RESPONSIVE LEADERBOARD AD AREA
Movie Articles

ಉಪ್ಪಿ2 ಅಬ್ಬರದೊಂದಿಗೆ ಮತ್ತೆ ಶುರುವಾಗಲಿದೆ ಉಪ್ಪಿ ಮೇನಿಯಾ

ನಮ್ಮ ಭಾರತೀಯ ಚಿತ್ರರಂಗ ತುಂಬಾ ದೊಡ್ಡದು.. ಇಲ್ಲಿ ತಯಾರಾಗುವಷ್ಟು ಸಿನಿಮಾಗಳು ಪ್ರಪಂಚದ ಬೇರೆ ಯಾವ ದೇಶದಲ್ಲೂ ತಯಾರಾಗುವುದಿಲ್ಲ.. ಕೋಟ್ಯಂತರ ಭಾರತೀಯರ ಅಭಿರುಚಿಗೆ ತಕ್ಕದಾದ ಸಿನಿಮಾಗಳನ್ನು ಮಾಡುವ ಸಾವಿರಾರು ನಿರ್ದೇಶಕರು ದೇಶದ ಎಲ್ಲಾ ಭಾಷೆಯ ಚಿತ್ರೋದ್ಯಮದಲ್ಲಿ ಹರಡಿಕೊಂಡಿದ್ದಾರೆ. ಇಂತಹ ಸಾವಿರಾರು ನಿರ್ದೇಶಕರಲ್ಲಿ ಹಲವಾರು ನಿರ್ದೇಶಕರು ಆಗಿಂದಾಗ್ಗೆ ಪ್ರೇಕ್ಷಕರ ಅಭಿರುಚಿಯ ಗ್ರಾಫು ನೋಡಿಕೊಂಡು, ಲೆಕ್ಕಾಚಾರ ಹಾಕಿಕೊಂಡು, ಖುಷಿಕೊಡುವ ಮನರಂಜನಾತ್ಮಕ ಸಿನಿಮಾಗಳನ್ನು ಮಾಡಿಕೊಂಡು ಹೆಸರು ಮಾಡಿಕೊಂಡಿದ್ದಾರೆ. ಮತ್ತೆ ಕೆಲವೇ ಕೆಲವು ನಿರ್ದೇಶಕರಿದ್ದಾರೆ, ಅವರು ಯಾವ ಟ್ರೆಂಡನ್ನೂ ಲೆಕ್ಕಿಸದೇ ತಮ್ಮದೇ ಆದ ರೀತಿಯ ಸಿನಿಮಾ ಮಾಡುತ್ತಾರೆ. ತಮ್ಮ ಆಲೋಚನೆಯನ್ನು ನಿಲುವನ್ನು, ಫಿಲೋಸಫಿಯನ್ನು ಸಿನಿಮಾದೊಳಗೆ ಸೇರಿಸುತ್ತಾರೆ, ಪ್ರೇಕ್ಷಕರ ಮನಸ್ಸನ್ನು ತಟ್ಟುತ್ತಾರೆ, ಹೇಳಬೇಕಾದ ವಿಷಯವನ್ನು ತಮಗೆ ಬೇಕಾದ ಹಾಗೆ ಪ್ರೇಕ್ಷಕರಿಗೆ ಹೇಳುತ್ತಾರೆ. ಟ್ರೆಂಡ್ ಕ್ರಿಯೇಟ್ ಮಾಡುತ್ತಾರೆ. ಅಂತಹ ಕೆಲವೇ ಕೆಲವು ನಿರ್ದೇಶಕರ ಸಾಲಿಗೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಸೇರುತ್ತಾರೆ. ಭಾರತೀಯ ಚಿತ್ರರಂಗದಲ್ಲೇ ತನ್ನದೇ ಆದ ಖ್ಯಾತಿ ಹೊಂದಿರುವ ಉಪ್ಪಿ ನಮ್ಮ ಕರುನಾಡ ಮಾಸ್ಟರ್ ಪೀಸ್..

ಉಪ್ಪಿ ಅನ್ನೋ ನಾನು – ಅಭಿಮಾನಿ ಅನ್ನೋ ನೀನುಗೋಸ್ಕರ ಮಾಡಿರೋ ಉಪ್ಪಿ2 ಚಿತ್ರದ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ, ಅಭಿಮಾನದ ಪರಾಕಾಷ್ಟೆಯ ಅನಾವರಣ ಈ ಚಿತ್ರದ ಮೂಲಕ ದೊಡ್ಡಮಟ್ಟದಲ್ಲಿ ಆಗುತ್ತಿದೆ.. ಅಭಿಮಾನಿಗಳ ಆಸೆಗಳ ತುಂಬು ಗರ್ಭಿಣಿಗೆ ಹೆರಿಗೆ ಸಮಯ, ಈ ನಾನು-ನೀನು ಸಮಾಗಮ ಶುಭ ಶುಕ್ರವಾರದಂದು ಆಗುವ ಆ ಶುಭಗಳಿಗೆಗೆ ಸಾಕ್ಷಿಯಾಗಲು ಆ ಸೂರ್ಯ ಚಂದ್ರ ರಾತ್ರಿಹಗಲು ಯಾವಾಗ ಆಗುತ್ತೋ ಅಂತ ಕಾಂಪಿಟೇಷನ್ ಮೇಲೆ ಕಾಯ್ತಾ ಇದಾರೆ..

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top