RESPONSIVE LEADERBOARD AD AREA
Film News

ಶೀಘ್ರವೇ ಬರಲಿದೆ ‘ಕೆಜಿಎಫ್ ಚಾಪ್ಟರ್-2’

ರಾಕಿಂಗ್ ಸ್ಟಾರ್ ಯಶ್ ಅವರ ‘ಕೆಜಿಎಫ್’ ಎಲ್ಲೆಡೆ ನಾಗಾಲೋಟ ಮುಂದುವರಿಸಿದ್ದು, ಈ ವಾರ ₹ 150 ಕೋಟಿ ಮುಟ್ಟುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಈ ನಡುವೆ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದ ‘ಚಾಪ್ಟರ್ 2’ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.

ಚಿತ್ರದ ವಿತರಕರ ಪ್ರಕಾರ, ದೇಶದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾದ ‘ಕೆಜಿಎಫ್’ ದಾಖಲೆಯ ಗಳಿಕೆ ಕಂಡಿದ್ದು, ಕನ್ನಡ ಚಿತ್ರರಂಗದಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಿದೆ. ಬಿಡುಗಡೆಯಾದ ಮೂರೇ ದಿನಗಳಲ್ಲಿ 50 ಕೋಟಿ ಗಳಿಸಿದ ಈ ಚಿತ್ರ, ಏಳು ದಿನಗಳಲ್ಲಿ 100 ಕೋಟಿ ಮುಟ್ಟಿತು. ಈ ವಾರ 150 ಕೋಟಿ ಗಳಿಸುವುದು ನಿಶ್ಚಿತ ಎನ್ನಲಾಗಿದೆ.

‘ಚಾಪ್ಟರ್ 2’ ನ ಶೇಕಡಾ 15 ರಷ್ಟು ಚಿತ್ರೀಕರಣ ಮುಗಿದಿದ್ದು, ಉಳಿದ ಭಾಗದ ಚಿತ್ರೀಕರಣಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ, ಎರಡನೇ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ.

‘ಚಾಪ್ಟರ್- 1’ ರಲ್ಲಿ ಚಿತ್ರದ ಮುಂದಿನ ಭಾಗದ ಕೆಲವು ದೃಶ್ಯಗಳನ್ನು ತೋರಿಸಲಾಗಿದ್ದು, ಎರಡನೇ ಭಾಗದ ಕುರಿತು ಕುತೂಹಲ ಹೆಚ್ಚಿದೆ. ಹಾಗಾಗಿ ಹೆಚ್ಚು ಕಾಯಿಸದೇ ಎರಡನೇ ಭಾಗವನ್ನು ಚಿತ್ರೀಕರಿಸಲು ಪ್ರಶಾಂತ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಚಿತ್ರದಲ್ಲಿ ‘ಕೆಜಿಎಫ್’ ನ ತಂತ್ರಜ್ಞರ ತಂಡವೇ ಎರಡನೇ ಭಾಗದಲ್ಲಿ ಮುಂದುವರಿಯಲಿದ್ದು, ಛಾಯಾಗ್ರಾಹಕ ಭುವನ್ ಗೌಡ, ಕಲಾ ನಿರ್ದೇಶಕ ಶಿವಕುಮಾರ್, ಸಂಗೀತ ನಿರ್ದೇಶಕ ರವಿ ಬಸ್ರೂರು, ಈ ಚಿತ್ರದಲ್ಲಿಯೂ ಪ್ರೇಕ್ಷಕರನ್ನು ಕಮಾಲ್ ಮಾಡಲಿದ್ದಾರೆ. ಅಗತ್ಯವಿದ್ದಲ್ಲಿ ಹೊಸ ನಟ-ನಟಿಯರನ್ನು ತೋರಿಸಲಾಗುವುದು ಎಂದಿದ್ದಾರೆ ಪ್ರಶಾಂತ್ ನೀಲ್.

ಚಿತ್ರದ ತೆಲುಗು ಮತ್ತು ತಮಿಳಿನ ವರ್ಷನ್ ಗಳು ಕೂಡ ಉತ್ತಮ ಪ್ರದರ್ಶನ ಕಾಣುತ್ತಿದ್ದು ಬರುವ ಸಂಕ್ರಾಂತಿಯ ವರೆಗೂ ಮುಂದುವರಿಯಲಿವೆ ಎನ್ನಲಾಗುತ್ತಿದೆ. ಈ ಮಧ್ಯೆ ಚಿತ್ರವು ಮಲೇಶಿಯಾ, ಆಸ್ಟ್ರೇಲಿಯಾ ಹಾಗೂ ದುಬೈನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚೀನಾದಲ್ಲಿ ಯೂ ಚಿತ್ರ ಪ್ರದರ್ಶನಕ್ಕೆ ಸಿದ್ಧತೆಗಳು ನಡೆದಿದ್ದು, ಇನ್ನೆರಡು ಮೂರು ದಿನಗಳಲ್ಲಿ ಚಿತ್ರ ಅಲ್ಲಿಯೂ ಬಿಡುಗಡೆಯಾಗಲಿದೆ ಎಂದಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top