RESPONSIVE LEADERBOARD AD AREA
Film News

‘ರುಸ್ತುಂ’ ಚಿತ್ರದ ಮೈನವಿರೇಳಿಸುವ ಚೇಸಿಂಗ್ ದೃಶ್ಯಗಳ ಚಿತ್ರೀಕರಣ..!!

ತಮ್ಮ ಸ್ಟಂಟ್ ನಿರ್ದೇಶನದಿಂದ ಕಳೆದ ಎರಡು ದಶಕಗಳಿಂದ ಖ್ಯಾತರಾಗಿರುವ ರವಿವರ್ಮ ಇದೇ ಮೊದಲ ಬಾರಿಗೆ ಶಿವಣ್ಣ ಅಭಿನಯದ ‘ರುಸ್ತುಂ’ ಚಿತ್ರದಲ್ಲಿ  ವಿಭಿನ್ನ ಸಾಹಸ ದೃಶ್ಯಗಳನ್ನು ಅಳವಡಿಸಿ, ಅದ್ದೂರಿ ವೆಚ್ಚದಲ್ಲಿ ನಿರ್ದೇಶಿಸುತ್ತಿರುವುದು ನಮಗೆಲ್ಲಾ ತಿಳಿದಿದೆ. ಹೊಸ ಸುದ್ದಿ ಏನೆಂದರೆ ಚಿತ್ರದಲ್ಲಿ ವಿಶಿಷ್ಟವಾದ ಚೇಸಿಂಗ್ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ.

ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ದೂರದ ಬಿಹಾರ್ ನಲ್ಲಿ ಚೇಸಿಂಗ್ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದ್ದು, ದೊಡ್ಡ ದೊಡ್ಡ ಲಾರಿಗಳು, ಟೆಂಪೋ ಟ್ರಾವೆಲರ್ ಗಳು ಮತ್ತು ಕಾರುಗಳು ಒಳಗೊಂಡಿರುವ ಮೈನವಿರೇಳಿಸುವ ಚೇಸಿಂಗ್ ದೃಶ್ಯಗಳ ಚಿತ್ರೀಕರಣ ನಡೆದಿದೆ.

‘ಬೇರೆ ಬೇರೆ ದಿಕ್ಕುಗಳಿಂದ ಇರಿಸಲಾದ ನಾಲ್ಕು ಕ್ಯಾಮರಾಗಳನ್ನು ಮತ್ತು ಡ್ರೋನ್ ಕ್ಯಾಮರಾ ಗಳನ್ನು ಬಳಸಿಕೊಂಡು ಚಿತ್ರೀಕರಿಸಲಾಗುತ್ತಿದೆ. ಶಿವಣ್ಣನ ಚಿತ್ರಗಳಲ್ಲಿ ಈ ಮೊದಲೂ ಚೇಸಿಂಗ್ ದೃಶ್ಯಗಳನ್ನು ನೋಡಿರಬಹುದು. ಆದರೆ ಈ ಚಿತ್ರದಲ್ಲಿ ಈ ಮೊದಲಿನ ಎಲ್ಲಾ ಚಿತ್ರಗಳಿಗಿಂತ ಭಿನ್ನವಾದ ಅದ್ದೂರಿ ವೆಚ್ಚದ ಚೇಸಿಂಗ್ ದೃಶ್ಯಗಳನ್ನು ಸಂಯೋಜಿಸಲಾಗುತ್ತದೆ’ ಎಂದು ನಿರ್ದೇಶಕ ರವಿವರ್ಮ ತಿಳಿಸಿದ್ದಾರೆ.

ಚಿತ್ರದಲ್ಲಿ ಶಿವಣ್ಣ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದು, ಹಿಂದಿಯ ಖ್ಯಾತ ನಟ ವಿವೇಕ್ ಒಬೆರಾಯ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 25ಕ್ಕೂ ಹೆಚ್ಚು ಸ್ಟಂಟ್ಸ್ ಕಲಾವಿದರು ಸೇರಿದಂತೆ, ಬಿಹಾರದ ಸ್ಥಳೀಯ ಸಾಹಸ ಕಲಾವಿದರೊಂದಿಗೆ ವಿವೇಕ್ ಒಬೆರಾಯ್ ಚೇಸಿಂಗ್ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆ.

ಒಟ್ಟಾರೆ ಚಿತ್ರದ ಶೇಕಡಾ 90ಕ್ಕೂ ಹೆಚ್ಚು ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ರಚಿತಾ ರಾಮ್, ಮತ್ತು ಮಯೂರಿ ನಾಯಕಿರಾಗಿ ನಟಿಸುತ್ತಿದ್ದಾರೆ. ಚಿತ್ರದ ಮತ್ತೊಂದು ವಿಶೇಷವೆಂದರೆ ವಿವಿಧ ಭಾಷೆಯ ಖಳನಟರು ಈ ಚಿತ್ರದ ಮೂಲಕ ಕನ್ನಡದ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಹಿಂದಿಯ ಗಣೇಶ್ ಯಾದವ್, ತಮಿಳಿನ ಮಹೇಂದ್ರನ್, ಕನ್ನಡದ ನಿರ್ದೇಶಕ ಶಿವಮಣಿ, ತೆಲುಗಿನ ಹರೀಶ್ ಉತ್ತಮ್ ಅಭಿನಯಿಸುತ್ತಿದ್ದಾರೆ.

ಜಯಣ್ಣ ಕಂಬೈನ್ಸ್ ಚಿತ್ರವನ್ನು ನಿರ್ಮಿಸುತ್ತಿದ್ದು, ಸಾಹಸ ನಿರ್ದೇಶನದ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ರವಿವರ್ಮ ಹೊತ್ತುಕೊಂಡಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣವಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top