RESPONSIVE LEADERBOARD AD AREA
Film News

ವರಮಹಾಲಕ್ಷ್ಮಿ ಹಬ್ಬಕ್ಕೆ ‘ಆನಂದ್’ ಗೆ ಎದುರಾಗಲಿದ್ದಾನಾ ‘ಪೈಲ್ವಾನ’…!!?

‘ದಿ ವಿಲನ್’ ಚಿತ್ರದಲ್ಲಿ ಎದುರುಬದುರಾಗಿ ನಟಿಸಿದ್ದ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಶಿವಣ್ಣ ಮತ್ತು ಕಿಚ್ಚ ಸುದೀಪ ಮತ್ತೊಮ್ಮೆ ಎದುರು ಬದುರಾಗಿ ಬರುತ್ತಿದ್ದಾರೆ. ಆದರೆ ಈ ಸಲ ಬೇರೆ ಬೇರೆ ಚಿತ್ರಗಳಲ್ಲಿ..! ಹೌದು..! ಶಿವಣ್ಣ ಅಭಿನಯದ ಪಿ ವಾಸು ನಿರ್ದೇಶನದ ‘ಆನಂದ್’ ಚಿತ್ರ ಹಾಗೂ ಕಿಚ್ಚ ಸುದೀಪ ಅಭಿನಯದ ಎಸ್ ಕೃಷ್ಣ ನಿರ್ದೇಶನದ ‘ಪೈಲ್ವಾನ ‘ ಈ ಎರಡೂ ಚಿತ್ರಗಳು ವರಮಹಾಲಕ್ಷ್ಮಿ ಹಬ್ಬದ ದಿನ (ಆಗಸ್ಟ್ 9) ಒಟ್ಟೊಟ್ಟಿಗೆ ಬಿಡುಗಡೆಯಾಗಲಿವೆ ಎನ್ನಲಾಗುತ್ತಿದೆ.

‘ಆನಂದ್’ ಚಿತ್ರದ ನಿರ್ಮಾಪಕ ಯೋಗೀಶ್ ದ್ವಾರಕೀಶ್, ಚಿತ್ರದ ಮುಹೂರ್ತದ ದಿನದಂದೇ, ಆಗಸ್ಟ್ 9 ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಇದೀಗ ‘ಪೈಲ್ವಾನ ‘ಚಿತ್ರದ ನಿರ್ದೇಶಕ ಎಸ್ ಕೃಷ್ಣ ಕೂಡ ಆಗಸ್ಟ್ 9 ಕ್ಕೆ ತಮ್ಮ ಚಿತ್ರವನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದಾರೆ. ತಮ್ಮ ಟ್ವಿಟ್ಟರ್ ಅಕೌಂಟಿನಲ್ಲಿ ಈ ಕುರಿತು ಬರೆದುಕೊಂಡಿರುವ ಕೃಷ್ಣ, ವರಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ ‘ಪೈಲ್ವಾನ’ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ.

ಈ ಸುದ್ದಿ ನಿಜವಾದಲ್ಲಿ ಇಬ್ಬರು ಸ್ಟಾರ್ ನಟರ ಚಿತ್ರಗಳ ನಡುವೆ ಬಾಕ್ಸಾಫೀಸ್ ಜಟಾಪಟಿ ನಡೆಯುವುದಂತೂ ಸತ್ಯ. ‘ಪೈಲ್ವಾನ’ ಚಿತ್ರದಲ್ಲಿ ಕಿಚ್ಚ ಸುದೀಪ ಕುಸ್ತಿ ಪಟುವಿನ ಪಾತ್ರದಲ್ಲಿ ನಟಿಸಿದ್ದು, ನಾಯಕಿಯಾಗಿ ಆಕಾಂಕ್ಷ ಸಿಂಗ್ ಅಭಿನಯಿಸುತ್ತಿದ್ದಾರೆ. ಸುನಿಲ್ ಶೆಟ್ಟಿ ಮತ್ತು ಸುಶಾಂತ್ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಹಿಂದಿ, ಭೋಜಪುರಿ, ಮರಾಠಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ‘ಆನಂದ್’ ಚಿತ್ರವನ್ನು ‘ದ್ವಾರಕೀಶ್ ಚಿತ್ರ’ ನಿರ್ಮಿಸುತ್ತಿದ್ದು, ಇದು ಅವರ ನಿರ್ಮಾಣದ 52ನೇ ಚಿತ್ರ. ‘ಶಿವಲಿಂಗ’ ಚಿತ್ರದ ಬಳಿಕ ನಿರ್ದೇಶಕ ಪಿ ವಾಸು ಅವರೊಂದಿಗೆ ಶಿವಣ್ಣ ಮತ್ತೊಮ್ಮೆ ಕೆಲಸ ಮಾಡಿದ್ದಾರೆ. ‘ಶಿವಲಿಂಗ’ ಚಿತ್ರದಲ್ಲಿ ಈ ಜೋಡಿ ಮೋಡಿ ಮಾಡಿತ್ತು. ರಚಿತಾ ರಾಮ್ ಮತ್ತು ಹಿರಿಯ ನಟ ಅನಂತ್ ನಾಗ್ ಈ ಚಿತ್ರದಲ್ಲಿ ಇರಲಿದ್ದಾರೆ ಎನ್ನಲಾಗಿದೆ.

ಈ ಎರಡು ದೊಡ್ಡ ಚಿತ್ರಗಳು ವರಲಕ್ಷ್ಮಿ ಹಬ್ಬದ ದಿನದಂದು ಬಿಡುಗಡೆಯಾದರೆ ಬಾಕ್ಸಾಫೀಸ್ ಯುದ್ಧ ನಡೆಯುವುದಂತೂ ಖಚಿತ. ಮುಂದಿನ ದಿನಗಳಲ್ಲಿ ಏನಾದರೂ ಬದಲಾವಣೆಯಾಗುತ್ತದೆಯೇ? ಅಥವಾ ಇದೆ ಮುಂದುವರಿಯಲಿದೆಯೇ ಕಾದು ನೋಡಬೇಕಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top