RESPONSIVE LEADERBOARD AD AREA
Film News

ದರ್ಶನ್ ಅಭಿನಯದ ‘ರಾಬರ್ಟ್’ ನಲ್ಲಿ ಇರಲಿವೆ ಪಂಚಿಂಗ್ ಡೈಲಾಗ್ಸ್..!!

ದರ್ಶನ್ ಅಭಿನಯದ ಹೊಸ ಚಿತ್ರ ‘ರಾಬರ್ಟ್’ಗಾಗಿ ನಿರ್ದೇಶಕ ತರುಣ್ ಸುಧೀರ್ ವಿಶೇಷವಾದ ಸಂಭಾಷಣೆಗಳನ್ನು ಬರೆಯುವ ಸಲುವಾಗಿ ‘ಕೆಜಿಎಫ್’ ನ ಸಂಭಾಷಣೆಕಾರ ಚಂದ್ರಮೌಳಿ ಹಾಗೂ ಮಜಾ ಟಾಕೀಸ್ ಸರಣಿಯ ಸಂಭಾಷಣೆಕಾರ ರಾಜಶೇಖರ್ ಕೆಎಲ್ ಅವರನ್ನು ಕರೆ ತಂದಿದ್ದಾರೆ.

“ದರ್ಶನ್ ರಂತಹ ದೊಡ್ಡ ಸ್ಟಾರ್ ಗಳ ಬಾಯಿಯಲ್ಲಿ ಅತ್ಯುತ್ತಮ ಎನಿಸುವ ಸಂಭಾಷಣೆಗಳನ್ನು ಹೇಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಾರೆ. ಅಲ್ಲದೆ ದೊಡ್ಡ ನಟರ ಸಂಭಾಷಣೆಗಳು ಎಷ್ಟೋ ಜನರ ಬದುಕಿಗೆ ಸ್ಪೂರ್ತಿಯಾದ ಉದಾಹರಣೆಗಳಿವೆ. ಅರ್ಥಗರ್ಭಿತವಾದ ಸಂಭಾಷಣೆಗಳು ಜನರನ್ನು ಥಿಯೇಟರ್ ಕಡೆಗೆ ಆಕರ್ಷಿಸುವಂತಹ ಶಕ್ತಿಯನ್ನೂ ಹೊಂದಿವೆ ಆದ್ದರಿಂದ ಉತ್ತಮ ಸಂಭಾಷಣೆಗಾಗಿ ಹೆಚ್ಚು ಗಮನ ನೀಡುತ್ತಿದ್ದೇನೆ” ಎನ್ನುತ್ತಾರೆ ನಿರ್ದೇಶಕ ತರುಣ್ ಸುಧೀರ್.

ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ದರ್ಶನ್, ಹನುಮಂತನ ಅವತಾರದಲ್ಲಿರುವಂತೆ, ಪೋಸ್ಟರ್ ಅನ್ನು ಸಂಯೋಜಿಸಲಾಗಿದೆ. ಹನುಮಂತನ ಭುಜದ ಮೇಲೆ ಬಾಲಕನ ರೂಪದ ಶ್ರೀರಾಮನು ಕುಳಿತಿರುವ ಹಾಗೆ ಪೋಸ್ಟರ್ ಮೂಡಿಬಂದಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಸಖತ್ ಸದ್ದು ಮಾಡುತ್ತಿದೆ.

ಉಮಾಪತಿ ಫಿಲಂಸ್ ನಿರ್ಮಿಸುತ್ತಿರುವ ಈ ಚಿತ್ರದ ಮೊದಲ ಪೋಸ್ಟರ್ ಅನ್ನು ನವಂಬರ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಎರಡು ಕೈಗಳನ್ನು ಒಂದರ ಮೇಲೊಂದು ಇರಿಸಿ ಹಿನ್ನೆಲೆಯಲ್ಲಿ ರಾವಣನ ಫೋಟೋ ಯೋಜಿಸಲಾಗಿತ್ತು. ‘ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು ರಾವಣನ ಮುಂದೆ ಗೆಲ್ಲೋದು ಗೊತ್ತು’ ಎಂಬ ಸಬ್ ಟೈಟಲ್ ಎಂದು ಬರೆಯಲಾಗಿತ್ತು.

‘ರಾಬರ್ಟ್’ ಒಂದು ಕೌಟುಂಬಿಕ ಹಾಗೂ ಮಾಸ್ ಎಂಟರ್ಟೈನರ್. ಈ ಎರಡು ಎಲಿಮೆಂಟ್ ಗಳನ್ನು ಹದವಾಗಿ ಬೆರೆಸಿದ ಸಿನಿಮಾವಾಗಲಿದೆ. ಚಿತ್ರದಲ್ಲಿ ಯಾವುದೇ ಧಾರ್ಮಿಕ ಸಂಗತಿಗಳ ಉತ್ಪ್ರೇಕ್ಷೆ ಇಲ್ಲ. ರಾಮ, ರಹೀಮ್, ರಾಬರ್ಟ್ ಎಲ್ಲರೂ ಒಂದೇ. ದರ್ಶನ್ ಪೋಸ್ಟರ್ ನಲ್ಲಿ ಹನುಮಂತನಂತೆ ಕಾಣಿಸಿದರೂ, ಅವರು ಹನುಮಂತನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗದು” ಎನ್ನುತ್ತಾರೆ ತರುಣ್.

ಚಿತ್ರದ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು ಏಪ್ರಿಲ್ ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top