RESPONSIVE LEADERBOARD AD AREA
Film News

ಕನ್ನಡದ ‘ಬಿಗ್ ಬಾಸ್’ ಸೀಸನ್ 6, ಅಕ್ಟೋಬರ್ 21 ರಿಂದ ಆರಂಭ..!

ಕಿಚ್ಚ ಸುದೀಪ ನಡೆಸಿಕೊಡುವ, ಸೂಪರ್ ಹಿಟ್ ರಿಯಾಲಿಟಿ ಶೋ ಬಿಗ್ ಬಾಸ್ 6ನೇ ಆವೃತ್ತಿ ಪ್ರಾರಂಭವಾಗುವ ಬಗ್ಗೆ ಅಧಿಕೃತ ಮಾಹಿತಿ ಹೊರ ಬಂದಿದೆ. ಅಕ್ಟೋಬರ್ 21 ರಿಂದ ಪ್ರತಿ ರಾತ್ರಿ 8 ಕ್ಕೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಇದೀಗ ಬಿಗ್ ಬಾಸ್ ನ ಪ್ರೋಮೋ ಬಿಡುಗಡೆಯಾಗಿದ್ದು ಇದೇ ಮೊದಲ ಬಾರಿಗೆ ಕನ್ನಡದಲ್ಲಿ  ‘ಬಿಗ್ ಬಾಸ್’ ಎಂದು ಬರೆಯಲಾಗಿದೆ. ಇದು ಸಹಜವಾಗಿ ಕನ್ನಡದ ಬಿಗ್ ಬಾಸ್ ಅಭಿಮಾನಿಗಳಿಗೆ ಖುಷಿ ತರಲಿದೆ.

ಪ್ರತಿ ವರ್ಷವೂ ಒಂದಲ್ಲ ಒಂದು ವಿಭಿನ್ನತೆಯೊಂದಿಗೆ ಮೂಡಿಬರುವ ಬಿಗ್ ಬಾಸ್ , ಈ ವರ್ಷ ಯಾವ ವಿಶೇಷತೆಯನ್ನು ಹೊತ್ತು ತರಲಿದೆ ಕಾದು ನೋಡಬೇಕು. ಚಿತ್ರರಂಗ ಮತ್ತು ಕಿರುತೆರೆಯ ನಟ ನಟಿಯರ ಜೊತೆಗೆ ಸಾಮಾನ್ಯ ಜನರಿಗೂ ಶೋದಲ್ಲಿ ಕಳೆದ ವರ್ಷ ಅವಕಾಶ ನೀಡಲಾಗಿತ್ತು. ಗಾಯಕ ಚಂದನ್ ಶೆಟ್ಟಿ ಗೆದ್ದು ಬೀಗಿದ್ದರು. ಈ ಸಲವೂ ಸೆಲೆಬ್ರಿಟಿಗಳ ಜೊತೆ ಸಾಮಾನ್ಯ ಜನರು ಭಾಗವಹಿಸುತ್ತಿರುವುದು ತಿಳಿದು ಬಂದಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಈ ಬಾರಿ ಭಾಗವಹಿಸುತ್ತಿರುವ ಸ್ಪರ್ಧಿಗಳ ಸಾಕಷ್ಟು ಪಟ್ಟಿಗಳು ಓಡಾಡುತ್ತಿದ್ದು, ಕುತೂಹಲ ಕೆರಳಿಸಿದೆ. ಆದಾಗ್ಯೂ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಾಗಿದೆ. ಕಲರ್ಸ್ ಬಳಗದ ಪ್ರೋಗ್ರಾಂ ಹೆಡ್ ಪರಮೇಶ್ ಗುಂಡ್ಕಲ್ ಈ ಬಗ್ಗೆ ಕುತೂಹಲವನ್ನು ಕಾಯ್ದಿರಿಸಿದ್ದಾರೆ.

ಬಿಗ್ ಬಾಸ್ ಮನೆಯನ್ನು ಇನ್ನೋವೆಟಿವ್ ಫಿಲಂಸಿಟಿಯಲ್ಲಿ ನಿರ್ಮಿಸಲಾಗಿದ್ದು, ಈ ಮನೆಯಲ್ಲಿ ವಿಶಿಷ್ಟ ಒಳ ವಿನ್ಯಾಸಗಳನ್ನು ಮಾಡಲಾಗಿದೆಯಂತೆ. ಕಳೆದ ವರ್ಷ, ಸೀಸನ್ ಮುಗಿದ ನಂತರ ಮನೆಗೆ ಅಗ್ನಿ ಅವಘಡ ಸಂಭವಿಸಿತ್ತು. ಹಾಗಾಗಿ ಅದೇ ಜಾಗದಲ್ಲಿ ಮತ್ತೆ ಹೊಸ ವಿನ್ಯಾಸದಲ್ಲಿ ಬಿಗ್ ಬಾಸ್ ಮನೆಯನ್ನು ರೂಪಿಸಲಾಗಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top