ಬೇಲ್ LAST SCHEDULE ಧರ್ಮಶಾಲಾದಲ್ಲಿ 💥

ಕನ್ನಡ ಸಿನಿರಂಗದ ಬಹು ನಿರೀಕ್ಷಿತ ಸಿನಿಮಾಗಳ ಪೈಕಿ ಒಂದು ಆಗಿ ಹೊರಹೊಮ್ಮಿರುವ ‘ಬೇಲ್’ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಕಾಲಿಟ್ಟಿದೆ. ಹ್ಯಾಟ್ರಿಕ್ ಹೀರೋ Shivarajkumar ಹಾಗೂ ಸ್ಟೈಲಿಷ್ ನಿರ್ದೇಶಕ Pavan Wadeyar ಕಾಂಬಿನೇಷನ್‌ನ ಈ ಚಿತ್ರ ಇದೀಗ ಅಂತಿಮ ಹಂತದ ಚಿತ್ರೀಕರಣಕ್ಕಾಗಿ ಧರ್ಮಶಾಲಾಕ್ಕೆ ತೆರಳಿದ್ದು, ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇತ್ತೀಚೆಗೆ ಬಿಡುಗಡೆಯಾದ ‘ಬೇಲ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಮಳೆಯ ನಡುವೆ ಛತ್ರಿ ಹಿಡಿದು ನಿಂತಿದ್ದ ಶಿವರಾಜ್‌ಕುಮಾರ್ ಅವರ ಗಂಭೀರ ಲುಕ್ ಅಭಿಮಾನಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿತ್ತು. ಪೋಸ್ಟರ್‌ನಲ್ಲೇ ಒಂದು ವಿಭಿನ್ನ ಮಿಸ್ಟರಿ ಹಾಗೂ ಇಂಟೆನ್ಸ್ ಫೀಲ್ ಕಂಡುಬಂದಿದ್ದು, “ಇದು ಯಾವ ತರಹದ ಕಥೆ?” ಎಂಬ ಪ್ರಶ್ನೆ ಈಗಲೂ ಸಿನಿಪ್ರೇಕ್ಷಕರ ಮನಸ್ಸಿನಲ್ಲಿ ಓಡಾಡುತ್ತಿದೆ.

ವಿಶೇಷವೆಂದರೆ, ಚಿತ್ರದ ಕಥೆ ಬಗ್ಗೆ ಚಿತ್ರತಂಡ ಇನ್ನೂ ಒಂದು ಸುಳಿವನ್ನೂ ಬಿಟ್ಟಿಲ್ಲ. ಧರ್ಮಶಾಲಾಕ್ಕೆ ಹೊರಟಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಪವನ್ ವಡೆಯರ್, “ಬೇಲ್ ಚಿತ್ರದ ಕೊನೆಯ ಶೆಡ್ಯೂಲ್‌ಗಾಗಿ ಧರ್ಮಶಾಲಾಕ್ಕೆ ಹೊರಟಿದ್ದೇವೆ” ಎಂದು ಬರೆದು ಚಿತ್ರದ ಶೂಟಿಂಗ್ ಅಂತಿಮ ಹಂತ ತಲುಪಿರುವುದನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ.

ಈ ಒಂದು ಅಪ್ಡೇಟ್ ಸಾಕು, ಶಿವಣ್ಣ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ಹೈಪ್ ಮತ್ತಷ್ಟು ಜೋರಾಗಿದೆ. KVN Productions⁠ ನಿರ್ಮಾಣದ ಈ ಭಾರಿ ಬಜೆಟ್ ಚಿತ್ರದಲ್ಲಿ ಹಿರಿಯ ನಟ Sai Kumar ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ Jayaram, Deekshith Shetty, Sanjana Anand ಹಾಗೂ Gopal Krishna Deshpande ಅವರಂತಹ ಪ್ರತಿಭಾವಂತ ಕಲಾವಿದರು ಚಿತ್ರದ ತಾರಾಗಣದಲ್ಲಿ ಇದ್ದಾರೆ. ಹೀಗಾಗಿ ‘ಬೈಲ್’ ಕೇವಲ ಶಿವಣ್ಣರ ಸಿನಿಮಾ ಮಾತ್ರವಲ್ಲ, ಪವರ್‌ಫುಲ್ ಪಾತ್ರಗಳ ಸಮಾಗಮವಾಗಿರುವ ದೊಡ್ಡ ಸಿನೆಮ್ಯಾಟಿಕ್ ಅನುಭವವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

‘ಗೂಗ್ಲಿ’, ‘ರಾಣ ವಿಕ್ರಮ’, ‘ನಟಸಾರ್ವಭೌಮ’ ಸಿನಿಮಾಗಳ ಮೂಲಕ ತಮ್ಮದೇ ವಿಭಿನ್ನ ಶೈಲಿಯನ್ನು ಸಾಬೀತುಪಡಿಸಿರುವ ಪವನ್ ಒಡೆಯರ್ ಅವರಿಗೆ ಶಿವರಾಜ್‌ಕುಮಾರ್ ಜೊತೆಗಿನ ಇದು ಮೊದಲ ಸಿನಿಮಾ. ಇದೇ ಕಾರಣಕ್ಕೆ ಈ ಕಾಂಬಿನೇಷನ್ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ಶಿವಣ್ಣರನ್ನು ಸಂಪೂರ್ಣ ಹೊಸ ಅವತಾರದಲ್ಲಿ ತೋರಿಸುವುದಾಗಿ ನಿರ್ದೇಶಕರು ಈಗಾಗಲೇ ಹೇಳಿರುವುದರಿಂದ, ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಗರಿಗೆದರಿದೆ. ಇದೀಗ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಿರುವ ಹಿನ್ನೆಲೆಯಲ್ಲಿ, ಮುಂದಿನ ದೊಡ್ಡ ನಿರೀಕ್ಷೆಯಾಗಿರೋ ಟೀಸರ್ ಮೇಲೆಯೇ ನೆಟ್ಟಿದೆ. ಶೂಟಿಂಗ್ ಪೂರ್ಣಗೊಂಡ ತಕ್ಷಣ ಟೀಸರ್ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ‘ಬೇಲ್’ ಚಿತ್ರ ಕನ್ನಡ ಸಿನಿರಂಗದಲ್ಲಿ ಮತ್ತೊಂದು ಭಾರೀ ಸಂಚಲನ ಸೃಷ್ಟಿಸುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.

Leave a Reply

Your email address will not be published. Required fields are marked *