RESPONSIVE LEADERBOARD AD AREA
Film News

‘ಯುವರತ್ನ’ ಚಿತ್ರದ ಮೂಲಕ ‘ಬೋಮನ್ ಇರಾನಿ’ ಕನ್ನಡಕ್ಕೆ ಬರುತ್ತಿದ್ದಾರೆ…!!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ‘ಯುವರತ್ನ’ ಚಿತ್ರದ ಚಿತ್ರೀಕರಣ ಕರ್ನಾಟಕದ ವಿವಿಧ ಸುಂದರ ತಾಣಗಳಲ್ಲಿ, ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ನೇತೃತ್ವದಲ್ಲಿ ನಡೆಯುತ್ತಿದೆ.

ತಾರಾಗಣ, ಈ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು, ಈಗಾಗಲೇ ಪವರ್ ಸ್ಟಾರ್ ಗೆ ನಾಯಕಿಯಾಗಿ ಸಾಯೇಶ ಸೈಗಲ್ ಎಂಬ ಸುಂದರಿಯನ್ನು ಬಾಲಿವುಡ್ ನಿಂದ ಕರೆ ತರಲಾಗಿದೆ. ಇದೀಗ ತಮ್ಮ ವಿಶಿಷ್ಟ ಮ್ಯಾನರಿಸಂ ಗಳಿಂದ ಖ್ಯಾತರಾದ ಬಾಲಿವುಡ್ ನಟ ಬೋಮನ್ ಇರಾನಿ ಈ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿರುವ ಹೊಸ ಸುದ್ದಿ ಬಂದಿದೆ.

‘ತ್ರೀ ಈಡಿಯಟ್ಸ್’ ನ ಪ್ರಿನ್ಸಿಪಾಲ್, ‘ಮುನ್ನಾಭಾಯಿ ಎಂಬಿಬಿಎಸ್’ ನ ಡೀನ್ ಪಾತ್ರಗಳನ್ನು ನೋಡಿದವರಿಗೆ ಬೊಮನ್ ಇರಾನಿಯ ಬಗ್ಗೆ ಹೇಳುವ ಅಗತ್ಯವಿಲ್ಲ. ಈ ಪಾತ್ರಗಳಲ್ಲಿ ಅವರ ಅಭಿನಯವನ್ನು ಮರೆಯಲು ಸಾಧ್ಯವೇ ಇಲ್ಲ. ಇದೀಗ ಅದೇ ಬೊಮನ್ ಇರಾನಿ, ‘ಯುವರತ್ನ’ ಚಿತ್ರದಲ್ಲಿ ಅಭಿನಯಿಸಲಿದ್ದಾರಂತೆ.

ಈಗಾಗಲೇ ಬೊಮನ್ ಇರಾನಿ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವಾರದ ಹೊತ್ತಿಗೆ ಅವರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

ಪುನೀತ್ ಈ ಚಿತ್ರದಲ್ಲಿ ಕಾಲೇಜು ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರಕ್ಕೆ ‘ದ ಪವರ್ ಅಫ್ ಯೂತ್’ ಎಂಬ ಟ್ಯಾಗ್ ಲೈನ್ ಇದೆ. ಬೋಮನ್ ಇರಾನಿ ಈ ಚಿತ್ರದಲ್ಲಿ ಯಾವ ಪಾತ್ರವನ್ನು ಅಭಿನಯಿಸಲಿದ್ದಾರೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಪ್ರಿನ್ಸಿಪಾಲ್ ಅಥವಾ ಲೆಕ್ಚರರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಬೋಮನ್ ಇರಾನಿ ಅವರ ಕಾಲ್ ಶೀಟ್ ಮತ್ತು ಡೇಟ್ಸ್ ಗಳು ಖಚಿತವಾದ ಬಳಿಕವಷ್ಟೇ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡುವುದಾಗಿ ನಿರ್ದೇಶಕರು ಹೇಳಿದ್ದಾರೆ.

ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಡಾಲಿ ಧನಂಜಯ್ ಚಿತ್ರದಲ್ಲಿ ಖಳನಾಯಕನಾಗಿ ಮಿಂಚಲಿದ್ದಾರೆ. ಇನ್ನೊಬ್ಬ ನಟ ಅರುಣ್ ಗೌಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top