RESPONSIVE LEADERBOARD AD AREA
Film News

ಕಿಚ್ಚನ ‘ಬಿಲ್ಲಾ ರಂಗ ಬಾಷಾ’ ಗೆ ಮೂವರು ನಾಯಕಿಯರು..??

‘ಪೈಲ್ವಾನ’ ಚಿತ್ರದ ಹಾಡುಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಕಿಚ್ಚ ಸುದೀಪ ಅದು ಮುಗಿದ ನಂತರ ‘ಕೋಟಿಗೊಬ್ಬ-3’ ಚಿತ್ರದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸುದ್ದಿಯ ನಡುವೆ ‘ರಂಗಿತರಂಗ’ ಮತ್ತು ‘ರಾಜರಥ’ ಚಿತ್ರಗಳ ಖ್ಯಾತಿಯ ಅನೂಪ್ ಭಂಡಾರಿ, ಕಿಚ್ಚ ಸುದೀಪ ಅವರಿಗಾಗಿ ಹೊಸ ಚಿತ್ರವೊಂದನ್ನು ನಿರ್ದೇಶಿಸಲಿದ್ದು, ಚಿತ್ರಕ್ಕೆ ‘ಬಿಲ್ಲಾ ರಂಗ ಭಾಷಾ’ ಎಂದು ಹೆಸರಿಡಲಾಗಿದೆ.

ಈ ಚಿತ್ರದ ಟೈಟಲ್ ಅನ್ನು ನೋಡಿದಾಗ, ಕಿಚ್ಚ ಮೂರು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆಯೇ..?! ಎಂಬ ಕುತೂಹಲ ಉಂಟಾಗಿದೆ. ಹಾಗಾಗಿ ಚಿತ್ರದಲ್ಲಿ ಮೂವರು ನಾಯಕಿಯರು ಇರಬಹುದು ಎಂದು ಗಾಂಧಿನಗರಿಗರ ಅಂಬೋಣ. ಚಿತ್ರತಂಡ ಈ ಸುದ್ದಿಯನ್ನು ಖಚಿತಪಡಿಸಿಲ್ಲ. ಚಿತ್ರದ ತಾರಾಗಣದ ಆಯ್ಕೆ ಇನ್ನಷ್ಟೇ ಆರಂಭವಾಗಬೇಕಿದೆ.

”ಈಗ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, 2019 ರ ಮಧ್ಯಭಾಗದಲ್ಲಿ ಚಿತ್ರ ಪ್ರಾರಂಭವಾಗಲಿದೆ. ಸುದೀಪ್ ಅವರ ಡೇಟ್ಸ್ ಗಳನ್ನು ಹೊಂದಿಸಿಕೊಂಡು ಚಿತ್ರ ಪ್ರಾರಂಭಿಸಲಿದ್ದೇವೆ” ಎನ್ನುತ್ತಾರೆ ಅನೂಪ್ ಭಂಡಾರಿ‌.

ಈ ಚಿತ್ರವನ್ನು ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ಅವರ ಹೋಂ ಬ್ಯಾನರ್ ‘ಸುಪ್ರಿಯಾನ್ವಿ’ ಮೂವೀಸ್ ಮತ್ತು ಅನೂಪ್ ಭಂಡಾರಿ ಕೂಡಿ ನಿರ್ಮಿಸಲಿದ್ದಾರೆ.

ಸದ್ಯದಲ್ಲಿ ತೆಲುಗಿನ ‘ಸೈರಾ ನರಸಿಂಹ ರೆಡ್ಡಿ’ ಮತ್ತು ಕನ್ನಡದ ,’ಪೈಲ್ವಾನ್’ ಚಿತ್ರದಲ್ಲಿ ನಟಿಸುತ್ತಿರುವ ಕಿಚ್ಚ, ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್-3’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದುವರೆಗೆ ಸಹೋದರ ನಿರೂಪ್ ಭಂಡಾರಿ ಅವರಿಗಾಗಿ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ ಯಶಸ್ವಿಯಾಗಿರುವ ಅನೂಪ್ ಭಂಡಾರಿ, ಕಿಚ್ಚ ಸುದೀಪ್ ಅವರಿಗೆ ಚಿತ್ರ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top