RESPONSIVE LEADERBOARD AD AREA
Film News

ಚಾಲೆಂಜಿಂಗ್ ಸ್ಟಾರ್ ಮುಂದಿನ ಚಿತ್ರ ‘ರಾಬರ್ಟ್’…!

ಡಿ ಬಾಸ್ ದರ್ಶನ್ ಅಭಿನಯದ, ತರುಣ್ ಸುಧೀರ್ ನಿರ್ದೇಶನದ ಹೊಸ ಚಿತ್ರ ‘ರಾಬರ್ಟ್’ ನ‌ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ದರ್ಶನ್, ಹನುಮಂತನ ಅವತಾರದಲ್ಲಿರುವಂತೆ, ಪೋಸ್ಟರ್ ಅನ್ನು ಸಂಯೋಜಿಸಲಾಗಿದೆ.

ಹನುಮಂತನ ಭುಜದ ಮೇಲೆ ಬಾಲಕನ ರೂಪದ ಶ್ರೀರಾಮನು ಕುಳಿತಿರುವ ಹಾಗೆ ಪೋಸ್ಟರ್ ಮೂಡಿಬಂದಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದ್ದು, ಸಖತ್ ಸದ್ದು ಮಾಡುತ್ತಿದೆ.

ಉಮಾಪತಿ ಫಿಲಂಸ್ ನಿರ್ಮಿಸುತ್ತಿರುವ ಈ ಚಿತ್ರದ ಮೊದಲ ಪೋಸ್ಟರ್ ಅನ್ನು ನವಂಬರ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಎರಡು ಕೈಗಳನ್ನು ಒಂದರ ಮೇಲೊಂದು ಇರಿಸಿ, ಹಿನ್ನೆಲೆಯಲ್ಲಿ ರಾವಣನ ಫೋಟೋ ಯೋಜಿಸಲಾಗಿತ್ತು. ‘ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು ರಾವಣನ ಮುಂದೆ ಗೆಲ್ಲೋದು ಗೊತ್ತು’ ಎಂಬ ಸಬ್ ಟೈಟಲ್ ಇಡಲಾಗಿತ್ತು.

‘ರಾಬರ್ಟ್’ ಎಂಬ ಹೆಸರಿಗೂ ಹನುಮಾನ್ ಗೂ ಎಲ್ಲಿಯ ಸಂಬಂಧ..?! ಬಹುಶಃ ದರ್ಶನ್ ದ್ವಿಪಾತ್ರದಲ್ಲಿ ಅಭಿನಯಿಸಿರಬಹುದೇ..?! ಎಂಬ ಕುತೂಹಲಕ್ಕೆ ತರುಣ್ ಸುಧೀರ್ ‘ನೋ’ ಎಂದು ಹೇಳಿದ್ದಾರೆ. ದರ್ಶನ್ ಅವರು ದ್ವಿಪಾತ್ರದಲ್ಲಿ ಅಭಿನಯಿಸುತ್ತಿಲ್ಲ. ಚಿತ್ರ ಬಿಡುಗಡೆಯಾದ ಮೇಲೆ ಈ ಪೋಸ್ಟರ್ ಪ್ರೇಕ್ಷಕರಿಗೆ ಅರ್ಥವಾಗಲಿದೆ ಎಂದಿದ್ದಾರೆ.

‘ರಾಬರ್ಟ್’ ಒಂದು ಕೌಟುಂಬಿಕ ಹಾಗೂ ಮಾಸ್ ಎಂಟರ್ಟೈನರ್. ಈ ಎರಡು ಎಲಿಮೆಂಟ್ ಗಳನ್ನು ಹದವಾಗಿ ಬೆರೆಸಿದ ಸಿನಿಮಾ ಇದಾಗಲಿದೆ. ಚಿತ್ರದಲ್ಲಿ ಯಾವುದೇ ಧಾರ್ಮಿಕ ಸಂಗತಿಗಳ ಉತ್ಪ್ರೇಕ್ಷೆ ಇಲ್ಲ. ರಾಮ, ರಹೀಮ್, ರಾಬರ್ಟ್ ಎಲ್ಲರೂ ಒಂದೇ. ದರ್ಶನ್ ಪೋಸ್ಟರ್ ನಲ್ಲಿ ಹನುಮಂತನಂತೆ ಕಾಣಿಸಿದರೂ, ಅವರು ಹನುಮಂತನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗದು” ಎನ್ನುತ್ತಾರೆ ತರುಣ್.

ಚಾಲೆಂಜಿಂಗ್ ಸ್ಟಾರ್ ಜನ್ಮದಿನದಂದು (ಫೆಬ್ರವರಿ 16) ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುವುದು, ಈಗ ಚಿತ್ರದ ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಸಂಕ್ರಾಂತಿಯ ಬಳಿಕ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಾಗುವುದು ಎಂದು ತರುಣ್ ಸುಧೀರ್ ಹೇಳಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top