RESPONSIVE LEADERBOARD AD AREA
Film News

ಶಿವಣ್ಣನ ‘ಬೈರತಿ ರಣಗಲ್’ ಗೆ ತೆಲುಗಿನ ಬಾಲಯ್ಯ..!?

ಶಿವಣ್ಣ, ಯುವ ನಿರ್ದೇಶಕ ನರ್ತನ್ ನಿರ್ದೇಶನದ ‘ಭೈರತಿ ರಣಗಲ್’ ಎಂಬ ವಿಭಿನ್ನ ಹೆಸರಿನ ಚಿತ್ರದಲ್ಲಿ ನಟಿಸಲಿದ್ದು, ಇದರಲ್ಲಿ ತೆಲುಗಿನ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ವಿಶೇಷ ಅತಿಥಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಬಾಲಕೃಷ್ಣ ಅಲಿಯಾಸ್ ಬಾಲಯ್ಯ ಅವರು ಡಾ.ರಾಜಕುಮಾರ್ ಕುಟುಂಬಕ್ಕೆ ಬಹಳ ಆಪ್ತರು. ಈ ನಡುವೆ ಅವರು ಅಭಿನಯಿಸಿರುವ ಅವರ ತಂದೆ ಎನ್ ಟಿ ರಾಮರಾವ್ ಅವರ ಜೀವನ ಚರಿತ್ರೆ ಆಧಾರಿತ ಚಿತ್ರ ‘ಕಥಾನಾಯಕುಡು’ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

ಬಾಲಯ್ಯನವರ ನೂರನೇ ಚಿತ್ರ ‘ಗೌತಮಿಪುತ್ರ ಶಾತಕರ್ಣಿ’ಯಲ್ಲಿ ಶಿವಣ್ಣ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು. ಆ ಮೂಲಕ ಶಿವಣ್ಣ ಮೊದಲ ಬಾರಿಗೆ ತೆಲುಗಿನಲ್ಲಿ ಅಭಿನಯಿಸಿದ್ದರು. ಇದೀಗ ಶಿವಣ್ಣನ 125 ನೇ ಚಿತ್ರದಲ್ಲಿ ಬಾಲಯ್ಯ ಅಭಿನಯಿಸುತ್ತಿರುವುದು ವಿಶೇಷವಾಗಿದೆ.

‘ಭೈರತಿ ರಣಗಲ್’ ಈ ಹೆಸರನ್ನು ಎಲ್ಲೋ ಕೇಳಿದ ಹಾಗಿದೆಯಲ್ಲ ಎನ್ನುತ್ತಿದ್ದೀರಾ…? ನಿಮ್ಮ ಊಹೆ ಸರಿ. ಕಳೆದ ವರ್ಷ ಶಿವಣ್ಣ ಮತ್ತು ಶ್ರೀಮುರುಳಿ ಅಭಿನಯದ ‘ಮಫ್ತಿ’ ಚಿತ್ರದಲ್ಲಿ ಶಿವಣ್ಣರ ಪಾತ್ರದ ಹೆಸರು ಇದೇ. ಭೂಗತ ಜಗತ್ತಿನ ಡಾನ್ ಪಾತ್ರ ಶಿವಣ್ಣಗೆ ತುಂಬಾ ಹಿಡಿಸಿದ್ದು ಅದನ್ನು ಕೇಂದ್ರ ವಾಗಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆಯಲಾಗಿದೆಯಂತೆ.

ಶಿವಣ್ಣರ ಹೋಮ್ ಬ್ಯಾನರ್, ಶ್ರೀ ಮುತ್ತು ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಚಿತ್ರಕ್ಕೆ ಮಫ್ತಿ ಚಿತ್ರದ ನವೀನ್ ಕುಮಾರ್ ಛಾಯಾಗ್ರಾಹಕರಾಗಿ ಕೆಲಸ ಮಾಡಲಿದ್ದಾರೆ.

ರವಿವರ್ಮಾ ರ ‘ರುಸ್ತುಂ’, ಪ್ರಮೋದ್ ಚಕ್ರವರ್ತಿಯವರ ‘ದ್ರೋಣ’ ಬರಲಿರುವ ಮುಂದಿನ ಚಿತ್ರಗಳು. ಇದರ ನಡುವೆ ಲಕ್ಕಿ ಗೋಪಾಲ್ ನಿರ್ದೇಶಿಸಲಿರುವ ‘ಎಸ್ ಆರ್ ಕೆ’ ಚಿತ್ರ ಕೂಡ ಸೆಟ್ಟೇರಲಿದೆ. ಇದರಲ್ಲಿ ಶಿವರಾಜ್ ಕುಮಾರ್ ‘ಡ್ಯಾನ್ಸ್ ಕೋಚ್’ ಪಾತ್ರ ವಹಿಸಲಿದ್ದಾರೆ. ಹಾಗಾಗಿ ಈ ವರ್ಷ ಶಿವಣ್ಣ ಫುಲ್ ಬ್ಯುಸಿ. ಅಭಿಮಾನಿಗಳು ಫುಲ್ ಖುಷ್.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top