RESPONSIVE LEADERBOARD AD AREA
Movie Articles

Aatagara promises to be a jolly ride

ಅಂದಿನ ಸಿಂಗಪೂರಿನಲ್ಲಿ ರಾಜಾಕುಳ್ಳ, ಶೃತಿ ಚಿತ್ರಗಳಿಂದಿಡಿದು ಇಂದಿನ ಆಪ್ತಮಿತ್ರ, ವಿಷ್ಣುವರ್ಧನ, ಚಾರುಲತ ಮುಂತಾದ ಸದಭಿರುಚಿಯ ಯಶಸ್ವೀ ಚಿತ್ರಗಳನ್ನು ಬೆಳ್ಳಿತೆರೆಗೆ ಅರ್ಪಿಸಿರುವ ಹೆಸರಾಂತ ನಿರ್ಮಾಪಕರು, ಕನ್ನಡದ ಕುಳ್ಳರೆಂದೆ ಖ್ಯಾತಿ ಪಡೆದ ದ್ವಾರಕೀಶ್ ರವರ ಮತ್ತೊಂದು ಬಹುನಿರೀಕ್ಷೆಯ, ಬಹು ತಾರಾಗಣದ ಚಿತ್ರವಾದ ‘ಆಟಗಾರ’ ಮೈದಾನಕ್ಕಿಳಿಯಲು ಈ ವಾರ ಸಜ್ಜಾಗಿದ್ದಾನೆ. ‘ಆ ದಿನಗಳು’, ‘ಸೂರ್ಯಕಾಂತಿ, ಪರಾರಿಯಂತಹ ಯಶಸ್ವೀ ಚಿತ್ರಗಳ ರುವಾರಿಯೆನಿಸಿಕೊಂಡಿರುವ ಕೆ. ಎಂ.ಚೈತನ್ಯರವರ ದಿಗ್ದರ್ಶನದಲ್ಲಿ ಮೂಡಿಬಂದಿರುವ ಚಿತ್ರದಲ್ಲಿ ನಾಯಕನಾಗಿ ಚಿರು ಸರ್ಜಾ, ನಾಯಕಿಯರಾಗಿ ಮೇಘನರಾಜ್, ಪಾರುಲ್ ಯಾದವ್ ಜತೆಯಲ್ಲಿ ಅನು ಪ್ರಭಾಕರ್, ರವಿಶಂಕರ್ ಮುಂತಾದ ಕಲಾವಿದರ ದೊಡ್ಡ ದಂಡೆ ಇದೆ. ಟ್ರೇಲರ್ ನಿಂದ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಿತ್ರವು ಆಂಗ್ಲ ಭಾಷೆಯ ಹೆಸರಾಂತ ಲೇಖಕರಾದ ಅಗತಾ ಕ್ರಿಶ್ಚಿಯವರ ‘ಅಂಡ್ ದೆನ್ ದೇರ್ ವರ್ ನನ್’ ಎಂಬ ಕಾದಂಬರಿ ಆಧಾರಿತ ಸಿನಿಮಾವೆಂಬ ಮಾತುಗಳು ಕೇಳಿಬರುತ್ತಿವೆ. ಚಿತ್ರದ ಹಾಡುಗಳು ಕೂಡ ಈಗಾಗಲೆ ಬಿಡುಗಡೆಯಾಗಿದ್ದು, ಅನುಪ್ ಸಿಳೀನ್ ರವರ ಗಾನಲಹರಿಯಲ್ಲಿ ಹಾಡುಗಳು ಅತ್ಯದ್ಭುತವಾಗಿ ಮೂಡಿಬಂದಿವೆ. ಕನ್ನಡದ ದಿಗ್ಗಜ ನಟರ ನೆನಪಿನಂಗಳಕ್ಕೆ ಕೊಂಡೊಯ್ಯುವ ‘ತಾರಮ್ಮಯ್ಯ’, ಥ್ರಿಲ್ಲಿಂಗ್ ಫೀಲ್ ಕೊಡುವಂತಹ ವಿಶಿಷ್ಟವೆನಿಸುವ ‘ಊಲಾಲಾಲ’ ಹಾಗು ‘ಆಳೂರಲ್ಲಿ ಉಳಿದೊನ್ಯಾರೊ’ ಹಾಡುಗಳು ಅದಾಗಲೆ ಕೇಳುಗರಿಗೆ ಇಷ್ಟವಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಇಮ್ಮಡಿಸಿದೆ. ದ್ವೀಪವೊಂದರಲ್ಲಿ 10 ಆಗಂತುಕರು ತೆರಳಿದಾಗ ಆಗುವ ಅನಿರೀಕ್ಷಿತ ನಿಗೂಢ ಘಟನೆಗಳ ಕಥಾನಕವುಳ್ಳ ಆಟಗಾರ ಚಿತ್ರವನ್ನು ಎ.ಕೆ.ಕೆ.ಎಂಟರ್ ಪ್ರೈಸರ್ಸ್ ಲಾಂಛನದಲ್ಲಿ, ದ್ವಾರಕೀಶ್ ರವರ ಸುಪುತ್ರರಾದ ಯೋಗೀಶ್ ದ್ವಾರಕೀಶ್ ರವರು ಅರ್ಪಿಸುತ್ತಿದ್ದಾರೆ ಹಾಗು ಚಿತ್ರಕ್ಕೆ ಸತ್ಯ ಹೆಗಡೆಯವರ ಛಾಯಾಗ್ರಹಣ, ರವಿವರ್ಮರವರ ಸಾಹಸ ನಿರ್ದೇಶನ, ಎ.ಹರ್ಷರ ನೃತ್ಯ ನಿರ್ದೇಶನವಿದೆ. ಹೀಗೆ ಹೆಸರಾಂತ ತಂತ್ರಜ್ಞರುಳ್ಳ ಆಟಗಾರನ ಅಸಲಿ ಆಟ ಇದೇ 28ರಿಂದ ಶುರುವಾಗಲಿದೆ.

ಈ ವರ್ಷದ ಕೃಷ್ಣ ಲೀಲಾ ಚಿತ್ರದಿಂದ ಶುರುಗೊಂಡು, ಇತ್ತೀಚಿನ ರಂಗೀತರಂಗ, ಉಪ್ಪಿ 2 ಚಿತ್ರಗಳವರೆಗೂ ಸದಭಿರುಚಿಯ ಸ್ವಮೇಕ್ ಚಿತ್ರಗಳ ಜೈತ್ರಯಾತ್ರೆಯಲ್ಲಿ ಮುನ್ನುಗ್ಗುತ್ತಿರುವ ಕನ್ನಡ ಚಿತ್ರರಂಗಕ್ಕೆ, ಆಟಗಾರ ಕೂಡ ಒಂದು ಅತ್ಯದ್ಭುತ ಚಿತ್ರವಾಗಲಿ ಹಾಗು ಆ ಯಶಸ್ವೀ ಚಿತ್ರಗಳ ಸಾಲಿಗೆ ಸೇರಲಿ ಎಂದು ಆಶಿಸುತ್ತಾ, ಆಟಗಾರನಿಗೆ ‘ಆಲ್ ದಿ ವೇರಿ ಬೆಸ್ಟ್’ ಹೇಳಬಯುಸುತ್ತದೆ ನಮ್ ಸಿನಿಮಾ ತಂಡ

– ಶ್ರೀಕಾಂತ್. ಆರ್, ನಮ್ ಸಿನಿಮಾ

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top