RESPONSIVE LEADERBOARD AD AREA
Movie Articles

Could you decipher the most anticipated movie rolling out of kfi this year?

ರಾಜರಥ

ರಂಗಿತರಂಗ ಖ್ಯಾತಿಯ ಭಂಡಾರಿ ಬ್ರದರ್ಸ್ ಎರಡನೆಯ ಚಿತ್ರ ‘ರಾಜರಥ’ಕ್ಕೆ ಹೇಗೂ ಕ್ರೇಜ್ ಇದ್ದೆ ಇತ್ತು. ಆದರೆ ಟ್ರೈಲರ್ ರಿಲೀಸ್ ಆದ್ಮೇಲೆ ಸಿನಿಮಾ ಮೇಲಿದ್ದ ಕ್ರೇಜ್ ಸ್ಟಾರ್ ಮೂವಿ ರೇಂಜ್ ಗೆ ಹೋಗಿದೆ. ಅನೂಪ್ ಭಂಡಾರಿ ಕೆಲಸದ ಬಗ್ಗೆ ಎಲ್ಲರಲ್ಲೂ ದೊಡ್ಡ ಅಚ್ಚರಿ ಇದೆ. ಕನ್ನಡ ಇಂಡಸ್ಟ್ರಿಯಲ್ಲಿ ಹೊಸ ಇತಿಹಾಸ ಬರೆಯುವ ಚಿತ್ರ ‘ರಾಜರಥ’ ಆಗಲಿದೆ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಹಾಗೆಯೇ ಆಗಲಿ ಎಂಬುದು ನಮ್ಮ ಆಶಯ.

ರಾಜು ಕನ್ನಡ ಮೀಡಿಯಂ

ರಾಂಕ್ ಸ್ಟಾರ್ ಗುರುನಂದನ್, ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್ ಮತ್ತು ವಿಶೇಷ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ”ರಾಜು ಕನ್ನಡ ಮೀಡಿಯಂ” ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಕಾರಣಾಂತರಗಳಿಂದ ಈ ವರ್ಷ ಬಿಡುಗಡೆಯಾಗುತ್ತಿರುವುದು ಹೌದಾದರೂ ಚಿತ್ರದ ಬಗ್ಗೆ ಜನರಲ್ಲಿರುವ ವಿಶ್ವಾಸ ಹಾಗೆಯೆ ಇದೆ. ಇದೊಂದು ಒಳ್ಳೆ ಕ್ಲಾಸ್ ಸಿನಿಮಾ ಎಂದು ಎಲ್ಲ ಅಂದುಕೊಂಡಿದ್ದಾರೆ. ಫಸ್ಟ್ ರಾಂಕ್ ರಾಜುವಿನಂತೆ ರಾಜು ಕನ್ನಡ ಮೀಡಿಯಂ ಕೂಡ ಜಯಭೇರಿ ಬಾರಿಸುತ್ತಾನೆ ಎಂಬ ಟಾಕ್ ಗಾಂಧಿನಗರದಲ್ಲಿ ಇದೆ.

ಟಗರು

ಕಡ್ಡಿಪುಡಿ ನಂತರ ಮತ್ತೊಮ್ಮೆ ಒಂದಾಗಿರುವ ಶಿವಣ್ಣ ಮತ್ತು ಸೂರಿ ಕಾಂಬಿನೇಷನ್ ನಿಂದ ಕ್ಲಾಸಿಕ್ ಕ್ರೈಂ ಸಿನಿಮಾ ನಿರೀಕ್ಷೆಯಿದೆ. ಟೀಸರ್ರು ಟ್ರೈಲರ್ರು ಮತ್ತೆ ಸಾಂಗ್ಸು ಎಲ್ಲಾ ಕ್ಲಿಕ್ ಆಗಿದೆ. ಪೋಸ್ಟರ್ಸ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿವೆ, ಶಿವಣ್ಣ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಹಬ್ಬ ಮಾಡಿಕೊಳ್ಳಲು ಥರಾವರಿ ಪ್ಲಾನ್ಸ್ ಮಾಡಿಕೊಂಡಿದ್ದಾರೆ.

ಕೆಜಿಎಫ್

ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಕೆಜಿಎಫ್’ ಸಿನೆಮಾಗೆ ಇರೋ ಕ್ರೇಜ್ ಅಷ್ಟಿಷ್ಟಲ್ಲ ಬಿಡಿ. ಬಜೆಟ್ ವಿಷಯಕ್ಕೆ, ಸ್ಟಾರ್ ಡೈರೆಕ್ಟರ್ ಮತ್ತು ಸೂಪರ್ ಸ್ಟಾರ್ ಹೀರೋ ಕಾಂಬಿನೇಷನ್ ವಿಷಯಕ್ಕೆ, ಥೀಮ್ ವಿಷಯಕ್ಕೆ ಎಲ್ಲ ಸೇರಿಕೊಂಡು ಸಿನಿಮಾ ಮೇಲಿರೋ ಕ್ರೇಜ್ ತಾರಕಕ್ಕೇರಿದೆ. ಕನ್ನಡ ಇಂಡಸ್ಟ್ರಿಯ ಮೊದಲ ೧೦೦ ಕೋಟಿ ಗಳಿಕೆಯ ಸಿನಿಮಾ ಇದಾಗಲಿದೆ ಎಂದು ಕನ್ನಡ ಸಿನಿಪ್ರಿಯ ವಲಯ ನಂಬಿದೆ.

ಮುನಿರತ್ನ ಕುರುಕ್ಷೇತ್ರ

ಕನ್ನಡ ಇಂಡಸ್ಟ್ರಿಯನ್ನು ಬೇರೆ ಇಂಡಸ್ಟ್ರಿಯವರು ಗಾಭರಿಯಿಂದ ತಿರುಗಿ ನೋಡಬೇಕು ಹಾಗೆ ಸಿದ್ಧವಾಗಿದೆ ‘ಮುನಿರತ್ನ ಕುರುಕ್ಷೇತ್ರ’, ಚಿತ್ರದ ಬಜೆಟ್ ಮಿತಿ ಮೀರಿ ಹೋಗಿದೆ, ಕೆಚ್ಚೆದೆಯ ನಿರ್ಮಾಪಕ ಮುನಿರತ್ನ ಅವರು ಚಿತ್ರಕ್ಕಾಗಿ ನೀರಿನಂತೆ ಹಣ ಸುರಿದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಅಬ್ಬರಿಸುವುದನ್ನು ನೋಡಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ. ಜೊತೆಗೆ 3D ಎಫೆಕ್ಟ್ ಕೂಡ ಇರುವುದರಿಂದ ಮಕ್ಕಳು ಹೆಚ್ಚಾಗಿ ಥೀಯೇಟರ್ ಗೆ ನೊಗ್ಗೋದು ಗ್ಯಾರಂಟಿ. ಕನ್ನಡ ಇಂಡಸ್ಟ್ರಿಯ ಮತ್ತೊಂದು ೧೦೦ ಕೋಟಿ ಸಿನಿಮಾ ಇದು.

 

ಬಟರ್ ಫ್ಲೈ

ಕಂಗನಾ ರೌನತ್ ಅಭಿನಯಿಸಿದ್ದ ಹಿಂದಿ ಸಿನಿಮಾ ‘ಕ್ವೀನ್’ ದಕ್ಷಿಣ ಭಾರತದ ಎಲ್ಲಾ ಭಾಷೆಗಳಿಗೆ ರೀಮೇಕ್ ಆಗುತ್ತಿದ್ದು ಇಡೀ ಭಾರತೀಯ ಚಿತ್ರರಂಗ ದಕ್ಷಿಣದ ಕ್ವೀನ್ ಆವೃತ್ತಿಗಳ ಬಗ್ಗೆ ಆಸಕ್ತಿ ಹುಟ್ಟಿಸಿಕೊಂಡಿದೆ. ಕನ್ನಡದಲ್ಲಿ ‘ಬಟರ್ ಫ್ಲೈ’ ಹೆಸರಿನಲ್ಲಿ ರಮೇಶ್ ಅರವಿಂದ ಅವರ ದಕ್ಷ ನಿರ್ದೇಶನದಲ್ಲಿ ಪರುಲ್ ಯಾದವ್ ಕ್ವೀನ್ ಆಗಿದ್ದಾರೆ. ಕ್ವೀನ್ ಚಿತ್ರ ತನ್ನೊಳಗಿನ ಉದಾತ್ತ ಕಥೆ ಹೇಳುವಿಕೆಯಿಂದ, ಹೆಣ್ಣಿನ ಆತ್ಮಸ್ಥೈರ್ಯ ವೃದ್ಧಿಸುವ ವಿಚಾರವಂತಿಕೆಯಿಂದ ಬಹಳ ಹೆಸರು ಮಾಡಿದ ಸಿನಿಮಾ. ಇಂತಹ ಒಂದು ಒಳ್ಳೆಯ ಉದ್ದೇಶ ಮತ್ತು ಪರಿಣಾಮಗಳನ್ನು ಹೊತ್ತ ಸಿನೆಮಾವನ್ನು ರೀಮೇಕ್ ಮಾಡುವುದರಲ್ಲಿ ತಪ್ಪಿಲ್ಲ ಅನ್ನೋದು ನಮ್ಮ ಅಭಿಪ್ರಾಯ. ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ಕಿಲ್ಲಿಂಗ್ ಪರ್ಫಾರ್ಮೆನ್ಸ್ ನೀಡಿದ್ದ ‘ಪ್ಯಾರ್ಗೆ’ ಹುಡುಗಿ ಪರುಲ್ ಕನ್ನಡ ಕ್ವೀನ್ ಆಗಿ ಕನ್ನಡ ಸಿನಿಪ್ರಿಯನ ಮನಸ್ಸನ್ನು ಆವರಿಸಿಕೊಳ್ಳುವಂತಾಗಲಿ.

ಬಕಾಸುರ

ಕರ್ವ ಡೈರೆಕ್ಟರ್ ನವನೀತ್ ಎರಡನೇ ಸಿನಿಮಾ ‘ಬಕಾಸುರ’ ಚಿತ್ರದ ಹೈಲೈಟ್ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್, ರಾಕ್ ಸ್ಟಾರ್ ರೋಹಿತ್, ಕಿರುತೆರೆಯ ಸುಂದರಿ ಕಾವ್ಯ ಗೌಡ ಮತ್ತು ಸುಚೇಂದ್ರ ಪ್ರಸಾದ್ ರಂತಹ ಉತ್ತಮ ಕಲಾವಿದರ ದಂಡೇ ಚಿತ್ರದಲ್ಲಿದೆ. ಹಣ ಮತ್ತು ಹಣ ಹುಟ್ಟು ಹಾಕುವ ಸ್ವಭಾವ ಚಂಚಲಗಳನ್ನು ಥ್ರಿಲ್ಲರ್ ಕಥೆಯ ರೂಪದಲ್ಲಿ ಪ್ರೇಕ್ಷಕರ ಮುಂದಿಡುತ್ತಿದೆ ಚಿತ್ರತಂಡ.

ದಿ ವಿಲ್ಲನ್

ಜೋಗಿ ಪ್ರೇಮ್ ಡೈರೆಕ್ಷನ್ ನಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ‘ದಿ ವಿಲ್ಲನ್’, ನಾಯಕಿಯಾಗಿ ಆಮಿ ಜ್ಯಾಕ್ಸನ್ ನಟಿಸಿರುವುದೂ ಕೂಡ ಚಿತ್ರದ ಸ್ಟಾರ್ ಪವರ್ ಅನ್ನು ಮತ್ತಷ್ಟು ಹೆಚ್ಚಿಸಿದೆ. ಜೋಗಿ ಪ್ರೇಮ್ ಈ ಬಾರಿ ಹಿಸ್ಟರಿ ಕ್ರಿಯೇಟ್ ಮಾಡೋದು ಪಕ್ಕ ಅಂತ ಮಾತಾಡಿಕೊಳ್ಳುತ್ತಿದ್ದಾರೆ ಫ್ಯಾನ್ಸ್.

ಪೈಲ್ವಾನ್

ಹೆಬ್ಬುಲಿ ಕೃಷ್ಣ ನಿರ್ದೇಶಿಸುತ್ತಿರುವ ‘ಪೈಲ್ವಾನ್’ ಚಿತ್ರದಲ್ಲಿ ಸುದೀಪ್ ಮತ್ತೊಂದು ಹೊಸ ವೈಶಿಷ್ಟ್ಯಪೂರ್ಣ ಲುಕ್ ನಲ್ಲಿ ಪ್ರೇಕ್ಷಕರಿಗೆ ಎದುರಾಗಲಿದ್ದಾರೆ. ಕಿಚ್ಚ ಸುದೀಪ್ ಸಿನಿಮಾ ಅಂದ ಮೇಲೆ ಕ್ರೇಜ್ ಡೀಫಾಲ್ಟ್ ಅಲ್ಲವೇ? ಈ ವರ್ಷ ಅಖಾಡದಲ್ಲಿ ಪೈಲ್ವಾನ್ ಹವಾ ಇದ್ದೆ ಇರುತ್ತೆ.

 

ಪುನೀತ್, ಸಂತೋಷ್ ಆನಂದರಾಮ್ ಮತ್ತು ಹೊಂಬಾಳೆ ಕಾಂಬಿನೇಷನ್ ಸಿನಿಮಾ

ಕಳೆದ ವರ್ಷ ‘ರಾಜಕುಮಾರ’ದಂತಹ ಇಂಡಸ್ಟ್ರಿ ಹಿಟ್ ಸಿನಿಮಾ ನೀಡಿದ ತಂಡ ಮತ್ತೆ ಈ ವರ್ಷ ಕೆಲಸ ಮಾಡುತ್ತಿದೆ ಅನ್ನೋ ವಿಚಾರವೇ ವಿಪರೀತ ಮಜಾ ಕೊಡುತ್ತಿದೆ. ಈ ಬಾರಿ ಪಕ್ಕ ಮತ್ತೊಂದು ಇಂಡಸ್ಟ್ರಿ ಹಿಟ್ ಕೊಟ್ಟೆ ಕೊಡ್ತಾರೆ ನೋಡ್ತಾ ಇರಿ ಅಂತ ಫ್ಯಾನ್ಸ್ ಗಳು ಮಾತಾಡಿಕೊಳ್ಳುತ್ತಿರೋದರಲ್ಲಿ ತಪ್ಪೇನಿದೆ ಹೇಳಿ?

ಕವಲುದಾರಿ

ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ನಿರ್ದೇಶಕ ಹೇಮಂತ ರಾವ್, ಆಪರೇಷನ್ ಅಲಮೇಲಮ್ಮ ಹೀರೋ ರಿಷಿ ಕಾಂಬಿನೇಷನ್ ನ ಸಿನಿಮಾ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ‘ಕವಲುದಾರಿ’ ಪ್ರೇಕ್ಷಕರಿಗೆ ವಿಭಿನ್ನವಾಗಿ ಹೊಸದೇನನ್ನಾದರೂ ತೋರಿಸಲಿದೆ ಅನ್ನೋ ನಂಬಿಕೆ ಸದಭಿರುಚಿ ಪ್ರೇಕ್ಷಕರಲ್ಲಿ ಇದೆ.

ಕಥಾಸಂಗಮ

ಕನ್ನಡ ಇಂಡಸ್ಟ್ರಿಯ ಒಳಗೆ ತಮ್ಮದೇ ಆದ ಪ್ಯಾರಲಲ್ ಇಂಡಸ್ಟ್ರಿ ಕಟ್ಟಿಕೊಂಡಿರುವ ರಕ್ಷಿತ್ ಶೆಟ್ಟಿ ಟೀಮ್ ನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ‘ಕಥಾಸಂಗಮ’, ಈ ಸಿನಿಮಾದಲ್ಲಿ ಹಲವು ಕಥೆಗಳ, ಲೇಖಕರ, ನಿರ್ದೇಶಕರ ಮತ್ತು ತಂಡಗಳ ಕಲಾತ್ಮಕ ಸಂಗಮವೇ ಇದೆ. ಕನ್ನಡ ಚಿತ್ರರಂಗದ ಉನ್ನತಿಗೆ ಇಂತಹ ಪ್ರಯೋಗಗಳ ಗೆಲುವು ಅತ್ಯಾವಶ್ಯಕ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top