RESPONSIVE LEADERBOARD AD AREA
Film News

ರಕ್ಷಿತ್ ಶೆಟ್ಟಿ, ಹೇಮಂತ್ ರಾವ್ ,ಹೊಸ ಸಿನಿಮಾ ಬಗ್ಗೆ ಎಸ್ಕ್ಲೂಸಿವ್ ಸುದ್ದಿ…!

ರಕ್ಷಿತ್ ಶೆಟ್ಟಿ, ಹೇಮಂತ್ ರಾವ್, ಪುಷ್ಕರ್ ಕಾಂಬಿನೇಷನ್ ನಲ್ಲಿ ‘ತೆನಾಲಿ’ ಎಂಬ ಹೊಸ ಸಿನಿಮಾ, ತಯಾರಾಗುವ ಎಕ್ಸ್ಕ್ಲೂಸಿವ್ ಸುದ್ದಿಯೊಂದು ಬಂದಿದೆ.

ಈ ಮೂವರು ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಎಂಬ ವಿಶಿಷ್ಟ ಚಿತ್ರ ಮಾಡಿ ಗೆದ್ದಿದ್ದರು. ಹೇಮಂತ್ ರಾವ್ ರ ನಿರ್ದೇಶನ ಪ್ರತಿಭೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವಂತೆ ಮಾಡಿದ ಸಿನಿಮಾ ಅದು. ಈಗ ಹೇಮಂತ್ ರಾವ್ ‘ಕವಲು ದಾರಿ’ ಸಿನಿಮಾ ತಯಾರಿಯಲ್ಲಿ ತೊಡಗಿಕೊಂಡಿದ್ದು, ಈ ನಡುವೆ ಅವರ ತಲೆಯಲ್ಲಿ ಹೊಸ ಚಿತ್ರದ ಎಳೆಯೊಂದು ಹುಟ್ಟಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಪತ್ತೇದಾರಿ ಯೊಬ್ಬನ ಕಥೆಯುಳ್ಳ, ಸಸ್ಪೆನ್ಸ್ ಥ್ರಿಲ್ಲರ್ ಇದಾಗಲಿದೆಯಂತೆ.

ಕೇವಲ ಚಿತ್ರದ ಒನ್ ಲೈನ್ ಕಥೆ ಹೊಳೆದಿದ್ದು, ಇನ್ನಷ್ಟೇ ಚಿತ್ರಕಥೆ ರಚಿಸಬೇಕಿದೆ. ಈ ಬಗ್ಗೆ ಹೇಮಂತ್ ರಾವ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ, ‘ನನಗೆ ಸ್ವತಂತ್ರ ಪೂರ್ವದ ಅವಧಿಯ ಘಟನೆಗಳ ಬಗ್ಗೆ ಅತೀವ ಆಸಕ್ತಿ. ಚಿತ್ರದ ಸೆಟ್ ತಯಾರಿಸುವಾಗ ಸ್ವಾತಂತ್ರ್ಯಪೂರ್ವದ ಕುರಿತಾದ ಹೊಸ ಐಡಿಯಾವೊಂದು ಬಂದಿದ್ದು, ಇದರ ಬಗ್ಗೆ ರಕ್ಷಿತ್ ಶೆಟ್ಟಿ ಜೊತೆ ಚರ್ಚಿಸಿದಾಗ ಅವರು ಇಷ್ಟಪಟ್ಟರು. ಅದಕ್ಕಾಗಿ ಹಾಗೇ ಸುಮ್ಮನೆ ಫೋಟೋ ಶೂಟ್ ಮಾಡಿ ಮಜಾ ತೆಗೆದುಕೊಂಡಿದ್ದೇವೆ’

ತಮ್ಮ ಟ್ವೀಟ್ ಗೆ ರಿಟ್ವೀಟ್ ಮಾಡುತ್ತಾ, ”ತೆನಾಲಿ’ ಇನ್ನೂ ಕೇವಲ ಒಂದು ಐಡಿಯಾ ಅಷ್ಟೇ. ಇದರ ಮೇಲೆ ಇನ್ನೂ ಕೆಲಸ ಆರಂಭವಾಗಬೇಕಿದೆ. ‘ಕವಲು ದಾರಿ’ ಚಿತ್ರ ಪೂರ್ಣಗೊಂಡ ಮೇಲಷ್ಟೇ ಈ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದೇನೆ. ಎಲ್ಲವೂ ಅಂದುಕೊಂಡಂತೆ ಆದರೆ ನಾವು ಮೂವರು (ಹೇಮಂತ್, ರಕ್ಷಿತ್ ಶೆಟ್ಟಿ, ಪುಷ್ಕರ) ಮತ್ತೊಮ್ಮೆ ಒಟ್ಟಾಗಿ ಕೆಲಸ ಮಾಡಲಿದ್ದೇವೆ’ ಎಂದಿದ್ದಾರೆ.

ಈ ಮೂವರ ಕಾಂಬಿನೇಷನ್ ಬಗ್ಗೆ ಅಪಾರ ನಿರೀಕ್ಷೆಗಳಿರುವುದರಿಂದ, ಚಿತ್ರ ಆರಂಭಕ್ಕೆ ಮುನ್ನವೇ ಕುತೂಹಲ ಹುಟ್ಟಿರುವುದಂತೂ ಸತ್ಯ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top