RESPONSIVE LEADERBOARD AD AREA
Audio Reviews

AUDIO REVIEW : ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ

ಎರಡು ವರ್ಷಗಳ ಕೆಳಗೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಮೂಲಕ ಸಂಚಲನ ಸೃಷ್ಟಿ ಮಾಡಿದ ಸುನಿ ಮತ್ತು  ಭರತ್ ಬಿಜೆ ಜೋಡಿ ಮತ್ತೊಮ್ಮೆ ತಮ್ಮ ಛಾಪು ಒತ್ತಲು ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಯನ್ನು ಉಣಬಡಿಸಲು ಬರುತ್ತಿದಾರೆ. ಹಾಗೆ ನೋಡಿದರೆ ವರ್ಷದ ಕೆಳಗೆ ಇದೇ ಜೋಡಿ ಬಹುಪರಾಕ್ ಎಂಬ ಅದ್ಬುತ ಚಿತ್ರರತ್ನವನ್ನು ನೀಡಿದ್ದರು .ಆ ಚಿತ್ರದ ಸಂಗೀತ ವೈವಿಧ್ಯತೆಯಿಂದ ಕೇಳುಗರನ್ನು ರಂಜಿಸಿತ್ತು . ದುರಾದ್ರುಷ್ಟವಶಾತ್ ಆ ಚಿತ್ರದ ಸಂಗೀತವು ಬಹುತೇಕ ಜನರಿಗೆ ತಲುಪಲಿಲ್ಲ.
[divide]
ಈ ಚಿತ್ರದ ಧ್ವನಿಸುರುಳಿ ಯಾವ ರೀತಿ ಮೋಡಿ ಮಾಡೀತು ಎಂಬುದನ್ನು ವಿಮರ್ಶಿಸೋಣ .
[divide]
೧.) ಸೇವಂತಿಗೆ ಚೆಂಡಿನಂತ :
ದ್ವನಿಸುರುಳಿಯ ಮೊದಲ ಗೀತೆ . ಹಾಡಿನ ಮೊದಲ ಸಾಲು ೧೯೬೪ ರಲ್ಲಿ ತೆರೆ ಕಂಡ ಚಿನ್ನದ ಗೊಂಬೆ ಚಿತ್ರದ ಒಂದು ಮನೋಘ್ನ ಜನಪ್ರಿಯ ಗೀತೆ . ಹಾಡು ತದೇಕ ಚಿತ್ತದಿಂದ ಸಾಗಿ ರಾಪ್  ನಂಬರ್ ಆಗಿ ಪರಿವರ್ತಗೊಳ್ಳುತ್ತದೆ . ಅಲ್ಬುಮಿನ ಒಂದು catchy tune ಎಂದರೆ ತಪ್ಪಾಗಲಾರದು .
[divide]
೨.) ಎಲ್ಲೂ ಮಾರದ ಹೃದಯ :
ಅಲ್ಬುಮಿನ ಸುಶ್ರಾವ್ಯ ಗೀತೆ . ಹಿನ್ನಲೆಗಾಯಕನಾಗಿ ಚೇತನ್ , ದಂತಕಥೆ ಸೋನು ನಿಗಮ್ ರನ್ನು ನೆನಪಿಸದೆ ಇರಲಾರರು . ಸುನಿ ಅವರ ನಿಕೇತನ  ಗೀತರಚನೆ ಹಾಡಿಗೆ ಮತ್ತಷ್ತು ಮೆರುಗು ನೀಡಿದೆ . ಇದರ ಇನ್ನೊಂದು  ಫಾಸ್ಟ್ version ತುಂಬಾ attractive ಎನಿಸುತ್ತದೆ .
[divide]
೩.) ತುಸು ಪ್ರೀತಿಯ :
ಮತ್ತೊಂದು ನಿಧಾನ ಗತಿಯ ಮೆಲೋಡಿ ಗೀತೆ . ಸೋನು ನಿಗಮ್  ಪಾಲಕ್ ಮುಚ್ಚಲ್ ಕಂಠಸಿರಿಯಲ್ಲಿ ಇದು ಆಪ್ಯಾಯಮಾನ ಎನಿಸಬಹುದು .ಆದರೆ ಎರಡು ಸ್ಲೋ ಟ್ರ್ಯಾಕ್  ಚಿತ್ರಕ್ಕೆ ಪೂರಕವೇ ಎಂಬ ಪ್ರಶ್ನೆ ಇರಲಾರದು.
[divide]
೪) ನಾನೇ ಬರೆದ ಪ್ರೇಮ ಕಥೆಗೆ :
ಇದು ಧ್ವನಿಸುರುಳಿಯ ಕಾರುಣ್ಯ ಭರಿತ ಗೀತೆ . ರಾಜೇಶ್ ಮತ್ತು ಅನುರಾಧ ಅವರು ಒಂದು ಸರಿಸುಮಾರು ಹಾಡನ್ನು ತಮ್ಮ ಸುಶ್ಯ್ರಾವ್ಯ ಕಂಠದಿಂದ ಪರಿಣಾಮಕಾರಿ ಆಗಿಸಿದ್ದಾರೆ . ಆಲ್ಬುಮ್ನಲ್ಲಿ ಇಂತ patho songನ  ಮತ್ತಷ್ತು ಕಟ್ಟುಗ್ರ ರೂಪದ ಅವತರಣಿಕೆ ಇದೆ. ಇದು ಸ್ವಲ್ಪ ಸಹ್ಯತೆಯನ್ನು ಪರೀಕ್ಷಿಸಬಹುದು .
[divide]
೫.) ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ :
ಈ ಗೀತೆ SOLS ನ ಟೈಟಲ್ ಸಾಂಗ್ ನ ಯಥಾವತ್ ಅನುಕರಣೆ ಎಂದರೆ ಅದು ಉತ್ಪ್ರೇಕ್ಷೆ ಎನಿಸದು .
[divide]
ಸರಾಸರಿಯಲ್ಲಿ ನೋಡಿದರೆ SILS album ಉತ್ತಮ ಎನಿಸಿದರೂ ,SOLS ಮಟ್ಟಕ್ಕೆ ನಿಲ್ಲದಿರುವುದು ಸ್ವಲ್ಪ ಬೇಸರವೆನಿಸಬಹುದು . ಆದರೆ ಸುನಿ ಅವರ  trademark  ದೃಶ್ಯ ವೈಭವಕ್ಕೆ  ಪೂರಕವಾಗಿ  ಹೊಂದಿಕೊಂಡರೆ ಇದು ಸಿನಿಪ್ರೇಮಿಗಳನ್ನು ಸೆಳೆಯುವದು guarantee.
RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top