
ಇಂಧನ ದರ ಏರಿಕೆಯಿಂದ ಉಂಟಾದ ಸಂಕಷ್ಟದಲ್ಲಿ ದಿನಸಿ ದುಡಿಮೆಯೇ ಕುಂಠಿತಗೊಂಡಿರುವ ಆಟೋ ಚಾಲಕರ ಬದುಕಿಗೆ ಬೆಳಕಾಗುವ ಹೆಜ್ಜೆಯನ್ನು ಇಟ್ಟಿದ್ದಾರೆ ಆಕ್ಷನ್ ಪ್ರಿನ್ಸ್ Dhruva Sarja 💥
ಪ್ರಸ್ತುತ ಗ್ಯಾಸ್ ಸಂಕಷ್ಟದಿಂದ ನರಳುತ್ತಿರುವ ಈ ವರ್ಗದ ನೆರವಿಗಾಗಿ ಅವರು ಉದಾರವಾಗಿ ₹25 ಲಕ್ಷ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಕೇವಲ ಮಾತಿನಲ್ಲಿ ಮಾತ್ರ ಅಲ್ಲ, ಕೃತಿಯಲ್ಲಿ ತೋರಿಸಿದ ಈ ಸಹಾಯ ನಿಜಕ್ಕೂ ಶ್ಲಾಘನೀಯ 👏
ಇದರ ಜೊತೆಗೆ ಒಂದು ವಿಡಿಯೋ ಮೂಲಕ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ ಧ್ರುವ ಸರ್ಜಾ, “ಸಾಮಾನ್ಯ ಜನರ ಸಂಕಷ್ಟವನ್ನು ಗಮನಿಸಿ ಶಾಶ್ವತ ಪರಿಹಾರ ಕಂಡುಹಿಡಿಯಬೇಕು” ಎಂಬ ಸಂದೇಶ ನೀಡಿದ್ದಾರೆ.
ಸಿನಿಮಾದಲ್ಲಿ ಮಾತ್ರವಲ್ಲ… ನಿಜ ಜೀವನದಲ್ಲೂ ಹೀರೋ ಯಾರು ಅಂತ ತೋರಿಸಿದ ಧ್ರುವ ಸರ್ಜಾ 🔥 ಇಂತಹ ಸಹಾನುಭೂತಿ, ದೊಡ್ಡ ಮನಸ್ಸು ಇರುವ ನಟರು ನಮ್ಮ ಸಮಾಜಕ್ಕೆ ನಿಜವಾದ ಶಕ್ತಿ! 💯