RESPONSIVE LEADERBOARD AD AREA
Film News

‘ಭರಾಟೆ’ಯಲ್ಲಿ ಅಬ್ಬರಿಸಲಿದ್ದಾರೆ ಈ ಮೂವರು ಸಹೋದರರು…!!

ಡೈಲಾಗ್ ಕಿಂಗ್ ಸಾಯಿಕುಮಾರ್, ಕನ್ನಡದ ಆರ್ಮುಗ ರವಿಶಂಕರ್ ಮತ್ತು ಅಯ್ಯಪ್ಪ (ಕೆಜಿಎಫ್ ನಲ್ಲಿ ವಿಲನ್) ಈ ಮೂವರು ಸಹೋದರರು, ತಮ್ಮ ನಟೋರಿಯಸ್ ಲುಕ್ ಮತ್ತು ಅಭಿನಯದಿಂದ ಖಳನಟರಾಗಿ ಮಿಂಚಿದವರು. ಈಗ ಶ್ರೀಮುರಳಿ ನಾಯಕತ್ವದ ‘ಭರಾಟೆ’ ಚಿತ್ರದಲ್ಲಿ ಒಟ್ಟೊಟ್ಟಿಗೆ ನಟಿಸುತ್ತಿರುವ ಕುತೂಹಲಕಾರಿ ಸುದ್ದಿ ಬಂದಿದೆ.

ಭರ್ಜರಿ ನಿರ್ದೇಶಕ ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಈ ಮೂವರು ಸಹೋದರರು ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ರವಿಶಂಕರ್ ಮತ್ತು ಅಯ್ಯಪ್ಪ ನಟಿಸಿರುವ ಭಾಗಗಳ ಚಿತ್ರೀಕರಣ ಮುಗಿದಿದೆ. ಇನ್ನೆರಡು ದಿನಗಳಲ್ಲಿ ಸಾಯಿಕುಮಾರ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರಂತೆ.

ಈ ನಟರ ತಾಯಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಮೂಲದವರು. ಹಾಗಾಗಿ ಕನ್ನಡ, ಕರ್ನಾಟಕ ಇವರಿಗೆ ತವರಿನ ಸಂಬಂಧ. ಸಾಯಿಕುಮಾರ್ ನಾಯಕನಾಗಿ ಕನ್ನಡದಲ್ಲಿ ಸಾಕಷ್ಟು ಹೆಸರು ಮಾಡಿದವರು. ಆದರೆ ರವಿಶಂಕರ್ ಮತ್ತು ಅಯ್ಯಪ್ಪ ಬಹಳಷ್ಟು ವರ್ಷ ಡಬ್ಬಿಂಗ್ ಕಲಾವಿದರಾಗಿ ಗುರುತಿಸಿಕೊಂಡವರು. ಕೆಂಪೇಗೌಡ ಚಿತ್ರದ ಮೂಲಕ ಮೊದಲ ಬಾರಿಗೆ ಖಳನಟನಾಗಿ ‘ಇದು..ಆರ್ಮುಗ ಕೋಟೆ ಕಣೋ..’ಎಂದು ಅಬ್ಬರಿಸಿದ ರವಿಶಂಕರ್, ನಂತರ ಕನ್ನಡದಲ್ಲಿ ಅತ್ಯುತ್ತಮ ಖಳನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅಯ್ಯಪ್ಪ ಕೂಡ ಇತ್ತೀಚಿನ ಸೂಪರ್ ಹಿಟ್ ‘ಕೆಜಿಎಫ್’ ನಲ್ಲಿ ಖಳನಾಗಿ ಮಿಂಚಿದ್ದಾರೆ .

ಆಕರ್ಷಕ ಕಥೆ, ಚಿತ್ರಕಥೆ ಹೊಂದಿರುವ ‘ಭರಾಟೆ’ ಫ್ಯಾಮಿಲಿ ಎಂಟರ್ಟೈನರ್ ಆಗಿದ್ದು ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಭೋಜಪುರಿ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ವಿಶೇಷವಾದ ತಾರಾಗಣ ಎಲ್ಲಾ ಭಾಷೆಯ ಚಿತ್ರರಸಿಕರನ್ನು ಆಕರ್ಷಿಸಲು ಸಹಾಯಕವಾಗಲಿದೆ ಎನ್ನುವುದು ನಿರ್ಮಾಪಕರ ಅಂಬೋಣ.

ತೆಲುಗಿನ ಹಿರಿಯ ನಟ ಸುಮನ್, ತಾರಾ ಅನುರಾಧ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಭುವನ್ ಗೌಡ ಛಾಯಾಗ್ರಹಣವಿದೆ.

ಈಗಾಗಲೇ ಮಂಡ್ಯ, ಮೈಸೂರು ಮತ್ತು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಚಿತ್ರೀಕರಣ ಮುಗಿಸಿದ್ದು, ಇದೀಗ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಜನವರಿ 10 ರಿಂದ ಪ್ರಾರಂಭವಾಗಲಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top