RESPONSIVE LEADERBOARD AD AREA
Movie Articles

ಡೈಲಾಗ್ ಟಾಂಗ್ ಎಂಬ ರಾಂಗ್ ಟ್ರೆಂಡ್

ಡೈಲಾಗ್‌ಗಳ ಮೂಲಕ ಒಬ್ಬ ಸ್ಟಾರ್ ಮತ್ತೊಬ್ಬ ಸ್ಟಾರ್‌ಗೆ ಕೌಂಟರ್ ಕೊಡುವ ಸಂಪ್ರದಾಯ ತೆಲುಗು ಚಿತ್ರರಂಗದಲ್ಲಿ ಜೋರಾಗಿಯೇ ಇದೆ. ಈಗ ಆ ಟ್ರೆಂಡ್‌ ಸ್ಯಾಂಡಲ್‌ವುಡ್‌ ನಲ್ಲಿಯೂ ಸೌಂಡು ಮಾಡುತ್ತಿದೆ.

ರಾಕಿಂಗ್ ಸ್ಟಾರ್ ಯಶ್ Mr&Mrs ರಾಮಾಚಾರಿಯಲ್ಲಿ ‘ನಾನು ಬರೋತನಕ ಬೆರೆಯವರ ಹವಾ, ಬಂದ ಮೇಲೆ ನನ್ನದೇ ಹವಾ’ ಅಂತ ಕಾಲೇಜ್ ಕ್ಯಾಂಪಸ್ಸಿನಲ್ಲಿ ಹೀರೋ ವಿಲನ್‌ಗೆ ಹೇಳಿದ ಡೈಲಾಗ್ ಸಿನಿಮಾ ಆಚೆಗೂ ಸುದ್ಧಿ ಮಾಡಿತು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಜಗ್ಗುದಾದಾ’ ಚಿತ್ರದಲ್ಲಿ “ಹವಾ ಹೀಟ್ ಇರೋವರ್ಗು ಮಾತ್ರ ಇರುತ್ತೆ… ಉಸ್ರು ನಿಂತ್ ಮೇಲೂ ಹೆಸರ್ ಇರ್ಬೇಕು ಅಂದ್ರೆ ಧಮ್ ಬೇಕಲೇ… ಎಂಬ ಡೈಲಾಗ್ ರಾಮಾಚಾರಿಗೆ ಕೊಟ್ಟಿರೋ ಕೌಂಟರ್ ಡೈಲಾಗ್ ಎಂಬಂತೆ ಭಾಸವಾಗಿ ಅದಕ್ಕೂ ಇದಕ್ಕೂ ಲಿಂಕ್ ಮಾಡಿ ಏನೇನೋ ಕಲ್ಪನೆ ಮಾಡ್ಕೊಂಡು ಜನ ಮಾತಾಡಿಕೊಂಡರು. ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ಬ್ಯಾಟ್ ವಿಕೆಟ್ ಡೈಲಾಗ್ ಗೆ ಕನೆಕ್ಟ್ ಆಗುವ ರೀತಿ ಮುಕುಂದ ಮುರಾರಿ ಚಿತ್ರದ ಪ್ರಚಾರ ನಿರತ ಉಪೇಂದ್ರ ಮತ್ತು ಸುದೀಪ್ ಅವರು ಆಡಿದ ಮಾತುಗಳು ಇದೇ ಕೌಂಟರ್ ಡೈಲಾಗ್ ವಾರ್ ನ ಮತ್ತೊಂದು ಮುಖದಂತೆ ಕಾಣಿಸಿದ್ದು ನಿಜ.

ಈಗ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಭರ್ಜರಿ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಇರುವ ಒಂದು ಡೈಲಾಗ್ ‘ನಂದೇ ಹವಾ’ ಡೈಲಾಗ್ ಗೆ ಕೊಟ್ಟಿರುವ ಟಾಂಗ್ ಎಂದು ಕೆಲ ಅಭಿಮಾನಿಗಳು ಅರ್ಥ ಮಾಡಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಹೊಡೆದ ಡೈಲಾಗ್ ಡೈಲಾಗ್ ಗಳು ಇನ್ನೊಬ್ಬರಿಗೆ ಕೌಂಟರ್ ನಂತೆ ಭಾಸವಾಗಿ ಮತ್ತೊಬ್ಬರು ಹೊಡೆದ ಡೈಲಾಗ್ ಆ ಕೌಂಟರ್ಗೆ ಕೌಂಟರ್ ನಂತೆ ಕಾಣಿಸುತ್ತಿರುವುದು ಕೆಟ್ಟ ಬೆಳವಣಿಗೆಯೋ? ತಪ್ಪುಕಲ್ಪನೆಯೋ? ತಿಳಿಯುತ್ತಿಲ್ಲ.

ಸಿನಿಮಾಗಳಲ್ಲಿ ಹೀರೋಗಳು ಹೀರೋಯಿಸಂ ಡೈಲಾಗ್ ಹೊಡೆಯೋದೆ ಅಭಿಮಾನಿಗಳನ್ನು ಖುಷಿ ಪಡಿಸಲು, ಅವರಿಗೆ ಮತ್ತಷ್ಟು ಹುರುಪು ತುಂಬಲು. ಆದರೆ ಅದನ್ನು ಮೀರಿ ಡೈಲಾಗ್ ಗಳು ಈ ರೀತಿ ತಪ್ಪು ಕಲ್ಪನೆಗಳಿಗೆ ಎಡೆ ಮಾಡಿಕೊಡುತ್ತಿರುವುದು ದುರಾದೃಷ್ಟಕರ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top