RESPONSIVE LEADERBOARD AD AREA
Film News

ಕೋಟಿಗೊಬ್ಬ3 ಶೂಟಿಂಗ್ ಶುರುವಾಯ್ತು

ಮಾರ್ಚ್ ಎರಡರಂದು ಮುಹೂರ್ತ ಆಚರಿಸಿಕೊಂಡಿದ್ದ ಕೋಟಿಗೊಬ್ಬ-೩ ಚಿತ್ರದ ಚಿತ್ರೀಕರಣ ಕಳೆದ ಬುಧವಾರ ಸದ್ದಿಲ್ಲದೆ ಶುರುವಾಗಿದೆ. ಮೊದಲ ಬಾರಿ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಶಿವ ಕಾರ್ತಿಕ್ ಕಿಚ್ಚ ಸುದೀಪ್ ಅವರು ಇಲ್ಲದ ಇತರ ದೃಶ್ಯಗಳ ಚಿತ್ರೀಕರಣವನ್ನು ನಿರ್ಮಾಪಕ ಸೂರಪ್ಪ ಬಾಬು ಅವರ ನಿರ್ಮಾಣ ನಿರ್ವಹಣೆಯ ವ್ಯವಸ್ಥೆಯೊಂದಿಗೆ ಸಶಕ್ತವಾಗಿ ಶುರು ಮಾಡಿಕೊಂಡಿದ್ದಾರೆ. ಸದ್ಯ ಕುಟುಂಬದೊಂದಿಗೆ ರಜಾ ದಿನಗಳ ಅತ್ಯುತ್ತಮ ಸಮಯವನ್ನು ಕಳೆಯುತ್ತಿರುವ ಕಿಚ್ಚ ಅವರು ಒಂದೆರಡು ದಿನಗಳ “ಅಂಬಿ ನಿಂಗ್ ವಯಸ್ಸಾಯ್ತೋ” ಚಿತ್ರದ ಚಿತ್ರೀಕರಣದ ನಂತರ ಕೋಟಿಗೊಬ್ಬ-೩ ಚಿತ್ರೀಕರಣಕ್ಕೆ ಸೇರಿಕೊಳ್ಳಲಿದ್ದಾರೆ.

ಕೃಷ್ಣ ನಿರ್ದೇಶಿಸುತ್ತಿರುವ ಪೈಲ್ವಾನ್ ಮತ್ತು ಕೋಟಿಗೊಬ್ಬ ಚಿತ್ರೀಕರಣ ಜೊತೆ ಜೊತೆಗೇ ನಡೆಯಲಿದ್ದು ಕಿಚ್ಚ ಸುದೀಪ್ ಅಭಿಮಾನಿಳಿಗೆ ಒಂದರ ಹಿಂದೊಂದು ಕಿಚ್ಚನ ಸಿನಿಮಾಗಳನ್ನು ನೋಡಿ ಸಂಭ್ರಮಿಸುವ ಅವಕಾಶವು ಲಭಿಸಲಿದೆ.

ಕೋಟಿಗೊಬ್ಬ-೩ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ಶೇಖರ್ ಚಂದ್ರು ಅವರ ಛಾಯಾಗ್ರಹಣವಿದೆ. ನಾಯಕಿಯ ಆಯ್ಕೆ ಬಿರುಸಾಗಿ ನಡೆಯುತ್ತಿದೆ. ಅತಿ ಶೀಘ್ರದಲ್ಲಿ ಕಿಚ್ಚನ ಜೊತೆ ನಟಿಸುವ ಆ ಸುಂದರಿ ಯಾರೆಂಬ ವಿಷಯ ಹೊರಬೀಳಲಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top