RESPONSIVE LEADERBOARD AD AREA
Film News

RGV ಯ ‘ಬೈರವ ಗೀತಾ’ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ತೆರೆಗೆ…!

ಕನ್ನಡದ ಹುಡುಗ ಡಾಲಿ ಧನಂಜಯ್, ಮೊದಲ ಬಾರಿಗೆ ನಾಯಕನಾಗಿ, ರಾಮ್ ಗೋಪಾಲ್ ವರ್ಮಾ ನಿರ್ಮಿಸುತ್ತಿರುವ ತೆಲುಗು ಮತ್ತು ಕನ್ನಡ ಚಿತ್ರ ‘ಭೈರವ ಗೀತ’ ಚಿತ್ರದಲ್ಲಿ ನಟಿಸುತ್ತಿರುವುದು ನಮಗೆಲ್ಲ ಗೊತ್ತೇ ಇದೆ. ಈಗ ಚಿತ್ರದ ಬಿಡುಗಡೆ ದಿನಾಂಕವನ್ನು ಗೊತ್ತುಪಡಿಸಿದ್ದು, ಇದೇ ಅಕ್ಟೋಬರ್ 26 ರಂದು ದಕ್ಷಿಣದ 4 ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

ಸಿದ್ದಾರ್ಥ ತಾತೋಲು ನಿರ್ದೇಶಿಸುತ್ತಿರುವ, ರಾಮ್ ಗೋಪಾಲ್ ವರ್ಮಾ ಸಹ ನಿರ್ಮಾಪಕರಾಗಿರುವ, ರಿಷಿ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ‘ಭೈರವ ಗೀತ’ ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ತಯಾರಿಸಲಾಗಿದ್ದು, ಈಗ ತಮಿಳು ಮತ್ತು ಮಲಯಾಳಂಗೆ ಡಬ್ ಮಾಡಲಾಗಿದೆ. ನಾಯಕಿ ಇರಾ ಮೋರ್ ಈ ಚಿತ್ರದ ಮೂಲಕ ಪರಿಚಯವಾಗುತ್ತಿರುವ ಮತ್ತೊಂದು ಪ್ರತಿಭೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಲಕ್ಷಗಟ್ಟಲೇ ವೀವ್ಸ್ ಪಡೆದುಕೊಂಡಿದೆ.

ಭೈರವ ಗೀತ ಒಂದು ವೈಲೆಂಟ್ ಲವ್ ಸ್ಟೋರಿ. ಇಂದಿನ ಯುವಕ ಯುವತಿಯರ ಜೀವನವನ್ನು ಸದೃಶವಾಗಿ ತೋರಿಸುವಂತಹ ಕಥಾನಕ ಇರುವ ಸಿನೆಮಾ. ಭಾರತದ ಜಾತಿ ವ್ಯವಸ್ಥೆಯ ಸಂಕೀರ್ಣತೆಯ ಕುರಿತಾದ ಚಿತ್ರ ಇದು ಎನ್ನಲಾಗಿದೆ.

ಕನ್ನಡದ ಪ್ರತಿಭಾವಂತ ಯುವ ನಟ ಧನಂಜಯ್, ಟಗರು ಚಿತ್ರದಲ್ಲಿ ‘ಡಾಲಿ’ಯಾಗಿ ಜನಮನ ಗೆದ್ದಿದ್ದರು. ಸ್ವತಃ ರಾಮ್ ಗೋಪಾಲ್ ವರ್ಮಾ ಬೆಂಗಳೂರಿಗೆ ಬಂದು ‘ಟಗರು’ ಚಿತ್ರವನ್ನು ನೋಡಿ, ಧನಂಜಯ್ ಅಭಿನಯವನ್ನು ಮೆಚ್ಚಿದ್ದರು. ಅದರ ಪರಿಣಾಮವೋ ಎಂಬಂತೆ RGVಯ ಈ ಪ್ರಾಜೆಕ್ಟ್ ನಲ್ಲಿ ಈಗ ಧನಂಜಯ್ ಅಭಿನಯಿಸುತ್ತಿದ್ದು, ಈ ಚಿತ್ರ ಧನಂಜಯ್ ಗೆ ಬಿಗ್ ಬ್ರೇಕ್ ನೀಡಲಿದೆ ಎನ್ನಲಾಗುತ್ತಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top