RESPONSIVE LEADERBOARD AD AREA
Film News

ನೈಜ ಘಟನೆ ಆಧಾರಿತ ‘ಬೆಲ್ ಬಾಟಮ್’..!

ರಿಷಬ್ ಶೆಟ್ಟಿ ಮತ್ತು ಹರಿಪ್ರಿಯ ಅಭಿನಯದ ‘ಬೆಲ್ ಬಾಟಂ’ ಚಿತ್ರ ತನ್ನ ವಿಶಿಷ್ಟ ಪೋಸ್ಟರ್ ಗಳು ಹಾಗೂ ಹಾಡುಗಳಿಂದ ಸುದ್ದಿ ಮಾಡುತ್ತಿದೆ. ಚಿತ್ರ ಫೆಬ್ರವರಿ 15 ರಂದು ಬಿಡುಗಡೆಯಾಗಲಿದ್ದು, ಚಿತ್ರದ ಕುರಿತು ನಿರ್ದೇಶಕ ಜಯತೀರ್ಥ ಮಾಹಿತಿ ನೀಡಿದ್ದಾರೆ.

ಸುಮಾರು ಹತ್ತು ವರ್ಷಗಳ ಹಿಂದೆ ಕೋಲಾರದಲ್ಲಿ ನಡೆದಿದೆ ಎನ್ನಲಾದ ಕಳ್ಳತನದ ಘಟನೆಯೊಂದರ ಸ್ಪೂರ್ತಿ ಪಡೆದು ಈ ಚಿತ್ರದ ಕಥೆಯನ್ನು ಮತ್ತು ಚಿತ್ರಕಥೆಯನ್ನು ಟಿ ಕೆ ದಯಾನಂದ್ ರಚಿಸಿದ್ದಾರೆ. ಈ ಕತೆಯನ್ನು 80ರ ದಶಕದ ಹಿನ್ನೆಲೆಯಲ್ಲಿ ತಯಾರಿಸಲಾಗಿದ್ದು ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾರ ರೆಟ್ರೋ ಲುಕ್ ನಲ್ಲಿರುವ ಫೋಟೋಗಳು ಆಕರ್ಷಕವಾಗಿವೆ. ಬಿಡುಗಡೆಯಾದ ಕ್ಷಣದಿಂದಲೂ ಸಖತ್ ವೈರಲ್ ಆಗಿದ್ದು, ಎಲ್ಲೆಡೆ ಈ ಚಿತ್ರದ ಬಗ್ಗೆ ಕುತೂಹಲ ಕೆರಳಿಸಿವೆ.

ಚಿತ್ರದಲ್ಲಿ ಅಪರಾಧ ಪ್ರಕರಣವನ್ನು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ ಆದರೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಲಭ್ಯವಿರುವುದಿಲ್ಲ ಸಿಗುವ ಕೆಲವೇ ಕ್ಲೂ ಗಳನ್ನು ಬಳಸಿಕೊಂಡು ಅಧಿಕಾರಿ ಪ್ರಕರಣವನ್ನು ಪ್ರೀತಿಸುತ್ತಾರೆ ಈ ಕತೆಯಲ್ಲಿ ಹಾಸ್ಯ ಮಿಶ್ರಿತ ಅಂಶಗಳಿದ್ದು ಚಿತ್ರಕಥೆಯಲ್ಲಿ ಹದವಾಗಿ ಸಂಯೋಜನೆಗೊಂಡಿದೆ.

ಹಳೆಯ ಕಾಲದ ಹೀರೋಗಳಂತೆ ರೆಟ್ರೊ ಲುಕ್ ಹೊಂದಿರುವ ಮತ್ತು ಹಾಸ್ಯದ ಟೈಮಿಂಗ್ ಹೊಂದಿರುವ, ನಗಿಸುವ ಚಾತುರ್ಯ ಉಳ್ಳ ನಟನಿಗಾಗಿ ಬಹಳಷ್ಟು ಹುಡುಕಿದೆವು. ಈ ನಡುವೆ ಆಕಸ್ಮಿಕವಾಗಿ ರಿಷಬ್ ಶೆಟ್ಟಿ ಮಾಡಿದ್ದ ಡಬ್ ಸ್ಮ್ಯಾಷ್ ವಿಡಿಯೋವೊಂದನ್ನು ಮೊಬೈಲ್ ನಲ್ಲಿ ನೋಡುತ್ತಿದ್ದಂತೆ ಈ ಪಾತ್ರಕ್ಕೆ ಅವರು ಸೂಕ್ತ ಎನಿಸಿತು. ಸ್ವತಃ ನಿರ್ದೇಶಕರೂ ಆಗಿರುವ ರಿಷಬ್ ಅವರನ್ನು ಸಂಪರ್ಕಿಸಿದಾಗ ಅವರು ಒಪ್ಪಿಕೊಂಡರು. ಬಳಿಕ ಹರಿಪ್ರಿಯ ಹಾಗೂ ಯೋಗರಾಜ್ ಭಟ್ ಅವರನ್ನು ಸಂಪರ್ಕಿಸಿದೆವು. ನಿರ್ದೇಶಕ ಯೋಗರಾಜ್ ಭಟ್ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಅವರು ರೆಟ್ರೊ ಲುಕ್ ನಲ್ಲಿ ಆಕರ್ಷಕವಾಗಿ ಕಾಣುವಂತೆ ನಿರ್ದೇಶಕ ಜಯತೀರ್ಥ ಹಾಗು ರಿಷಬ್ ಅವರ ಪತ್ನಿ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.

ಗೋಲ್ಡನ್ ಹಾರ್ಸ್ ಸಿನೆಮಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಶಿವಮಣಿ, ಪ್ರಕಾಶ್, ಸತೀಶ್, ಮೊದಲಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top