RESPONSIVE LEADERBOARD AD AREA
Film News

Butterfly met Mother Chamundeshwari in Mysore

ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ತಯಾರಾಗುತ್ತಿರುವ ಹಿಂದಿಯ ಕ್ವೀನ್ ಚಿತ್ರದ ರೀಮೇಕ್ ಕನ್ನಡದ ಬಹುನಿರೀಕ್ಷಿತ ಸಿನಿಮಾ “ಬಟರ್ ಫ್ಲೈ” ಚಿತ್ರಕ್ಕಾಗಿ ಶೂಟಿಂಗ್ ತಾಣಗಳನ್ನು ಹುಡುಕಲು ಮೈಸೂರಿನಲ್ಲಿ ಬೀಡು ಬಿಟ್ಟಿರುವ ನಿರ್ಮಾಪಕರಾದ ಮನು ಕುಮಾರನ್, ನಿರ್ದೇಶಕರಾದ ರಮೇಶ್ ಅರವಿಂದ್ ಮತ್ತು ನಾಯಕಿ ಪರುಲ್ ಯಾದವ್ ಇತ್ತೀಚೆಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ಮಾತೆಯ ಆಶೀರ್ವಾದವನ್ನು ಪಡೆದರು. ಏಪ್ರಿಲ್ ತಿಂಗಳಿನಲ್ಲಿ ಶುರುವಾಗುವ ಚಿತ್ರದ ಎಲ್ಲಾ ಅವತರಣಿಕೆಗಳ ಶೂಟಿಂಗ್ ಮೈಸೂರಿನಲ್ಲಿ ನಡೆಯಲಿದ್ದು, ಕನ್ನಡದ ಬಟರ್ಫ್ಲೈ ಚಿತ್ರಕ್ಕಾಗಿ ಪರುಲ್ ಯಾದವ್ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ. ಪ್ರಸಿದ್ಧ ನಟಿಯರಾದ ತಮನ್ನಾ ಭಾಟಿಯ, ಕಾಜಲ್ ಅಗರ್ವಾಲ್ ಕೂಡ ಮೈಸೂರಿನಲ್ಲಿ ತಮ್ಮ ತಮಿಳು ಮತ್ತು ತೆಲುಗು ವರ್ಷನ್ ಚಿತ್ರಕ್ಕಾಗಿ ಶೂಟಿಂಗ್ ಮಾಡಲಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top