RESPONSIVE LEADERBOARD AD AREA
Film News

ಅಂಬಿ ಪುತ್ರನ ‘ಅಮರ್’ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್..!!

ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಭಿನಯಿಸುತ್ತಿರುವ ‘ಅಮರ್’ ಚಿತ್ರ, ಸೆನ್ಸಾರ್ ಮಂಡಳಿಯ ಮುಂದೆ ಬಂದಿದ್ದು ಯು/ ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಈ ಚಿತ್ರದ, ಅಂಬರೀಶ್ ಅವರ ಜನಪ್ರಿಯ ಚಿತ್ರವಾದ ‘ಒಲವಿನ ಉಡುಗೊರೆ’ಯ ಅತ್ಯಂತ ಸುಮಧುರವಾದ , ‘ಒಲವಿನ ಉಡುಗೊರೆ ಕೊಡಲೇನು…’ ಗೀತೆಯನ್ನು ಇದೇ ಏಪ್ರಿಲ್ 6ರಂದು ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೊಂದು ಗೀತೆ, ಶ್ರೇಯಾ ಗೋಷಾಲ್ ಮತ್ತು ಸೋನು ನಿಗಮ್ ಅವರ ಸುಮಧುರ ಕಂಠದಲ್ಲಿ, ಮೂಡಿಬಂದಿರುವ ‘ಸುಮ್ಮನೆ….’ ಎಂದು ಆರಂಭವಾಗುವ ಗೀತೆಯನ್ನು ಏಪ್ರಿಲ್ 20 ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಸಿದ್ಧಪಡಿಸಿ ಕೊಂಡಿದೆ. ಹಾಡುಗಳ ಸಂಗೀತ ಸಂಯೋಜನೆಯನ್ನು ಅರ್ಜುನ್ ಜನ್ಯ ಮಾಡಿದ್ದಾರೆ.

ಅಂಬರೀಶ್ ಪುತ್ರ ಅಭಿಷೇಕ್, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಸ್ಟಿಲ್ಸ್ ಗಳಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದು, ಚಿತ್ರ ಬಿಡುಗಡೆಗೆ ಮುನ್ನವೇ ಸಖತ್ ಸುದ್ದಿ ಮಾಡುತ್ತಿದ್ದಾರೆ. ಚಿತ್ರದ ಪೋಸ್ಟರ್ಸ್ ಮತ್ತು ಮೇಕಿಂಗ್ ಕೂಡ ಚಿತ್ರವನ್ನು ಕಾತರದಿಂದ ಕಾಯುವಂತೆ ಮಾಡಿದೆ.

ಕರ್ನಾಟಕದ ಸುಂದರ ಲೋಕೇಶನ್ ಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಿದ್ದಷ್ಟೇ ಅಲ್ಲದೆ ಸ್ವಿಜರ್ಲ್ಯಾಂಡಿನ ಸುಂದರ ಸ್ಥಳಗಳಲ್ಲಿ ಹಾಡುಗಳ ಮತ್ತು ದೃಶ್ಯಗಳ ಚಿತ್ರೀಕರಣ ನಡೆಸಲಾಗಿದೆ. ಚಿತ್ರ ಇದೀಗ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಮುಗಿಸಿದ್ದು, ಶೀಘ್ರದಲ್ಲಿಯೇ ಸೆನ್ಸಾರ್ ಮಂಡಳಿಯ ಮುಂದೆ ಬರಲಿದೆ.

ಚಿತ್ರವನ್ನು ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಗೆ ಆಲೋಚನೆ ಮಾಡಲಾಗಿದೆ. ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಇವರ ಜೊತೆಯಲ್ಲಿ ದೇವರಾಜ್, ಸಾಧು ಕೋಕಿಲ ಮುಂತಾದವರ ದೊಡ್ಡ ತಾರಾಗಣವಿದೆ. ಯಜಮಾನ ಚಿತ್ರದಲ್ಲಿ ಮಿಂಚಿರುವ ಬೆಡಗಿ ತಾನ್ಯ ಹೋಪ್ ಅವರಿಗೆ ಇದು ಎರಡನೇ ಕನ್ನಡ ಚಿತ್ರ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top