RESPONSIVE LEADERBOARD AD AREA
Film News

ಯೋಗರಾಜ್ ಭಟ್ ಮತ್ತೆ ಹಾರಿಸಲಿದ್ದಾರೆ ‘ಗಾಳಿಪಟ’…!!

ಯೋಗರಾಜ್ ಭಟ್ ತಮ್ಮ ‘ಗಾಳಿಪಟ’ ಚಿತ್ರದ ಸೀಕ್ವೆಲ್ ‘ಗಾಳಿಪಟ- 2’ ನಿರ್ದೇಶಿಸುತ್ತಿರುವ ಸುದ್ದಿ ಬಂದಿದೆ. ಈ ಚಿತ್ರದಲ್ಲಿ ಶರಣ್, ಪವನ್ ಕುಮಾರ್ ಮತ್ತು ರಿಷಿ ಅಭಿನಯಿಸಲಿದ್ದಾರೆ. ಮೊದಲ ‘ಗಾಳಿಪಟ’ದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಗಾಯಕ ರಾಜೇಶ್ ಕೃಷ್ಣನ್ ಮತ್ತು ದಿಗಂತ್ ನಟಿಸಿದ್ದರು.

ಕನ್ನಡ ಮೂಲದ ಗುಜರಾತಿ ಚಿತ್ರಗಳ ನಿರ್ಮಾಪಕ ಮಹೇಶ್ ದಾನಣ್ಣನವರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇವರು ನಿರ್ಮಿಸಿದ್ದ, ಆಗಸ್ಟ್ 2018 ರಲ್ಲಿ ಬಿಡುಗಡೆಯಾಗಿದ್ದ, ಗುಜರಾತಿ ಸಿನಿಮಾ ‘ಶು ತಾಯು’ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾವೆನಿಸಿತ್ತು .

‘ಗಾಳಿಪಟ -2’ ಕಥೆಗೂ ‘ಗಾಳಿಪಟ-1′ ರ ಕಥೆಗೂ ಯಾವುದೇ ಸಂಬಂಧವಿಲ್ಲ. ಇದು ಅದರ ಮುಂದುವರಿದ ಭಾಗ ಅಲ್ಲ ಆದರೆ ಚಿತ್ರದ ಥೀಮ್‌ ನಲ್ಲಿ ಸಾಮ್ಯತೆ ಇರಲಿದೆ’ ಎನ್ನುತ್ತಾರೆ ನಿರ್ದೇಶಕ ಯೋಗರಾಜ್ ಭಟ್.

ಚಿತ್ರದ ನಾಯಕಿಯರ ಮತ್ತು ಇತರ ಕಲಾವಿದರ ಆಯ್ಕೆಯಲ್ಲಿ ಚಿತ್ರ ತಂಡ ನಿರತವಾಗಿದೆ. ನಾಯಕಿಯರಲ್ಲಿ ಒಬ್ಬರು ಚೀನಾ ಅಥವಾ ಕೊರಿಯಾದ ಚೆಲುವೆ ಇರಲಿದ್ದಾರೆ ಎನ್ನುವ ಅಚ್ಚರಿ ಮಾಹಿತಿಯನ್ನು ಕೂಡ ಯೋಗರಾಜ್ ಭಟ್ ನೀಡಿದ್ದಾರೆ.

ಯೋಗರಾಜ್ ಭಟ್ ನಿರ್ದೇಶನದ ಸೂಪರ್ ಹಿಟ್ ಚಿತ್ರಗಳಲ್ಲೊಂದಾದ ‘ಗಾಳಿಪಟ’ ಚಿತ್ರ ಈಗಲೂ ತನ್ನ ಸುಮಧುರ ಗೀತೆಗಳು, ಲವಲವಿಕೆಯ ಅಭಿನಯ, ಹಾಸ್ಯಭರಿತ ಸನ್ನಿವೇಶಗಳು, ಕೊಡಚಾದ್ರಿಯ ಹಸಿರು ಮುಂತಾದ ಕಾರಣಗಳಿಂದ ಇಂದಿಗೂ ನೋಡಿಸಿಕೊಳ್ಳುವ ಸಿನಿಮಾ. ಈಗ ಅದರ ಸೀಕ್ವೆಲ್ ಬರುತ್ತಿದ್ದು ಯೋಗರಾಜ್ ಭಟ್ಟರ ಈ ಹೊಸ ಸಾಹಸ ಕುತೂಹಲ ಕೆರಳಿಸಿರುವುದಂತೂ ಸತ್ಯ..!

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top