RESPONSIVE LEADERBOARD AD AREA
Film News

‘ಸಿಂಗ’ಲ್ ಆಗಿ ಬರುತ್ತಿದ್ದಾರೆ ಚಿರಂಜೀವಿ ಸರ್ಜಾ..!!

‘ಸಿಂಗ’ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ರಸ್ತೆಗಳಲ್ಲಿ ನಡೆಯುತ್ತಿದ್ದು, ಚಿರಂಜೀವಿ ಸರ್ಜಾ ಮತ್ತು ಅದಿತಿ ಪ್ರಭುದೇವ ಅಭಿನಯಿಸುತ್ತಿರುವ ರೊಮ್ಯಾಂಟಿಕ್ ದೃಶ್ಯಗಳನ್ನು ನಿರ್ದೇಶಕ ವಿಜಯ್ ಕಿರಣ್ ಚಿತ್ರೀಕರಿಸುತ್ತಿದ್ದಾರೆ.

ಈಗಾಗಲೇ ಚಿತ್ರದ 30 ದಿನಗಳ ಶೆಡ್ಯೂಲ್ ನ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದ್ದು, ಇನ್ನು 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ.

ಚಿರಂಜೀವಿ ಸರ್ಜಾ, ಒರಟನ ಪಾತ್ರದಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಅದಿತಿ ಕಾಲೇಜ್ ಕನ್ಯೆಯ ಪಾತ್ರದಲ್ಲಿದ್ದಾರೆ. ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಿಸುತ್ತಿದ್ದು, ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡುತ್ತಿದ್ದಾರೆ. ಧರ್ಮವಿಶ್ ಅವರ ಸಂಗೀತ ಇರಲಿದೆ.

ಚಿತ್ರ ನಟಿ ಮೇಘನಾ ರಾಜ್ ಅವರನ್ನು ವಿವಾಹವಾಗಿರುವ ಚಿರಂಜೀವಿ ಸರ್ಜಾ, ಮದುವೆಯ ನಂತರ ಸ್ವಲ್ಪ ವಿರಾಮ ತೆಗೆದುಕೊಂಡಿದ್ದರು. ರಾಮ ನಾರಾಯಣನ್ ನಿರ್ದೇಶಿಸುತ್ತಿರುವ ‘ರಾಜ ಮಾರ್ತಾಂಡ’ ಮತ್ತು ‘ರಣಂ’ ಎನ್ನುವ ಇನ್ನೊಂದು ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ‘ಸಿಂಗ’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top