ಕನ್ನಡ ಸಿನಿಮಾ ಲೋಕಕ್ಕಿಂದು ನಂಬಲಾರದ ದುಃಖದ ಸುದ್ದಿ…

ಹಿರಿತೆರೆ ಮತ್ತು ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ನಟ Dileep Raj ಹೃದಯಾಘಾತದಿಂದ ವಿಧಿವಶರಾಗಿದ್ದಾರೆ ಎಂಬ ಸುದ್ದಿ ಸಿನಿಪ್ರಿಯರ ಮನಸ್ಸನ್ನು ಭಾರವಾಗಿಸಿದೆ.

‘ಬಾಯ್‌ಫ್ರೆಂಡ್’ ಚಿತ್ರದ ಹಾಡುಗಳು, Milana ಚಿತ್ರದ ಹೇಮಂತ್ ಪಾತ್ರ, Tony ಚಿತ್ರದ ಓಟಗಾರನ ಆ ಅಭಿನಯ… ಇವೆಲ್ಲವೂ ಸದಾ ಮನಸ್ಸಿನಲ್ಲಿ ಕಾಡುತ್ತಲೇ ಇರುತ್ತವೆ.

ಕಲಾವಿದರಿಗೆ ಸಾವಿಲ್ಲ ಎನ್ನುವ ಮಾತಿಗೆ ದಿಲೀಪ್ ರಾಜ್ ಅವರ ಬದುಕೇ ದೊಡ್ಡ ಉದಾಹರಣೆ.

ನಟನಾಗಬೇಕು ಎಂಬ ಕನಸಿನೊಂದಿಗೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ಕನ್ನಡ ಚಿತ್ರರಂಗದ ಗಮನ ಸೆಳೆದರು. ನಂತರ ಅದೃಷ್ಟವೂ ಜೀವನದಲ್ಲಿ ಎಷ್ಟು ದೊಡ್ಡ ಪಾತ್ರ ವಹಿಸುತ್ತದೆ ಎಂಬುದನ್ನು ತುಂಬಾ ನೇರವಾಗಿ ಒಪ್ಪಿಕೊಂಡ ವ್ಯಕ್ತಿ ಅವರು.

“ಅದೃಷ್ಟ ಇಲ್ಲ ಅಂದ್ರೆ ನೂರು ಕೋಟಿ ನಿನ್ನ ಮೇಲೆ ಹಾಕಿದ್ರೂ ಅದು ಮಣ್ಣೇ…” ಎಂಬ ಅವರ ಮಾತುಗಳು ಇಂದು ಮತ್ತಷ್ಟು ನೋವು ಕೊಡುತ್ತಿವೆ.

ಒಳ್ಳೆಯ ನಟ, ನಿರ್ದೇಶಕ, ನಿರ್ಮಾಪಕ… ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಅದ್ಭುತ ಮನುಷ್ಯ. ಯಾರೇ ಆಗಲಿ ಭೇಟಿಯಾದ ಸಂದರ್ಭಗಳು ಬೆರಳೆಣಿಕೆಯಷ್ಟಿದ್ದರೂ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವಂತಹ ವ್ಯಕ್ತಿತ್ವ ಅವರದು. ಕಿರುತೆರೆಯಲ್ಲಿ ಮನೆಮಾತಾಗಿದ್ದ ಅವರು, ಕನ್ನಡ ಸಿನಿಮಾಗಳಲ್ಲೂ ವಿಭಿನ್ನ ಪಾತ್ರಗಳ ಮೂಲಕ ತಮ್ಮದೇ ಗುರುತು ಮೂಡಿಸಿದ್ದರು.

U Turn, Ambi Ning Vayassaytho ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅವರು ನೀಡಿದ ಅಭಿನಯ ಸಿನಿಪ್ರಿಯರ ಮನದಲ್ಲಿ ಸದಾ ಉಳಿಯಲಿದೆ.

ಕಳೆದ ಕೆಲವು ವರ್ಷಗಳು ಅವರ ಸಿನಿ ಬದುಕಿನ “Second Innings” ಆಗಿತ್ತು. ಇನ್ನೂ ಹಲವು ಅದ್ಭುತ ಪಾತ್ರಗಳಲ್ಲಿ ಅವರನ್ನು ನೋಡಬೇಕಿತ್ತು… ಕನ್ನಡ ಚಿತ್ರರಂಗಕ್ಕೆ ಅವರು ಇನ್ನೂ ತುಂಬಾ ಕೊಡಬೇಕಿತ್ತು… One solid talent… gone too soon.

ಇಂದು ಆ ಪ್ರತಿಭಾವಂತ ಕಲಾವಿದ ನೆನಪು ಮಾತ್ರ… ಆದರೆ ಅವರು ಮೂಡಿಸಿದ ಪಾತ್ರಗಳು, ಅವರು ಬಿಟ್ಟ ಭಾವನೆಗಳು ಎಂದಿಗೂ ಜೀವಂತ.

ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ದಿಲೀಪ್ ರಾಜ್ ಸರ್ 🙏💔

Leave a Reply

Your email address will not be published. Required fields are marked *