RESPONSIVE LEADERBOARD AD AREA
Film News

“ಸೀತಾರಾಮ ಕಲ್ಯಾಣ” ದ ಹಿಂದಿಯ ಸ್ಯಾಟಲೈಟ್ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟ…!

ಎಚ್ ಡಿ ಕುಮಾರಸ್ವಾಮಿ ಪುತ್ರ, ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರದ ಹಿಂದಿ ಸ್ಯಾಟಲೈಟ್ ಹಕ್ಕುಗಳು ದಾಖಲೆಯ 5.5 ಕೋಟಿ ರೂಗಳಿಗೆ ವ್ಯಾಪಾರವಾಗಿರುವ ಸುದ್ದಿ ಗಾಂಧಿನಗರದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಆರ್ ಕೆ ದುಗ್ಗಲ್ ಸ್ಟುಡಿಯೋದವರು ಚಿತ್ರದ ಹಿಂದಿಯ ಎಲ್ಲಾ ಹಕ್ಕುಗಳನ್ನು ಖರೀದಿಸಿದ್ದಾರಂತೆ. ನಿಖಿಲ್ ಕನ್ನಡದಲ್ಲಿ ಅಭಿನಯಿಸಿದ್ದು ಒಂದೇ ಸಿನಿಮಾ ‘ಜಾಗ್ವಾರ್’. ಅದು ಅಷ್ಟೇನೂ ಸದ್ದು ಮಾಡಿರಲಿಲ್ಲ. ತಿಂಗಳ ಹಿಂದೆ ಹಿಂದಿಯ ಕಿರುತೆರೆಯಲ್ಲಿ ಅದು ಬಿಡುಗಡೆಯಾದಾಗ ದಾಖಲೆಯ ವೀವ್ಸ್ ಪಡೆದಿದೆಯಂತೆ. ಹೊಸಬರಾದರೂ ಅವರ ಚಿತ್ರಗಳಿಗೆ ಅಲ್ಲಿ ಬೇಡಿಕೆ ಬಂದಿರುವ ಕಾರಣ, ಈ ಚಿತ್ರಕ್ಕೆ ಭಾರಿ ಮೊತ್ತ ಕೊಟ್ಟು ಖರೀದಿಸಲು ಮುಂದಾಗಿದ್ದಾರೆ. ಚಿತ್ರಕ್ಕೆ ಹಿಂದಿಯ ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನವಿರುವುದೂ ಬೇಡಿಕೆ ಹೆಚ್ಚಲು ಪ್ರಮುಖ ಕಾರಣವಂತೆ.

ರಚಿತಾ ರಾಮ್  ನಾಯಕಿಯಾಗಿರುವ ಈ ಚಿತ್ರದ ಶೂಟಿಂಗ್ ಭಾಗಶಃ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭವಾಗಿದೆ.

ಹಿರಿಯ ನಟ ಶರತ್ ಕುಮಾರ್, ಹಿಂದಿಯ ಮಧೂ, ರವಿಶಂಕರ್, ಚಿಕ್ಕಣ್ಣ ಪ್ರಮುಖ ತಾರಾಗಣದಲ್ಲಿದ್ದಾರೆ. ಚನ್ನಾಂಬಿಕ ಪ್ರೊಡಕ್ಷನ್ ತಯಾರಿಸುತ್ತಿರುವ ಈ ಚಿತ್ರಕ್ಕೆ, ಜೆ ಸ್ವಾಮಿ ಛಾಯಾಗ್ರಹಣ, ಅನೂಪ್ ಸಂಗೀತ ಇದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top