RESPONSIVE LEADERBOARD AD AREA
Movie Articles

ಪೆಸಲ್ ಚಿತ್ರ ‘ಕೃಷ್ಣಲೀಲಾ’ಗೆ 50 ದಿನದ ಸಂಭ್ರಮ

ಶೆಶಾಂಕ್ ನಿರ್ದೇಶನದ ಅಜಯ್ ರಾವ್, ಮಯೂರಿ ಮುಖ್ಯ ಭೂಮಿಕೆಯ ಕೃಷ್ಣಲೀಲಾ ಚಿತ್ರ ಅರ್ಧ ಶತಕ ಬಾರಿಸಿದೆ. ಚಿತ್ರವು ಹಲವು ಅಡೆತಡೆಗಳನ್ನು ಎದುರಿಸಿಯೂ ಗೆಲುವಿನ ನಗೆ ಬೀರಿದೆ.

ಎಲ್ಲಾ ವರ್ಗದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯ ಪಡೆದು ಈಗ 50 ದಿನದ ಗಡಿ ದಾಟುತ್ತಿದೆ. ಚಿತ್ರರಂಗದ ಹಲವು ಗಣ್ಯರು ಚಿತ್ರವನ್ನು ನೋಡಿ ಕೊಂಡಾಡಿರುವುದನ್ನು ಇಲ್ಲಿ ಸ್ಮರಿಸಬಹುದು. ನಟ ಪುನೀತ್ ರಾಜಕುಮಾರ್, ಯಶ್ ಇವರಷ್ಟೇ ಅಲ್ಲದೆ ಗಣ್ಯರಾದ ರವಿಚಂದ್ರನ್, ಪಿ ಶೇಷಾದ್ರಿ, ನಾಗತಿಹಳ್ಳಿ ಚಂದ್ರಶೇಖರ್ ಮತ್ತಿತರರು ಮೆಚ್ಚಿಕೊಂಡಿದ್ದರು.
ಮೊಗ್ಗಿನ ಮನಸು, ಕೃಷ್ಣನ್ ಲವ್ ಸ್ಟೋರಿ ಅಂತಹ ಸೂಕ್ಷ್ಮ ಸದಭಿರುಚಿ ಚಿತ್ರಗಳನ್ನು ಕೊಟ್ಟು ಹಿರಿಯರು, ಕಿರಿಯರು, ಮನೆಮಂದಿಯೆಲ್ಲಾ ನೋಡಿ ಮೆಚ್ಚಿಕೊಳ್ಳುವಂತಹ ಚಿತ್ರಗಳನ್ನು ಕೊಟ್ಟವರು ಶಶಾಂಕ್. ಈಗ ಅವರು ಆ ಫಾರ್ಮ್ ಮರಳಿರುವುದು ಸಿನಿರಸಿಕರಲ್ಲಿ ಸಂತಸ ತಂದಿದೆ.

ಕೃಷ್ಣಲೀಲಾ ಈ ವರ್ಷ ತೆರೆಕಂಡ ಕನ್ನಡ ಚಿತ್ರಗಳಲ್ಲಿ ನಿಸ್ಸಂದೇಹವಾಗಿ ಅತ್ಯುತ್ತಮ ಚಿತ್ರಗಳಲ್ಲೊಂದು. ಮಧ್ಯಮ ವರ್ಗ ಜೀವನದ ಖುಷಿ, ಹತಾಶೆ ಅದರ ಸಾರವನ್ನು ಅತೀ ಸೂಕ್ಷ್ಮವಾಗಿ ಎಲ್ಲಿಯೂ ಯಾವುದೂ ಅತಿಯಾಗದಂತೆ ಎಲ್ಲದಕ್ಕೂ ತಲೆದೂಗಿಸಿ ನೋಡಿಸಿಕೊಂಡು ಹೋಗುವುದು ಚಿತ್ರದ ವಿಶೇಷತೆ. ಕೆಲವು ಕಡೆ ಎಲ್ಲಾ ಸನ್ನಿವೇಶಗಳು ನಾವೇ ಸುತ್ತಮುತ್ತ ನೋಡಿದ ಹಾಗೆ ಭಾಸವಾಗಿ, ಇನ್ನೂ ಕೆಲವು ನಮ್ಮಲ್ಲೇ ನಡೆದಿರುವುದು ಗೊತ್ತಾಗಿ ಪಾತ್ರಗಳಿಗೆ ಮನಸ್ಸು ಮರುಗಿ, ಮತ್ತೊಂದು ಕಡೆ ನಗೆಗಡಲಲ್ಲಿ ತೇಲಿಸಿ ಮನರಂಜಿಸುವ ಪರಿ ಅಪೂರ್ವವಾದುದು. ತಮ್ಮ ಕಲ್ಪನೆಯ ಕಥೆಯನ್ನು ಗಾಂಧಿನಗರದ ಸಿದ್ದ ಸೂತ್ರಗಳನ್ನು ಕೈ ಬಿಡದೆ ಎರಡನ್ನೂ ಹದವಾಗಿ ಬೆರೆಸಿ ಚಿತ್ರವನ್ನು ತೆರೆಮೇಲೆ ತಂದಿರುವುದು, ಕಥೆಯನ್ನು ಮನಮುಟ್ಟುವ ಹಾಗೆ ನಿರೂಪಿಸಿರುವುದು ಶೆಶಾಂಕ್ ಅವರ ಸೂಕ್ಷ್ಮ ಸಂವೇದನೆಗೆ ಹಿಡಿದಿರುವ ಕನ್ನಡಿ.

ಶೆಶಾಂಕ್ ಅವರ ಕನಸಿಗೆ ಸಾಥ್ ಕೊಟ್ಟು ಚಿತ್ರಕ್ಕೆ ಜೀವ ತುಂಬಿ, ಚಿತ್ರವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದಿರುವುದು ಚಿತ್ರದಲ್ಲಿನ ಪಾತ್ರಗಳು. ನಾಯಕ ಅಜಯ್ ರಾವ್ ರವರದು ಮನೋಜ್ಞ ಅಭಿನಯ. ತಮ್ಮ ಮೊದಲ ಚಿತ್ರದಲ್ಲೇ ತಮ್ಮ ಮುಗ್ಧ ನಗು,ಮಾತುಗಳಿಂದ ಭರವಸೆ ಮೂಡಿಸುವ ನಾಯಕನಟಿ ಮಯೂರಿ. ಇನ್ನು ಚಿತ್ರದ ಪೋಷಕ ಪಾತ್ರಗಳು ಅದರಲ್ಲೂ ರಂಗಾಯಣ ರಘು, ಅಚ್ಯುತ್ ಅವರುಗಳ ಪಾತ್ರಗಳು ಬಹುಕಾಲ ನೆನಪಿನಲ್ಲಿ ಉಳಿಯುವಂಥವು.

ತಮ್ಮ ಮೊದಲ ನಿರ್ಮಾಣದಲ್ಲಿ ಒಂದೊಳ್ಳೆ ಸದಭಿರುಚಿ ಚಿತ್ರವನ್ನು ಕೊಟ್ಟ ಅಜಯ್ ರಾವ್ ನಿಜವಾಗಿಯೂ ಪೆಸಲ್ ಮ್ಯಾನ್ ಎನಿಸಿಕೊಂಡಿದ್ದಾರೆ. ಕಾಡುವ ಪಾತ್ರಗಳು, ಮುದ ನೀಡುವ ನನ್ನಿವೆಶಗಳಿಂದ ಕೂಡಿದ ಈ ಚಿತ್ರ ಈ ದಿನ 50 ದಿನ ಪೂರೈಸುತ್ತಿದೆ. ಚಿತ್ರದ ಓಟ ಇನ್ನೂ ಮುಂದುವರಿಯಲಿ. ನಿರ್ದೇಶಕ ಶೆಶಾಂಕ್, ನಟ ನಿರ್ಮಾಪಕ ಅಜಯ್ ರಾವ್ ಹಾಗೂ ಚಿತ್ರದಲ್ಲಿ ತೊಡಗಿಸಿಕೊಂಡ ಎಲ್ಲಾ ನಟರು, ತಂತ್ರಜ್ಞರೆಲ್ಲರಿಗೂ ನಮ್ ಸಿನಿಮಾ ತಂಡದಿಂದ ಹೃತ್ಪೂರ್ವಕ ಅಭಿನಂದನೆಗಳು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top