“ಬಾವ ಬಾವ” ಸೌಂಡ್‌ಗೆ ಸಿಟಿ ಲೈಟ್ಸ್ ಗೆ ಸಖತ್ ಜೋಶ್ – ದುನಿಯಾ ವಿಜಯ್ ಮಾಸ್ ಟಚ್ ಮತ್ತೆ ಕ್ಲಿಕ್! 🔥

ವಿನಯ್ ರಾಜ್‌ಕುಮಾರ್ ಅಭಿನಯದ ಜೊತೆಗೆ ಮೋನಿಷ ನಾಯಕಿಯಾಗಿ ಕಾಣಿಸಿಕೊಂಡಿರುವ, ದುನಿಯಾ ವಿಜಯ್ ನಿರ್ದೇಶನದ ಬಹುನಿರೀಕ್ಷಿತ ‘ಸಿಟಿ ಲೈಟ್ಸ್’ ಚಿತ್ರದ ಮೊದಲ ಹಾಡು “ಬಾವ ಬಾವ” ಇಂದು ಬಿಡುಗಡೆಗೊಂಡಿದೆ.

ರಾ ಆಕ್ಷನ್ ಥೀಮ್‌ನಲ್ಲಿ ಮೂಡಿ ಬರುತ್ತಿರುವ ಈ ಲವ್ ಸ್ಟೋರಿ ಚಿತ್ರಕ್ಕೆ ಈ ಹಾಡು ಮೊದಲ ಹಂತದಲ್ಲೇ ಗಟ್ಟಿಯಾದ ಇಂಪ್ಯಾಕ್ಟ್ ಕೊಟ್ಟಿದೆ.

ಹಾಡಿನ ಶೈಲಿ, ಮ್ಯೂಸಿಕ್ ಮತ್ತು ವೀಜುವಲ್ ಟ್ರೀಟ್—all combine ಆಗಿ ದುನಿಯಾ ವಿಜಯ್ ಗೆದ್ದಿರುವ ಮಾಸ್ ಜಾನರ್ ಅನ್ನು ಮತ್ತೊಮ್ಮೆ ನೆನಪಿಸುತ್ತದೆ. ಅಂಕಿತ್ ಕುಮಾರ್ ಬರೆದಿರುವ ಪಕ್ಕ ಲೋಕಲ್ ಸಾಲುಗಳಿಗೆ, ಚರಣ್ ರಾಜ್ ನೀಡಿರುವ ಮ್ಯೂಸಿಕ್ ಹೈ ಎನರ್ಜಿ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದೆ. ಹಾಡಿನ ಪ್ರತಿಯೊಂದು ಬೀಟ್‌ನಲ್ಲೂ ದುನಿಯಾ ವಿಜಯ್ ಟಚ್ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.

ದುನಿಯಾ ವಿಜಯ್ ಸಿನಿಮಾಗಳ ಹಾಡುಗಳು ಎಂದಿಗೂ ಸಿನಿಮಾಗೆ ಬೂಸ್ಟ್ ನೀಡುತ್ತವೆ ಎಂಬುದು ಹಳೆಯ ಅನುಭವ. ಅದೇ ಟ್ರೆಂಡ್ ಇಲ್ಲಿ ಕೂಡ ಮುಂದುವರಿದಿದ್ದು, “ಬಾವ ಬಾವ” ಹಾಡು ಚಿತ್ರಕ್ಕೆ ಮೊದಲ ಹಂತದಲ್ಲೇ ಪಾಸಿಟಿವ್ ವೈಬ್ ಸೃಷ್ಟಿಸಿದೆ.

ಒಟ್ಟಿನಲ್ಲಿ, ದುನಿಯಾ ವಿಜಯ್ – ಚರಣ್ ರಾಜ್ ಕಾಂಬಿನೇಷನ್ ಮೇಲೆ ಇದ್ದ ಜನರ ನಂಬಿಕೆ ಮತ್ತೊಮ್ಮೆ ಸಾಬೀತಾಗಿದೆ. “ಬಾವ ಬಾವ” ಹಾಡು ಇಬ್ಬರ ಅಭಿಮಾನಿಗಳಿಗೆ ಮಾತ್ರವಲ್ಲ, ಮಾಸ್ ಮ್ಯೂಸಿಕ್ ಪ್ರಿಯರಿಗೂ ಪಕ್ಕಾ ಮಜಾ ನೀಡುವಂತಾಗಿದೆ. 🎶🔥

Leave a Reply

Your email address will not be published. Required fields are marked *