ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ..
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ…….
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಒಂದೇ ಸಮನೆ ನಿನ್ನ ನೋಡುತಿದ್ದ ಮೇಲು
ತುಂಬಾ ಸಲಿಗೆ ಇಂದಾ ಬೆರೆತು ಹೋದ ಮೇಲು
ಪಕ್ಕದಲಿ ಕುಳಿತುಕೊಂಡು ನಿನ್ನ ಮೈಗೆ ಅಂಟಿಕೊಂಡು
ಉಸಿರು ಉಸಿರು ಬೆರೆತಮೇಲೂ
ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ..
ಕೋಟಿಗೊಬ್ಬ೨ ಚಿತ್ರದ ಈ ಹಾಡು ಇಂದಿಗೂ ಕಿರುತೆರೆಯಲ್ಲಿ ಪದೇ ಪದೇ ಪ್ರಸಾರಗೊಳ್ಳುತ್ತದೆ. ಏಕೆಂದರೆ ಹಾಡಿಗಿರುವ ಜನಪ್ರಿಯತೆ ಅಂತಹುದು. ಹಾಡಿನ ಟ್ಯೂನ್ ಅಕ್ಷರಶಃ ನಾವು ಪ್ರೇಮಿಗಳಾಗುವಂತೆ ಮಾಡುವ ಶಕ್ತಿ ಹೊಂದಿದೆ. ಸಂಗೀತ ನಿರ್ದೇಶಕ ಡಿ ಇಮಾನ್ ಇದೊಂದು ಹಾಡಿನಿಂದ ಕರ್ನಾಟಕದ ಮನೆ ಮನಗಳನ್ನು ತಲುಪಿದ್ದಾರೆ. ಈಗ ಇದೇ ಡಿ ಇಮಾನ್ ಪವನ್ ಒಡೆಯರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕಾಂಬಿನೇಷನ್ನಲ್ಲಿ ರೂಪುಗೊಳ್ಳುತ್ತಿರುವ ಮೆಗಾ ಪ್ರಾಜೆಕ್ಟ್ “ನಟಸಾರ್ವಭೌಮ” ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇದು ಖಂಡಿತವಾಗಿಯೂ ಬಹಳ ಖುಷಿ ಕೊಡುವ ವಿಚಾರ. ಪವರ್ ಸ್ಟಾರ್ ಪುನೀತ್ ಅವರ ಸಿನಿಮಾಗಳಲ್ಲಿ ಹಾಡುಗಳು ಸಖತ್ ಆಗಿಯೇ ಇರುತ್ತವೆ. ಪವನ್ ಒಡೆಯರ್ ಅವರಿಗೆ ಒಳ್ಳೆಯ ಸಂಗೀತ ಜ್ಞಾನವಿದೆ ಅನ್ನೋದು ಅವರ ಹಿಂದಿನ ಚಿತ್ರಗಳ ಹಿಟ್ ಹಾಡುಗಳನ್ನು ಕೇಳಿದಾಗ ತಿಳಿಯುತ್ತದೆ. ಈಗ ಪವನ್ ಒಡೆಯರ್ ನಿರ್ದೆಶನದಲ್ಲಿ ಡಿ ಇಮಾನ್ ಬತ್ತಳಿಕೆಯಿಂದ ಹೊರಬರಲಿರುವ ವಿಶಿಷ್ಟ ಟ್ಯೂನ್ ಗಳು “ಸಾಲುತಿಲ್ಲವೇ” ಹಾಡಿನ ಹಾಗೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಆವರಿಸಿಕೊಳ್ಳಲಿ ಅನ್ನೋದು ನಮ್ಮ ಆಶಯ.
