RESPONSIVE LEADERBOARD AD AREA
Audio Reviews

AUDIO REVIEW : Kushi Kushiyagi

ಹೆಚ್.ಪಿ.ಆರ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ, ಯೋಗಿ.ಜಿ.ರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ರವರ ಮುಂದಿನ ಬಹು ನಿರೀಕ್ಷೆಯ ಚಿತ್ರವಾದ ‘ಖುಷಿಖುಷಿಯಾಗಿ’ಚಿತ್ರದ ಹಾಡುಗಳು ಅದಾಗಲೇ ಬಿಡುಗಡೆಯಾಗಿದ್ದು, ಇದೇ ಪ್ರಥಮ ಬಾರಿಗೆ ಅನೂಪ್ ರುಬೆನ್ಸ್ ಸಂಗೀತ ನಿರ್ದೇಶನದಲ್ಲಿ ಕೆಲವು ಸುಮಧುರ ಹಾಡುಗಳು ಮೂಡಿಬಂದಿವೆ. ನಮ್ಮೆಲ್ಲರಿಗೂತಿಳಿದಿರುವಂತೆ ಇದು ತೆಲುಗಿನ 2013ರ ಯಶಸ್ವೀ ಚಿತ್ರವಾದ ‘ಗುಂಡೆ ಜಾರಿ ಗಲ್ಲಂತಯ್ಯಿಂದೇ’ ಚಿತ್ರದ ರಿಮೇಕಾಗಿದ್ದು,ತೆಲುಗಿನ ಕೆಲವು ಹಾಡುಗಳನ್ನು ಅನೂಪ್ ಇಲ್ಲಿ ಬಳಸಿಕೊಂಡಿದ್ದಾರೆ. ‘ಖುಷಿಖುಷಿಯಾಗಿ’ ಚಿತ್ರದ ಹಾಡುಗಳ ವಿಮರ್ಷೆ ಇಂತಿದೆ.

 

(1) ನೀನ್ಯಾರೇ: ಸಂತೋಷ್ ಹಾಗು ಶರ್ಮಾಲಿ ಕಾಟ್ಕೆ ರವರ ಗಾಯನದಲ್ಲಿ ಮೂಡಿಬಂದಿರುವ ಒಂದು ಸಹಜವಾದ ಡುಯೆಟ್ ಹಾಡು ಇದಾಗಿದ್ದು, ತನ್ನ ಪ್ರೇಯಸಿನ್ನು ವರ್ಣಿಸುವ ಸುಂದರವಾದ ಹಾಡಾಗಿ ಕೇಳುಗರಿಗೆ ತಂಪಾದ ಗಾಳಿಯಂತೆ ಸೋಕುತ್ತದೆ ಹಾಗು ಕವಿರಾಜ್ ರವರ ಸಾಹಿತ್ಯದಲ್ಲಿ ಬರುವ ಪ್ರಾಸಬದ್ದವಾದ ಸಾಲುಗಳಾದ ‘ಎಲ್ಲಿಂದ ಹಾರಿ, ಬಂದೆ ಚಕೋರಿ, ಆದೆ ಲಗೋರಿ’ ಮನಸ್ಸಿಗೆಮುದ ನೀಡುತ್ತದೆ. ಈ ಹಾಡಿಗೆ ಮೂಲ ಚಿತ್ರದ ರಾಗವನ್ನೇ ಬಳಸಲಾಗಿದೆ.

 

(2) ನೀನೇ ನೀನೇ: ಬಹಳ ದಿನಗಳ ನಂತರ ಬಾಲಿವುಡ್ ನ ಖ್ಯಾತ ಗಾಯಕರಾದ ಅದ್ನಾನ್ ಸಾಮಿ ರವರ ಸ್ವರದಲ್ಲಿ ಸುಶ್ರಾವ್ಯವಾಗಿ ಮೂಡಿಬಂದಿರುವ ಹಾಡಿಗೆ, ತಕ್ಕಂತೆ ಅಮೋಘವಾದ ರಾಗವುಮೇಳೈಸಿದ್ದು, ಕೇಳುಗರ ಮನಸೂರೆಗೊಳ್ಳುತ್ತದೆ. ಪ್ರತೀ ಚರಣದ ನಡುವೆ ಹಾದುಹೋಗುವ ಸಂಗೀತದ ನಿನಾದ, ಕೇಳುಗನನ್ನು ಹೊಸ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಜಯಂತ ಕಾಯ್ಕಿಣಿ ರವರಸಾಹಿತ್ಯದಲ್ಲಿ ‘ಸೋಗಿಲ್ಲದ ಒಂದು ಸಂತೋಷವು ನನ್ನತ್ತಲೇ ಜಾಲ ಬೀಸುತ್ತಿದೆ’ ಎಂಬಂತಹ ಅರ್ಥಪೂರ್ಣ ಸಾಲುಗಳು ಹಾಡಿನ ಘನತೆಯನ್ನು ಹೆಚ್ಚಿಸುತ್ತವೆ. ಅದ್ನಾನ್ ರವರ ಪದ ಉಚ್ಚಾರಣೆ ಅಲ್ಲಲ್ಲಿಮಂಕಾಗಿ ಕಂಡುಬಂದರೂ ಅಥವಾ ಕಳೆದುಹೋದಂತೆ ಭಾಸವಾದರೂ, ಅವರ ಅಮೋಘವಾದ ಸ್ವರ ಮಾಧುರ್ಯವು ಇವೆಲ್ಲವನ್ನೂ ಸರಿದೂಗಿಸುತ್ತದೆ. ಮತ್ತೊಮ್ಮೆ ಮೂಲ ಚಿತ್ರದ ಹಾಡನ್ನೇ ಇಲ್ಲಿಯೂಬಳಸಿಕೊಂಡಿದ್ದಾರೆ ಹಾಗು ಮೂಲ ಗಾಯಕರೇ ಈ ಹಾಡಿಗೂ ಸ್ವರವಾಗಿದ್ದಾರೆ.

 

(3) ರಿಂಬೋಲಾ: ಚಿತ್ರದ ಐಟಂ ಹಾಡದ ರಿಂಬೋಲಾ ಗೀತೆಯು ಗಣೇಶ್ ರವರದೇ ಆದ ರೋಮಿಯೋ ಚಿತ್ರದ ‘ಎವ್ರಿ ಬಾಡಿ ರಾಕ್ ಟು ದಿ ಬೀಟು’ ಹಾಡನ್ನು ನೆನಪಿಸುತ್ತದೆ. ಅತಿಯಾದ ಡ್ರಮ್ ಬೀಟ್ಸ್ನಿಂದ ಕೂಡಿರುವ ಹಾಡು, ಟಪ್ಪಾಂಗುಚ್ಚಿ ಪ್ರಿಯರಿಗೆ ಇಷ್ಟವಾಗುತ್ತದೆ ಹಾಗು ಟಪ್ಪಾಂಗುಚ್ಚಿ ನೃತ್ಯಕ್ಕೆ ಹೆಚ್ಚಿನ ಪ್ರಧಾನ್ಯತೆಯಿದೆ. ವಿ. ನಾಗೇಂದ್ರ ಪ್ರಸಾದ್ ರವರ ಸಾಹಿತ್ಯವಿರುವ ಹಾಡಿಗೆ ಮತ್ತೊಮ್ಮೆಸಂತೋಷ್ ಧ್ವನಿಯಾಗಿದ್ದಾರೆ.

 

(4) ಅರೆ ಅರೆ: ಕವಿರಾಜ್ ರವರ ಸುಂದರವಾದ ಸಾಹಿತ್ಯದಲ್ಲಿ ‘ಅರೆರೆರೆ ಮತ್ತೆ ಹೃದಯ ಹಾಡಿತು ತಂತಾನೇ, ಖುಷಿ ಖುಷಿಯಾಗಿ’ ಎಂಬ ಅದ್ಭುತವಾದ ಸಾಲುಗಳಿಂದ ಶುರುಗೊಳ್ಳುವ ಹಾಡಿಗೆ,ಮತ್ತೊಮ್ಮೆ ಮೂಲ ಚಿತ್ರದ ರಾಗವನ್ನೇ ಬಳಸಲಾಗಿದ್ದು, ಸ್ವತಃ ಅನೂಪ್ ರವರೇ ಈ ಗೀತೆಯನ್ನು ಹಾಡಿದ್ದಾರೆ. ಅವರಿಗೆ ಅನುರಾಧ ಭಟ್ ರವರು ಉತ್ತಮವಾದ ಸಾಥ್ ನೀಡಿದ್ದಾರೆ. ಹಾಡಿನುದ್ದಕ್ಕೂಇಣುಕಿ ಹೋಗುವ ತಾಳ ಹಾಗು ವಾದ್ಯಬರಿತವಾದ ಲಹರಿಯು ಹಾಡನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುತ್ತದೆ. ಆ ಮೂಲಕ ಕೇಳುಗರ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುತ್ತದೆ. ಮೂಲ ಚಿತ್ರದಯಶಸ್ವೀ ಹಾಡೆನಿಸಿಕೊಂಡ ಈ ಗೀತೆಯು, ಇಲ್ಲಿಯೂ ಕೂಡ ಗಣೇಶ್-ಅಮೂಲ್ಯರವರ ಹಿಟ್ ಕಾಂಬಿನೇಷನ್ ನಲ್ಲಿ ಅಭಿಮಾನಿಗಳಿಗೆ ಇಷ್ಟವಾದಲ್ಲಿ ಅಚ್ಚರಿ ಪಡಬೇಕಿಲ್ಲ.

 

(5) ಅತಿಯಾಯಿತು: ಜಯಂತ ಕಾಯ್ಕಿಣಿ ರವರ ಸಾಹಿತ್ಯವಿರುವ ಈ ಪ್ರೇಮ ಗೀತೆಗೆ ಖ್ಯಾತ ಗಾಯಕಿಯಾದ ಶ್ರೇಯ ಘೋಶಾಲ್ ರವರ ಕಂಠಸಿರಿಯೇ ಜೀವಾಳವಾಗಿದೆ. ಅಲ್ಲಲ್ಲಿ ಚಿತ್ರದ ಮತ್ತೊಂದುಹಾಡದ ‘ನೀನೇ ನೀನೇ’ ಹಾಡಿನ ಛಾಯೆಯಿದ್ದರೂ, ಚಿತ್ರದಲ್ಲಿ ಇದೊಂದು ಸ್ವಮಕ್ ಗೀತೆಯೆನ್ನಬಹುದು. ಶ್ರೇಯರಿಗೆ ಸಾಥ್ ನೀಡಿರುವ ಮತ್ತೊಬ್ಬ ಹಿಂದಿ ಗಾಯಕರಾದ ಅಂಕಿತ್ ತಿವಾರಿ ಯವರುಕೂಡ ಅತ್ತ್ಯುತ್ತಮವಾಗಿ ಹಾಡಿದ್ದಾರೆ. ಸುಶ್ರಾವ್ಯವಾಗಿ ಮೂಡಿಬಂದಿರುವ ಈ ಹಾಡು ಕೂಡ ಹದಿಹರೆಯದ ಹೃದಯಗಳಿಗೆ ಇಷ್ಟವಾಗುತ್ತದೆ.

 

 

ಮೂಲ ಹಾಡಿನ ಸ್ಪೂರ್ತಿ ಪಡೆದಿದ್ದರೂ ಮಾಧುರ್ಯಕ್ಕೆ ಹೆಚ್ಚು ಒತ್ತು ನೀಡಿರುವ ‘ಖುಷಿ ಖುಶಿಯಾಗಿ’ ಹಾಡುಗಳು, ಚಿತ್ರದ ಯಶಸ್ಸಿಗೆ ಒಂದು ಪ್ರಮುಖವಾದ ಅಂಶವಾಗಲೆಂದು ಕೋರುತ್ತಾ, ಈ ಚಿತ್ರವೂಕೂಡ ಕಳೆದ ವರ್ಷದ ಚಿತ್ರವಾದ ‘ಶ್ರಾವಣಿ ಸುಬ್ರಮಣ್ಯ’ ಸಿನಿಮಾದಂತೆ, ಗಣೇಶ್ ಹಾಗು ಅಮೂಲ್ಯ ರವರ ವೃತ್ತಿ ಬದುಕಿನಲ್ಲಿ ಮತ್ತೊಂದು ಹಿಟ್ ಚಿತ್ರವಾಗಲೆಂದು ಕೋರುತ್ತದೆ ನಮ್ ಸಿನಿಮಾ ತಂಡ

 

– ಶ್ರೀಕಾಂತ್ .ಆರ್, ನಮ್ ಸಿನಿಮಾ

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top