RESPONSIVE LEADERBOARD AD AREA
Movie Articles

ಮೈತ್ರಿ ಲೋಕಕ್ಕೆ ಭೇಟಿ ಕೊಡಿ

ಈ ಮನುಷ್ಯನ ಮೇಲೆ ಮೊದಲಿಂದಾನು ನಂಗೊಂದ್ ಕಣ್ಣಿತ್ತು ರೀ ! ಖಾದಿ ಜುಬ್ಬ ಹೆಗಲ ಮೇಲೊಂದು ಬ್ಯಾಗು,ಹೊಳಪು ತುಂಬಿದ ಕಣ್ಣುಗಳು “every writer is a fighter” ಅಂತ ಹೇಳ್ತಾ ಕನ್ನಡ ಚಿತ್ರ ಪ್ರಪಂಚಕ್ಕೆ ಕಾಲಿಟ್ಟ ಅಪ್ಪಟ ಗ್ರಾಮೀಣ ಪ್ರತಿಭೆ

ಬೆಳ್ಕೆ ಮಹಾದೇವ ಗಿರಿರಾಜ್(ಬಿ.ಎಂ.ಗಿರಿರಾಜ್). ಒಬ್ಬ ಒಳ್ಳೆ ಬರಹಗಾರ ಮಾತ್ರ ಉತ್ತಮ ನಿರ್ದೇಶಕನಾಗಬಲ್ಲ ಎಂಬುದಕ್ಕೆ ಇವರು ಮತ್ತೊಂದು ಸೇರ್ಪಡೆ. ನವಿಲಾದವರು ಎಂಬ ಕಿರು ಚಿತ್ರದಿಂದ ಸಿನಿ ಪಯಣ ಶುರುವಾಗಿ ಇವರು ಸಧ್ಯಕ್ಕೆ ಪುನೀತ್ ರಾಜ್‌ಕುಮಾರ್ ಮತ್ತು ಮೋಹಾನ್‌ಲಾಲ್ ಎಂಬ ದಿಗ್ಗಜರ ಜೊತೆಗೂಡಿ ಸೂಕ್ಷ್ಮ ವಿಚಾರಗಳ “ಮೈತ್ರಿ” ಸರಕಾರ ನೀಡಲು ಸಿದ್ಧರಾಗಿದ್ದಾರೆ. ಗಾಂಧಿನಗರದ ಕೊಚ್ಚಿ,ಚಚ್ಚಿ,ಮಚ್ಚಿಗಳ ನಡುವೆ ಇವರದೊಂದು ನವಿಲಾದ ಮೈತ್ರಿ. ತಮ್ಮ ಹಿಂದಿನ ಚಿತ್ರದಿಂದ ಸಾಕಷ್ಟು ಪಾಠ ಕಲಿತಿರುವ ಗಿರಿರಾಜ್ ಅವರು ಒಳ್ಳೆ ಚಿತ್ರ ಮಾಡಿದರಷ್ಟೇ ಸಾಲದು, ಅದಕ್ಕೆ ತಕ್ಕ ಮಟ್ಟಿಗೆ ಪ್ರಚಾರ ಕೂಡ ನೀಡಬೇಕೆಂಬ ಸತ್ಯವನ್ನ ಬಹುಬೇಗ ಅರಿತಂತಿದೆ.

ಕನ್ನಡ ಚಿತ್ರಾಭಿಮಾನಿಗಳು ನಿರಂತರವಾಗಿ ಉತ್ತಮ ಚಿತ್ರಗಳನ್ನು ಸ್ವೀಕರಿಸಿ, ಪ್ರೋತ್ಸಾಹಿಸುತ್ತಾ ಬಂದಿದ್ಡಾರೆ. ಮೈತ್ರಿ ಲೋಕಕ್ಕೆ ಏಕೆ ಭೇಟಿ ನೀಡಬೇಕೆಂಬುದಕ್ಕೆ ಈ ಮೂರು ಕಾರಣಗಳು ಸಾಕು:

– ಮಾಸ್ ಅಭಿಮಾನಿಗಳಿಗೆ “ಪವರ್” ಕ್ಲಾಸ್ ಅಭಿಮಾನಿಗಳಿಗೆ “ಮೋಹನ್ ಲಾಲ್”. ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ದಿಗ್ಗಜರನ್ನು ಪ್ರಥಮ ಬಾರಿಗೆ ಒಟ್ಟಿಗೆ ತೆರೆಯ ಮೇಲೆ ನೋಡುವ ಅವಕಾಶ ನೀಡಿದ್ದಾರೆ ಗಿರಿರಾಜ್. ಇಳಯರಾಜ ಅವರ ಸಂಗೀತ ಮತ್ತು ಅತುಲ್ ಕುಲ್ಕರ್ಣೀ, ರವಿ ಕಾಳೆ ಅವರ ನಟನೆ ಕೂಡ ಚಿತ್ರಕ್ಕಿದೆ.

– ವಿಚಾರಗಳ ನೆರಳಲ್ಲಿ ಸದಾ ತಮ್ಮ ಕಥೆಯನ್ನು ಹೆಣೆಯುವ ನಿರ್ದೇಶಕರು, ಈ ಚಿತ್ರದಲ್ಲೂ ಕೂಡ ಅನೇಕ ಸೂಕ್ಷ್ಮ ಸಂಗತಿಗಳನ್ನು ಸರಳವಾಗಿ ತೆರೆಯ ಮೇಲೆ ತರುವುದಕ್ಕೆ ಪ್ರಯತ್ನಿಸಿದ್ದಾರೆ. ಕಡೆ ಪಕ್ಷ ಒಂದ್ ಸೀನ್ ಆದ್ರೂ ಕದ್ಡಿದಾರಾ ಅಂತ ಗಾಂಧಿನಗರಿಗರು ಹುಡುಕಲು ಪ್ರಯತ್ನಿಸಿದರೆ ಸೋಲುವುದು ಖಂಡಿತ. ಸ್ವಮೇಕ್ ಪ್ರಿಯರು ಮತ್ತು ಸಿನಿರಸಿಕರು ಈ ಚಿತ್ರ ನೋಡಬೇಕೆಂಬುದಕ್ಕೆ ಇದೂ ಕೂಡ ಕಾರಣ.

-ಕೊಂಚ ಬಿಡುವು ಮಾಡಿಕೊಂಡು ಕುಟುಂಬ ಸಮೇತಾರಾಗಿ ಯಾವುದೇ ಮುಜುಗರವಿಲ್ಲದೆ ಒಳ್ಳೆಯ ಕನ್ನಡ ಸಿನೆಮಾ ನೋಡಬೇಕೆಂಬ ಆಶಯದೊಂದಿಗೆ ನೀವು ಥಿಯೇಟರಿಗೆ ಹೋಗಬಹುದು

ಈ ಮೊದಲೇ ಹೇಳಿದಂತೆ ಉತ್ತಮ ಚಿತ್ರಗಳನ್ನು ಸದಾ ಪೋಷಿಸುತ್ತಾ ಬಂದಿರುವ ಸ್ವಾಭಿಮಾನಿ ಕನ್ನಡಿಗರು ಈ ಚಿತ್ರವನ್ನು ಕೂಡ ನೋಡಿ ಪ್ರೋತ್ಸಾಹಿಸುತಾರೆಂಬ ಆಶಯದೊಂದಿಗೆ…

ನಿಮ್ಮೊಳಗೊಬ್ಬ
ನಾನು

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top