RESPONSIVE LEADERBOARD AD AREA
Film News

‘ಅನಂತು v/s ನುಸ್ರತ್’ ಬಿಡುಗಡೆ ಮುಹೂರ್ತ ಫಿಕ್ಸ್..!!!

‘ಅನಂತು v/s ನುಸ್ರತ್’ ಎಂಬ ವಿನಯ್ ರಾಜ್ ಕುಮಾರ್ ಅಭಿನಯದ ವಿಶಿಷ್ಟ ಹೆಸರಿನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಡಿಸೆಂಬರ್ 28 ಕ್ಕೆ ಬಿಡುಗಡೆಯ ಮುಹೂರ್ತ ನಿಗದಿಗೊಳಿಸಲಾಗಿದ್ದು, ಈ ಕುರಿತು ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.

ಡಿಸೆಂಬರ್ ನಲ್ಲಿ ದೊಡ್ಡ ಚಿತ್ರಗಳು ತೆರೆಗೆ ಅಪ್ಪಳಿಸಲಿದ್ದು, ಈ ವಾರ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಆರೆಂಜ್’, ಧನಂಜಯ್ ಅಭಿನಯದ ‘ಭೈರವ ಗೀತ’ ಚಿತ್ರಗಳು ತೆರೆಗೆ ಬರಲಿವೆ. ಡಿಸೆಂಬರ್ 21 ರಂದು ಬಹು ನಿರೀಕ್ಷಿತ ‘ಕೆಜಿಎಫ್’ ಚಿತ್ರ ಬಿಡುಗಡೆಯಾಗಲಿದೆ. ಈ ಮೊದಲು ಡಿಸೆಂಬರ್ 28ರಂದು ಶಿವಣ್ಣ ಅಭಿನಯದ ‘ಕವಚ’ ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ ಆ ಚಿತ್ರದ ಬಿಡುಗಡೆ ದಿನಾಂಕ ಮುಂದೆ ಹೋಗಿದೆ. ಹೀಗಾಗಿ ‘ಅನಂತು v/s ನುಸ್ರತ್’ ಚಿತ್ರ ಈ ದಿನಾಂಕದಂದು ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ.

ಸುಧೀರ್ ಶಾನಭೋಗ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಒಂದು ಬಿಗ್ ಬ್ರೇಕ್ ಗಾಗಿ ಕಾದಿರುವ ವಿನಯ್ ರಾಜಕುಮಾರ್ ಈಗಾಗಲೇ ‘ಗ್ರಾಮಾಯಣ’ ಚಿತ್ರದಲ್ಲಿ ಹಳ್ಳಿ ಹೈದನಾಗಿ ನಟಿಸುತ್ತಿರುವ ಬಗ್ಗೆ ಇದೇ ಕಾಲಂ ನಲ್ಲಿ ಬರೆದಿದ್ದೆವು. ಇದೀಗ ಅವರ ‘ಅನಂತು v/s ನುಸ್ರತ್’ ಎಂಬ ರೊಮ್ಯಾಂಟಿಕ್ ಕಾಮಿಡಿ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು ವಿನಯ್ ಕಾತರತೆಯಿಂದ ಕಾಯುತ್ತಿದ್ದಾರೆ.

ಮಾಣಿಕ್ಯ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರವಿಶಂಕರ್, ಗುರುಪ್ರಸಾದ್, ಭಗವಾನ್, ತಾರಾಗಣದಲ್ಲಿದ್ದಾರೆ. ಲತಾ ಹೆಗಡೆ ಅನಂತುವಿನ ‘ನುಸ್ರತ್’ ಪಾತ್ರದಲ್ಲಿ ಮಿಂಚಲಿದ್ದಾರೆ. ಕಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಗೌಪ್ಯವಾಗಿ ಇಟ್ಟಿದೆ. ವಿನಯ್ ರಾಜಕುಮಾರ್ ವಕೀಲನ ಪಾತ್ರದಲ್ಲಿ, ಹಾಗೂ ಲತಾ ಹೆಗಡೆ ನ್ಯಾಯಾಧೀಶೆಯ ಪಾತ್ರದಲ್ಲಿ ಅಭಿನಯಿಸುತ್ತಿರುವುದು ತಿಳಿದು ಬಂದಿದೆ.

ಸುಧೀರ್ ಶಾನಭೋಗ್, ‘ಈ ಚಿತ್ರ ವಿಶಿಷ್ಟ ಪ್ರೇಮಕಥೆಯೊಂದಿಗೆ ತೆರೆಯ ಮೇಲೆ ಬರುತ್ತಿದೆ. ವಿನಯ್ ರಾಜಕುಮಾರ್ ಮತ್ತು ಲತಾ ಹೆಗಡೆಯವರ ಅಭಿನಯ ಆಕರ್ಷಕವಾಗಿ ಮೂಡಿ ಬಂದಿದ್ದು ಪ್ರೇಕ್ಷಕನಿಗೆ ವಿಭಿನ್ನ ಅನುಭವ ನೀಡಲಿದೆ’ ಎಂದು ಹೇಳಿದ್ದಾರೆ. ಚಿತ್ರಕ್ಕೆ ಸುನಾದ್ ಗೌತಮ್ ಸಂಗೀತ, ಅಭಿಷೇಕ್ ಕಾಸರಗೋಡು ಛಾಯಾಗ್ರಹಣವಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top