡಿರುವ ಸಾಲದ ರೇಂಜ್ ಹೇಗಿದೆ ಅಂದ್ರೆ, ಅವನು ದುಡಿದಿರುವ ದುಡ್ಡೆಲ್ಲಾ ಸಾಲಗಾರರ ಎದೆ ಮೇಲೆ ಸುರಿಯುವಂತಾ ಪರಿಸ್ಥಿತಿ. ಅವರಪ್ಪ ಹಾಗೆ ಸಾಲ ಮಾಡಿಕೊಂಡಿರುವುದಕ್ಕೆ ಕಾರಣ ಅದೊಂದು ಪ್ರಾಪರ್ಟಿ. ಆ ಪ್ರಾಪರ್ಟಿ ಭೂತ ಬಂಗಲೆ ಅಂತ ಫೇಮಸ್ ಆಗಿದೆ. ಆ ಬಂಗಲೆಯಿಂದ ಭೂತದ ಬಂಗಲೆ ಅನ್ನೋ ಟ್ಯಾಗ್ ಕಿತ್ತು ಹಾಕಿ ಒಳ್ಳೇ ರೇಟಿಗೆ ಮಾರಿ ಬಿಡುವ ಹುನ್ನಾರದಲ್ಲಿ ಒಂದು ಫೇಕ್ ಹಾರರ್ ರಿಯಾಲಿಟಿ ಶೋ ನಡೆಸಿ 6 ಜನ ಕಂಟೆಸ್ಟೆಂಟ್ ಗಳನ್ನು ಮನೆಯೊಳಗೆ ಸೇರಿಸುತ್ತಾನೆ. ಈ ಮನೆಯಲ್ಲಿ ದೆವ್ವದ ಹಾಗೆ ಯಾರಾದರೂ ಕಾಣಿಸಿದರೆ ಅದು ದೆವ್ವ ಅಲ್ಲ ನಮ್ಮ ಜೂನಿಯರ್ ಆರ್ಟಿಸ್ಟ್ಗಳು. ನೀವು ಎಂಥ ಪರಿಸ್ಥಿತಿಯಲ್ಲೂ ಹೆದರಬಾರದು ಹೆದರಿದರೆ ಎಲಿಮಿನೇಟ್ ಆಗುತ್ತೀರಿ ಎಂದು ಅವರನ್ನು ನಂಬಿಸಿ ಭೂತಬಂಗಲೆಯೊಳಗೆ “ಡಿಡಿ ಬಾಸ್” ರಿಯಾಲಿಟಿ ಶೋ ಶುರು ಮಾಡಿ ಬಿಡುತ್ತಾನೆ. ಅಲ್ಲಿಂದ ಶುರುವಾಗೋದೇ ನಿಜವಾದ ಮಜಾ. ರಿಯಾಲಿಟಿ ಶೋ ಅಂದುಕೊಂಡು ಆ ಆರು ಜನ ದೆವ್ವ ಬಂದರೂ ಹೆದರದೆ ತಿರುಗಿ ದೆವ್ವಕ್ಕೆ ಕಿಂಡಲ್ ಮಾಡಿ ಓಡಿಸುತ್ತಿರುತ್ತಾರೆ. ಇಂತಹ ರಿಯಾಲಿಟಿ ಶೋನ ಕಂಟೆಸ್ಟೆಂಟ್ ಗಳಿಗೆ ಆ ಮನೆಯಲ್ಲಿರುವ “ದಮಯಂತಿ” ಏನು ಮಾಡುತ್ತಾಳೆ? ಅಸಲಿ ಅವಳು ಅಲ್ಲಿ ಹಾಗೆ ಪ್ರೇತಾತ್ಮ ಆಗಲು ಕಾರಣ ಏನು? ಅವಳ ಸೇಡನ್ನು ಹೇಗೆ ತೀರಿಸಿಕೊಳ್ಳುತ್ತಾಳೆ ಅನ್ನೋದೇ ದಮಯಂತಿ ಸಿನಿಮಾದ ಸ್ವಾರಸ್ಯ.

ರಿಯಾಲಿಟಿ ಶೋ ಕಂಟೆಸ್ಟೆಂಟ್ ಗಳಾಗಿ ಅಭಿನಯಿಸಿರುವ ತಬಲ ನಾಣಿ, ಮಿತ್ರ, ಶರಣ, ಗಿರಿ, ಮಜಾ ಟಾಕೀಸ್ ಪವನ್, ಅನುಷಾ ರೈ ಹಾಗೂ ನಕ್ಷತ್ರ ಇಂಟರ್ವಲ್ ವರೆಗೂ ಪ್ರೇಕ್ಷಕರು ನಗುತ್ತಲೇ ಇರುವ ಹಾಗೆ ನೋಡಿಕೊಂಡಿದ್ದಾರೆ. ಇಂಟರ್ವಲ್ಗೆ ಬರುವ “ದಮಯಂತಿ” ರಾಧಿಕಾ ಕುಮಾರಸ್ವಾಮಿ ಬೆಳ್ಳಿತೆರೆಗೆ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. ರಾಜ ಮನೆತನದ ಹುಡುಗಿಯಾಗಿ, ಮಹಾಕಾಳಿ ಸ್ವರೂಪದ ದಮಯಂತಿ ಆತ್ಮವಾಗಿ ರಾಧಿಕಾ ತೆರೆಯನ್ನು ಆವರಿಸಿಕೊಳ್ಳುತ್ತಾರೆ. ಅವರ ಸೌಂದರ್ಯ ಹಾಗೂ ಖದರ್ “ದಮಯಂತಿ” ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಭಜರಂಗಿ ಲೋಕಿ ಹಾಗೂ ಬಲರಾಜ್ ವಾಡಿ ಖಳರಾಗಿ ಗಮನ ಸೆಳೆಯುತ್ತಾರೆ.

ಇತ್ತೀಚಿನ ದಿನಗಳಲ್ಲಿ ಬಂದ ಒಂದು ಒಳ್ಳೆಯ ಹಾರರ್ ಕಾಮಿಡಿ ಸಿನಿಮಾ ದಮಯಂತಿ ಎಂದರೆ ತಪ್ಪಾಗಲ್ಲ. ದ್ವಿತೀಯಾರ್ಧದಲ್ಲಿ ಒಂದಷ್ಟು ದೃಶ್ಯಗಳ ಕತ್ತರಿ ಪ್ರಯೋಗ ನಡೆದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಒಟ್ಟಾರೆಯಾಗಿ ಕಾಸು ಕೊಟ್ಟ ಪ್ರೇಕ್ಷಕರಿಗೆ ಒಂದರ ಹಿಂದೊಂದು ಬರುವ ಜಬರ್ದಸ್ತ್ ಹಾಸ್ಯ ದೃಶ್ಯಗಳ ಬಳುವಳಿ ಸಿಗುತ್ತದೆ. ರಾಧಿಕಾ ಕುಮಾರಸ್ವಾಮಿ ಅವರ ದಮಯಂತಿ ಮಾಸ್ ಪ್ರೇಕ್ಷಕರಿಗೆ ಬೋನಸ್..

NamCinema Rating 3.25/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top