RESPONSIVE LEADERBOARD AD AREA
Movie Reviews

ಪೈಸಾ ವಸೂಲ್ ಹೀರೋ “ದಳಪತಿ”

ಪ್ರಶಾಂತ್ ರಾಜ್ ಅವರ ನಿರ್ದೇಶನದ ಸಿನಿಮಾಗಳಲ್ಲಿ ಒಳ್ಳೆಯ ಕ್ಯಾಮೆರಾ ವರ್ಕ್, ನಾಯಕ ನಾಯಕಿ ನಡುವೆ ಒಳ್ಳೆಯ ಕೆಮಿಸ್ಟ್ರಿ, ಮತ್ತು ಸ್ಟೈಲಿಶ್ ಮೇಕಿಂಗ್ ಪಕ್ಕಾ ಇರುತ್ತೆ. ದಳಪತಿಯಲ್ಲಿ ಅವೆಲ್ಲಾ ಇರುವುದರೊಂದಿಗೆ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಪಕ್ಕಾ ಕಮರ್ಷಿಯಲ್ ಕಥೆಯೂ ಇದೆ. ಹೌದು ಪ್ರಶಾಂತ್ ರಾಜ್ ತಮ್ಮ ಕಂಫರ್ಟ್ ಜೋ಼ನ್ ನಿಂದ ಹೊರಬಂದು ನೀಟ್ ಆದ ಒಂದು ಮಾಸ್ ಸಿನಿಮಾ ಮಾಡಿದ್ದಾರೆ.

ಅಪರಾಧಿ ಕೃತ್ಯಗಳನ್ನು ಎಸಗುವುದರಲ್ಲಿ ನಿಸ್ಸೀಮನಾದ ಖಳನ ನೆರಳಿನಂತೆ ಕೆಲಸ ಮಾಡುತ್ತಿರುವ ನಾಯಕನಿಗೆ ನಾಯಕಿಯ ಮೇಲೆ ಮೊದಲ ನೋಟದಲ್ಲಿಯೇ ಪ್ರೇಮಾಂಕುರವಾಗುತ್ತದೆ. ಪ್ರೇಮಪೀಡಿತ ನಾಯಕ ನಾಯಕಿಯ ಹಿಂದೆ ಬಿದ್ದು ಕಾಡಿ ಬೇಡಿ ಪ್ರೀತಿಯನ್ನು ಒಲಿಸಿಕೊಳ್ಳುತ್ತಾನೆ. ನಾಯಕನಿಗೆ ಮನಸೋತ ನಾಯಕಿಗೆ ಅವನ ಪ್ರೀತಿಯ ಓಲೈಕೆಯ ಹಿಂದೆ ಇದ್ದದ್ದು ಬೇರೆಯದೇ ಉದ್ದೇಶ ಎಂದು ತಿಳಿಯುವುದರೊಂದಿಗೆ ಕತೆ ಬೇರೆಯದೇ ದಿಕ್ಕಿಗೆ ಹೊರಳುತ್ತದೆ. ಮುಂದೇನಾಗುತ್ತದೆ ಎಂದು ನೀವು ತೆರೆಯ ಮೇಲೆಯೇ ನೋಡಿ ಆನಂದಿಸಬೇಕು.

ಪ್ರೇಮ್ ಲವರ್ ಬಾಯ್ ಆಗಿ ಮತ್ತು ದಂಡಿಸುವ ದಳಪತಿಯಾಗಿಯೂ ತೆರೆಯ ಮೇಲಿನ ತಮ್ಮ ಜವಾಬ್ದಾರಿಯನ್ನು ಸಶಕ್ತವಾಗಿ ನಿರ್ವಹಿಸಿದ್ದಾರೆ, ಶರತ್‌ ಲೋಹಿತಾಶ್ವ, ಪದ್ಮಜಾ ರಾವ್, ಶ್ರೀನಿವಾಸ ಪ್ರಭು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕೃತಿ ಕರಬಂಧ ಚಿತ್ರಕ್ಕೆ ಅವಶ್ಯಕವಾಗಿ ಬೇಕಾಗಿದ್ದ ಗ್ಲ್ಯಾಮರ್ ತಂಪನ್ನು ನೀಡುವುದರ ಜೊತೆಗೆ ಅಚ್ಚುಕಟ್ಟಾದ ನಟನೆಯನ್ನು ನೀಡಿದ್ದಾರೆ. ಚರಣ್‌ರಾಜ್‌ ಸಂಗೀತ ಸಂಯೋಜನೆಯ ಎರಡು ಹಾಡುಗಳು ಚೆನ್ನಾಗಿದೆ, ಹಿನ್ನೆಲೆ ಸಂಗೀತ ಸಿನಿಮಾದಲ್ಲಿ ಚೆನ್ನಾಗಿ ಕೆಲಸ ಮಾಡಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಫಸ್ಟ್ ಕ್ಲಾಸ್.

ಒಟ್ಟಾರೆಯಾಗಿ ಮೊದಲ ಬಾರಿ ಮಾಸ್ ಸಿನಿಮಾ ನಿರ್ದೇಶಿಸಿರುವ ಪ್ರಶಾಂತ್ ರಾಜ್ ಪ್ರೇಕ್ಷಕರಿಗೆ ಪೈಸಾ ವಸೂಲ್ ರಂಜನೆಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ದಳಪತಿಯಲ್ಲಿ ರಂಜಿಸುವ ಲವ್‌ಸ್ಟೋರಿಯಿದೆ. ಕಲರ್‌ಫುಲ್‌ ಹಾಡುಗಳು, ಆ್ಯಕ್ಷನ್‌ ಪ್ರಿಯರಿಗಾಗಿ ಸಾಹಸ ದೃಶ್ಯಗಳು, ಪ್ರೇಮ್‌ ಮತ್ತು ಕೃತಿ ಜೋಡಿಯ ಮುದ ನೀಡುವ ಕೆಮಿಸ್ಟ್ರಿ, ನಗಿಸುವ ಚಿಕ್ಕಣ್ಣ ಕಾಮಿಡಿ ಎಲ್ಲವೂ ಮನರಂಜನೀಯ. ಪ್ರೇಮದ ತೋಟದಲ್ಲಿ ವಿಹರಿಸಿ, ಆನಂದದಿಂದ ನಕ್ಕು ಚಿತ್ರಮಂದಿರದಿಂದ ಹೊರಹೋಗುವಂಥ ಚಿತ್ರ ದಳಪತಿ.

ರೇಟಿಂಗ್ – 3.5/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top