RESPONSIVE LEADERBOARD AD AREA
Film News

75 ಕೋಟಿ ಬಜೆಟ್ ನಲ್ಲಿ ‘ಬಿಲ್ಲಾ ರಂಗ ಬಾಷಾ’…!!

ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ‘ಬಿಲ್ಲಾ ರಂಗ ಭಾಷಾ’ ಚಿತ್ರ ಹಲವು ವಿಷಯಗಳಿಂದ ಸಾಕಷ್ಟು ಸುದ್ದಿ ಮಾಡುತ್ತಿದೆ. ‘ರಂಗಿತರಂಗ’ ಮತ್ತು ‘ರಾಜರಥ’ ಚಿತ್ರಗಳ ಖ್ಯಾತಿಯ ಅನೂಪ್ ಭಂಡಾರಿ, ಚಿತ್ರವನ್ನು ನಿರ್ದೇಶಿಸುತ್ತಿದ್ದು, ‘ಬಿಲ್ಲಾ ರಂಗ ಭಾಷಾ’ ಸುಮಾರು 75 ಕೋಟಿ ವೆಚ್ಚದಲ್ಲಿ ಸಿದ್ಧವಾಗಲಿದೆ ಎನ್ನಲಾಗುತ್ತಿದೆ.

ಈ ಅದ್ದೂರಿ ವೆಚ್ಚದ ಕುರಿತು ಅನೂಪ್ ಅವರ ಬಳಿ ಕೇಳಿದಾಗ, “ನಾವೀಗ ಚಿತ್ರದ ಸಿದ್ಧತೆಯಲ್ಲಿ ತೊಡಗಿದ್ದೇವೆ. ಸಿದ್ಧತೆ ಪೂರ್ಣಗೊಂಡ ಮೇಲೆ ಈ ವಿಷಯದ ಬಗ್ಗೆ ಮಾತನಾಡಲಿದ್ದೇವೆ. ಅಲ್ಲದೆ ಬಜೆಟ್ ಬಗೆಗಿನ ಮಾಹಿತಿಯನ್ನು ನಮ್ಮ ನಿರ್ಮಾಪಕರು ಹೇಳಲಿದ್ದಾರೆ. ನನ್ನ ಗಮನವೇನಿದ್ದರೂ ಚಿತ್ರದ ನಿರ್ದೇಶನದ ಕಡೆಗೆ” ಎಂದಿದ್ದಾರೆ.

ಈ ಚಿತ್ರದ ಟೈಟಲ್ ಅನ್ನು ನೋಡಿದಾಗ, ಕಿಚ್ಚ ಮೂರು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಚಿತ್ರದಲ್ಲಿ ಮೂವರು ನಾಯಕಿಯರು ಇರಬಹುದು ಎಂದು ಗಾಂಧಿನಗರಿಗರ ಅಂಬೋಣ. ಚಿತ್ರತಂಡ ಈ ಸುದ್ದಿಯನ್ನು ಖಚಿತಪಡಿಸಿಲ್ಲ. ಚಿತ್ರದ ತಾರಾಗಣದ ಆಯ್ಕೆ ಇನ್ನಷ್ಟೇ ಆರಂಭವಾಗಬೇಕಿದೆ.

ಈ ಚಿತ್ರವನ್ನು ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ಅವರ ಹೋಂ ಬ್ಯಾನರ್ ‘ಸುಪ್ರಿಯಾನ್ವಿ’ ಮೂವೀಸ್ ನಿರ್ಮಿಸಲಿದ್ದಾರೆ.

ಸದ್ಯದಲ್ಲಿ ತೆಲುಗಿನ ‘ಸೈರಾ ನರಸಿಂಹ ರೆಡ್ಡಿ’ ಮತ್ತು ಕನ್ನಡದ ,’ಪೈಲ್ವಾನ್’ ಚಿತ್ರದಲ್ಲಿ ನಟಿಸುತ್ತಿರುವ ಕಿಚ್ಚ, ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್-3’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದುವರೆಗೆ ಸಹೋದರ ನಿರೂಪ್ ಭಂಡಾರಿ ಅವರಿಗಾಗಿ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ ಯಶಸ್ವಿಯಾಗಿರುವ ಅನೂಪ್ ಭಂಡಾರಿ, ಕಿಚ್ಚ ಸುದೀಪ್ ಅವರಿಗೆ ಈ ಭಾರಿ ಬಜೆಟ್ ನ ಈ ಚಿತ್ರ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top