RESPONSIVE LEADERBOARD AD AREA
Film News

ಅಂಬಿ ಪುತ್ರನ ‘ಅಮರ್’ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್..!!

ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಚಿತ್ರ ‘ಅಮರ್’ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಅವರು ಅಭಿನಯಿಸುತ್ತಿರುವ ದೃಶ್ಯಗಳನ್ನು ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್, ಬೆಸ್ಟ್ ಕ್ಲಬ್, ದೇವನಹಳ್ಳಿ ಏರ್ಪೋರ್ಟ್ ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಹಾಡಿನ ಸನ್ನಿವೇಶಗಳಲ್ಲೂ ದರ್ಶನ್ ಕಾಣಿಸಿಕೊಳ್ಳಲಿದ್ದಾರಂತೆ. ರಚಿತಾ ರಾಮ್ ಮತ್ತು ನಿರೂಪ್ ಭಂಡಾರಿ ನಟಿಸಿದ್ದ ಹಾಡಿನ ದೃಶ್ಯಗಳನ್ನು ಇದೀಗ ದರ್ಶನ್ ಅವರಿಗಾಗಿ ರೀ ಶೂಟ್ ಮಾಡಲಾಗುವುದು ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.

ದರ್ಶನ್ ಅವರ ಪಾತ್ರದ ಆಗಮನದಿಂದ ಚಿತ್ರದಲ್ಲಿ ಕಥೆಗೆ ದೊಡ್ಡ ಟರ್ನಿಂಗ್ ಪಾಯಿಂಟ್ ಸಿಗಲಿದೆಯಂತೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂದೇಶ್ ನಾಗರಾಜ್ ನೀಡಲಿಲ್ಲ.

ರೆಬಲ್ ಸ್ಟಾರ್ ಅಂಬರೀಶ್ ಅವರ ಮನೆಯ ಮಗನೆಂದೇ ಅಂಬರೀಶ್ ದಂಪತಿಗಳ, ಪ್ರೀತಿ ಗಳಿಸಿದ್ದ ದರ್ಶನ್, ಅಂಬರೀಶ್ ಅವರನ್ನು ‘ಅಪ್ಪಾಜಿ’ ಎಂದೇ ಕರೆಯುತ್ತಿದ್ದರು. ಸ್ವತಃ ಅಂಬಿ, ದರ್ಶನ್ ನಮ್ಮ ಮನೆಯ ಹಿರಿಯ ಮಗ ಎಂದೇ ಪ್ರೀತಿಸುತ್ತಿದ್ದರು. ಇದೀಗ ಅವರ ಮಗನ ಚಿತ್ರದಲ್ಲಿ ಅಭಿನಯಿಸುವ ಮೂಲಕ, ದಚ್ಚು ಆ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ.

ತಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಮಹದಾಸೆಯನ್ನು ಹೊತ್ತಿದ್ದ ರೆಬಲ್ ಸ್ಟಾರ್, ಚಿತ್ರ ಪೂರ್ಣಗೊಳ್ಳುವ ಮುನ್ನವೇ ದುರದೃಷ್ಟವಶಾತ್ ಮಗನನ್ನು ಅಗಲಿದ್ದರು. ಈ ದುಃಖದ ನಡುವೆಯೂ ತಂದೆಯ ಆಸೆಯನ್ನು ಪೂರೈಸುವ ಜವಾಬ್ದಾರಿ ಹೊತ್ತಿರುವ ಅಭಿಷೇಕ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಳ್ಳಲಿದೆ.

ಅಭಿಷೇಕ್ ಮತ್ತು ತಾನ್ಯ ಹೋಪ್‌ ಚಿತ್ರದಲ್ಲಿ ಬೈಕ್ ಸವಾರರಾಗಿ ದೇಶ ಸುತ್ತುವ ಹವ್ಯಾಸ ಹೊಂದಿರುತ್ತಾರೆ. ಕೊಯಿಮತ್ತೂರು, ಬೆಳಗಾಂ, ಮಣಿಪಾಲ್, ಮಂಗಳೂರು, ಮಡಿಕೇರಿ, ಗೋಣಿಕೊಪ್ಪ ಸೋಮವಾರಪೇಟೆ ಅಲ್ಲದೆ ಕೇರಳದ ಕೆಲವು ಭಾಗಗಳಲ್ಲಿ ಸಂಚರಿಸುತ್ತಿರುವ ಭಾಗಗಳನ್ನು ಚಿತ್ರಿಸಲಾಗಿದ್ದು, ಇವರ ಬೈಕ್ ಯಾನವನ್ನು ಸ್ವಿಟ್ಜರ್ ಲ್ಯಾಂಡ್ ನಲ್ಲಿ ಕೂಡ ಚಿತ್ರೀಕರಿಸಲಾಗಿದೆ.

ಈ ಚಿತ್ರವನ್ನು ಸಂದೇಶ್ ನಾಗರಾಜ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ತಾನ್ಯಾ ಹೋಪ್, ಅಭಿಷೇಕ್ ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಚಿಕ್ಕಣ್ಣ, ಹಿರಿಯ ನಟಿ ಸುಧಾರಾಣಿ, ದೀಪಕ್ ಶೆಟ್ಟಿ ಪ್ರಮುಖ ತಾರಾಗಣದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಸತ್ಯ ಹೆಗಡೆ ಕ್ಯಾಮರಾ ಚಿತ್ರಕ್ಕಿದೆ

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top